ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ವಾಸವಿ ಅಮ್ಮನವರ ಜಯಂತೋತ್ಸವದ ಅಂಗವಾಗಿ ಬ್ರೆಡ್, ಬಿಸ್ಕೆಟ್ ಹಾಗೂ ಓ ಆರ್ ಎಸ್ ವಿತರಣೆ

ವಾಸವಿ ಜಯಂತೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ನಗರದ ಶ್ರೀ ಪೇಟೆ ಆಂಜನೇಯ ಸ್ವಾಮಿ ಹಾಗೂ ಶ್ರೀ ವಾಸವಿ ಅಮ್ಮನವರ ದೇವಾಲಯದಲ್ಲಿ  ಶ್ರೀ ವಾಸವಿ ಜಯಂತಿ ಸೇವಾ ಸಮಿತಿಯಿಂದ ಬುಧವಾರ ಬೆಳಗ್ಗೆಯಿಂದಲೂ ಶ್ರೀ ಪೇಟೆಆಂಜನೇಯ ಹಾಗೂ ಶ್ರೀ ವಾಸವಿ ಅಮ್ಮನವರಿಗೆ  ವಿವಿಧ ಪೂಜಾಧಿಗಳು ನಡೆದವಲ್ಲದೆ ಆಸ್ಪತ್ರೆಯ ಒಳರೋಗಿಗಳಿಗೆ ಸೇವಾ ಕಾರ್ಯ ಕ್ರಮಗಳು  ಅತ್ಯಂತ ವ್ಯವಸ್ಥಿತವಾಗಿ ನಡೆದವು

ಬ್ರೆಡ್, ಬಿಸ್ಕೆಟ್ ಹಾಗೂ ಓ ಆರ್ ಎಸ್ ವಿತರಣೆ

ಶ್ರೀ ವಾಸವಿ  ಜಯಂತೋತ್ಸವದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆ, ತಾಯಿಮಕ್ಕಳ ಆಸ್ಪತ್ರೆಗಳಲ್ಲಿನ ಒಳ ರೋಗಿಗಳು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ  ಬ್ರೆಡ್,ಬಿಸ್ಕೆಟ್ ಹಾಗೂ ಒಆರ್‌ಎಸ್ ಪಾನೀಯ ವಿತರಣೆ ಮಾಡಲಾಯಿತು.

Profile Ashok Nayak May 7, 2025 11:23 PM

ಚಿಕ್ಕಬಳ್ಳಾಪುರ:  ಶ್ರೀ ವಾಸವಿ  ಜಯಂತೋತ್ಸವದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆಗಳಲ್ಲಿನ ಒಳ ರೋಗಿಗಳು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ ಬ್ರೆಡ್, ಬಿಸ್ಕೆಟ್ ಹಾಗೂ ಒಆರ್‌ಎಸ್ ಪಾನೀಯ ವಿತರಣೆ ಮಾಡಲಾಯಿತು. ವಾಸವಿ ಜಯಂತೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ನಗರದ ಶ್ರೀ ಪೇಟೆ ಆಂಜನೇಯ ಸ್ವಾಮಿ ಹಾಗೂ ಶ್ರೀ ವಾಸವಿ ಅಮ್ಮನವರ ದೇವಾಲಯದಲ್ಲಿ  ಶ್ರೀ ವಾಸವಿ ಜಯಂತಿ ಸೇವಾ ಸಮಿತಿಯಿಂದ ಬುಧವಾರ ಬೆಳಗ್ಗೆಯಿಂದಲೂ ಶ್ರೀ ಪೇಟೆಆಂಜನೇಯ ಹಾಗೂ ಶ್ರೀ ವಾಸವಿ ಅಮ್ಮನವರಿಗೆ  ವಿವಿಧ ಪೂಜಾಧಿಗಳು ನಡೆದವಲ್ಲದೆ ಆಸ್ಪತ್ರೆಯ ಒಳರೋಗಿಗಳಿಗೆ ಸೇವಾ ಕಾರ್ಯ ಕ್ರಮಗಳು  ಅತ್ಯಂತ ವ್ಯವಸ್ಥಿತವಾಗಿ ನಡೆದವು.

ಇದನ್ನೂ ಓದಿ: Chikkaballapur News: ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆಗ್ರಹಿಸಿ ರೈತಸಂಘದ ಪ್ರತಿಭಟನೆ

ಅದರಂತೆ ವಾಸವಿ ಜಯಂತೋತ್ಸವ ಪ್ರಯುಕ್ತ  ಇಲ್ಲಿನ ಚಿಟ್ಲೂರು ಶ್ರೀಮತಿ ದಿವಂಗತ ರಾಮ ರತ್ನಮ್ಮ ಮತ್ತು ಶ್ರೀ ಚಿಟ್ಲೂರು ದಿವಂಗತ ರಾಧಾಕೃಷ್ಣಯ್ಯಶೆಟ್ಟಿ ಅವರ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಶ್ರೀ ಚಿಟ್ಲೂರು ಸಿ.ಆರ್. ಚಂದ್ರ ರವರ ಸುಪುತ್ರ ಶ್ರೀಮತಿ ಕಾವ್ಯ ಮತ್ತು ಶ್ರೀ ಸಿ.ಸಿ.ಕಾರ್ತಿಕ್ ಇವರ ಕುಟುಂಬ ವರ್ಗದಿಂದ ಬ್ರೆಡ್, ಬಿಸ್ಕೆಟ್ ಓ.ಆರ್.ಎಸ್. ಪ್ರತಿ ವರ್ಷದಂತೆ ಈ ವರ್ಷವೂ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಾಸವಿ ಜಯಂತಿ ಸೇವಾ ಸಮಿತಿ ಅಧ್ಯಕ್ಷ ವಿ.ಎ.ಶ್ರೀನಿವಾಸ್ ಶೆಟ್ಟಿ, ಉಪಾಧ್ಯಕ್ಷ ಬಿ.ಎ.ಪ್ರಭಾಕರ್,ಕಾರ್ಯದರ್ಶಿ ಇ.ಎ.ವಿಶ್ವನಾಥ, ನಿರ್ದೇಶಕರಾದ ಕೃಷ್ಣಮೂರ್ತಿ, ಶ್ರೀಧರ್,ಕೆ.ಎಂ.ನರೇಶ್, ಸಿ.ಎ.ಅಮರ್, ಡಿ.ಎನ್.ಸುಧೀರ್, ವಿ.ಎಸ್.ಕಿರಣ್ ಕುಮಾರ್, ವಿ.ಎಸ್. ಪ್ರದೀಪ್, ಬಿ.ಪಿ.ಸ್ವರೂಪ್, ವಿ.ವಿ.ಗಣೇಶ್ .ಪಿ.ಚಂದ್ರಕುಮಾರ್, ಸಿ.ಆರ್. ಕಾರ್ತಿಕ್, ಸಿ.ಆರ್.ಚಂದ್ರ‌ ರಾಜು, ವೆಂಕಟೇಶ್ ಬಾಬು, ಗಣೇಶ್, ಶ್ರೀಕಾಂತ್, ದೀಪು, ಕೌಶಲ್, ರಾಜಗೋಪಾಲ್, ವಾಸವಿ ಜಯಂತಿ ಸೇವಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಮುದಾಯದ ಮತ್ತಿತರರು ಇದ್ದರು.