ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ: ಜಿಲ್ಲಾಧಿಕಾರಿ ಜಿ ಪ್ರಭು

2025-26ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ 7392 ರೈತರು ನೋಂದಣಿ ಮಾಡಿಕೊಂಡು ಸು 1,57,428 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲು ರೈತರು ಇಚ್ಛೆ ಪಟ್ಟಿರುತ್ತಾರೆ. ಅದರಂತೆ 6 ತಾಲೂಕಗಳಲ್ಲಿ 6 ತಾಲೂಕು ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಖರೀದಿಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಮಾಡಿಕೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ

-

Ashok Nayak
Ashok Nayak Feb 14, 2026 11:24 PM

ಚಿಕ್ಕಬಳ್ಳಾಪುರ: ಬೆಂಬಲ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಜಿಲ್ಲೆಯ ರೈತರಿಂದ ಫೆ.16ರಿಂದ ರಾಗಿ ಖರೀದಿ ಮಾಡಲಾಗುತ್ತಿದ್ದು, ರೈತರು ತಮ್ಮ ತಾಲೂಕು ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಜಿ ಪ್ರಭು ಅವರು ರೈತರಲ್ಲಿ ಮನವಿ ಮಾಡಿದರು.

ತಾಲೂಕಿನ ವರದಹಳ್ಳಿಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಮ್ಮುಖದಲ್ಲಿ  ಸೋಮವಾರ ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಸ್ಥಳೀಯ ಜನಪ್ರತಿನಿಧಿಗಳು ಈವೇಳೆ ಸಹ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: Chikkaballapur News: ಸಾರ್ವತ್ರಿಕ ಆರೋಗ್ಯ ಹಕ್ಕಿನ ಜಾಥಾ ಆಂದೋಲನ ಯಶಸ್ವಿಗೊಳಿಸಲು ಸಾಕ್ ಸಂಘಟನೆಯ ಶ್ರೀರಂಗಾಚಾರಿ ಮನವಿ

2025-26ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ 7392 ರೈತರು ನೋಂದಣಿ ಮಾಡಿಕೊಂಡು ಸು 1,57,428 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲು ರೈತರು ಇಚ್ಛೆ ಪಟ್ಟಿರುತ್ತಾರೆ. ಅದರಂತೆ 6 ತಾಲೂಕಗಳಲ್ಲಿ 6 ತಾಲೂಕು ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಖರೀದಿಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಮಾಡಿಕೊಂಡಿದೆ.

ರಾಗಿ ಖರೀದಿ ವೇಳೆ ಯಾವುದೇ ತಾಂತ್ರಿಕ ಅಡೆತಡೆಗಳು ಉದ್ಭವವಾಗದಂತೆ ವ್ಯವಸ್ಥೆ ಮಾಡಲಾಗಿದೆ, ರಾಗಿ ಖರೀದಿ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಸದರಿ ಕೇಂದ್ರಗಳಲ್ಲಿಯೇ ರೈತರ ಅನುಕೂಲಕ್ಕಾಗಿ ಈ ಬಾರಿ ಕ್ಯಾಂಟೀನ್ ವ್ಯವಸ್ಥೆ ವಿಶ್ರಾಂತಿಗೃಹ ವ್ಯವಸ್ಥೆಯನ್ನು ಸಹ ಕಲ್ಪಿಸಿದ್ದು ಸೂಕ್ತ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ತೂಕ ಮತ್ತು ಅಳತೆಗಾಗಿ ಮಾಪನ ಯಂತ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು, ರಾಗಿ ಖರೀದಿಗೆ  ಅತ್ಯಗತ್ಯವಾಗಿ ಬೇಕಾಗಿರುವ ಗೋಣಿಚೀಲದ ದಾಸ್ತಾನು ಜಿಲ್ಲೆಯಲ್ಲಿ ಸಾಕಷ್ಟಿದೆ ಎಂದು ಮಾಹಿತಿ ನೀಡಿದರು.

ರೈತರಲ್ಲಿ ಹೆಚ್ಚಿನ ಆತಂಕ ಬೇಡ?

ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸಮಕ್ಷಮದಲ್ಲಿಯೇ ರಾಗಿಯನ್ನು ತೂಕ ಮಾಡಿ ಪಡೆಯಲಾಗುತ್ತದೆ. ಯಾವುದೇ ರೈತರಿಗೆ ತಮ್ಮ ರಾಗಿಯನ್ನು ಬೇರೆ ಕಡೆ ತೂಕ ಮಾಡಲು ಇಚ್ಛೆಪಟ್ಟರೆ ಅಂತಹವರ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಅಧಿಕೃತ 14 ವೇ ಬ್ರಿಡ್ಜ್ ಗಳನ್ನು ಈ ವರ್ಷ ಗುರುತಿಸಲಾಗಿದ್ದು ಸದರಿ ವೇ ಬ್ರಿಡ್ಜ್ ಗಳಲ್ಲಿ ರಾಗಿಯನ್ನು  ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು. ಈಗಾಗಲೇ ದಿನಾಂಕ ವಾರು ವೇಳಾಪಟ್ಟಿಯಂತೆ ರಾಗಿ ಖರೀದಿಸಲು ರೈತರಿಗೆ ಟೋಕನ್ ನೀಡಲಾಗಿದ್ದು, ಅದರಂತೆ ರೈತರು ರಾಗಿಯನ್ನು ಯಾವುದೇ ಹೆಚ್ಚಿನ ಆತಂಕಕ್ಕೆ ಒಳಗಾಗದೆ ಜಿಲ್ಲಾಡಳಿತ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ  ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್, ಆಹಾರ ನಿರೀಕ್ಷಕ ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

*
ರಾಗಿ ಖರೀದಿ ಕೇಂದ್ರಗಳ ತಾಲೂಕುವಾರು ವಿಳಾಸ ಸಹಿತ ವಿವರ ಕೆಳಕಂಡಂತಿದೆ. ಎ.ಪಿಎಂ.ಸಿ ಪ್ರಾಂಗಣ ಬಾಗೇಪಲ್ಲಿ , ಎಸ್.ಡಬ್ಲ್ಯೂ.ಸಿ, ವರದಹಳ್ಳಿ ಚಿಕ್ಕಬಳ್ಳಾಪುರ ,
ಎಸ್.ಡಬ್ಲ್ಯೂ.ಸಿ, ಕಾಗತಿ ಚಿಂತಾಮಣಿ,  ಎಸ್.ಡಬ್ಲ್ಯೂ.ಸಿ, ಎ.ಪಿಎಂ.ಸಿ ಪ್ರಾಂಗಣ, ಬಾಲೇನಹಳ್ಳಿ ಬೀಚಗಾನಹಳ್ಳಿ ಪೋ.ಗುಡಿಬಂಡೆ,ಎಸ್.ಡಬ್ಲ್ಯೂ.ಸಿ, ವರದಹಳ್ಳಿ ಶಿಡ್ಲಘಟ್ಟ , ಖರೀದಿ ಅಧಿಕಾರಿಗಳ ಹೆಸರು ಮೊಬೈಲ್ ನಂಬರ್ ಮಂಜುನಾಥ್ ವೈ ಜಿ,-

9008132673 ಬಾಗೇಪಲ್ಲಿ,  ಸುಧಾಕರ್.ಡಿ- 9008132673-ಚಿಕ್ಕಬಳ್ಳಾಪುರ,, ವೀಣಾ ಹೆಚ್.ಎನ್- 9008132673-ಚಿಂತಾಮಣಿ, ಮಂಜುನಾಥ್ ವೈ ಜಿ,- 9008132673-ಗೌರಿ ಬಿದನೂರು, ಮಂಜುನಾಥ್ ವೈ.ಜಿ- 9008132673-ಗುಡಿಬಂಡೆ, ಸುಧಾಕರ್ ಡಿ- 8892288961-ಶಿಡ್ಲಘಟ್ಟ.