Chikkaballapur News: ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ
ಛಾಯಾಗ್ರಾಹಕರು ಇಂದು ತೀವ್ರವಾದ ಸಂಕಷ್ಟದಲ್ಲಿದ್ದಾರೆ.ಸರಕಾರ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿ ಅದರ ಮುಖೇನ, ಛಾಯಾಗ್ರಾಹಕರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗಬೇಕು. ಇದಾದಲ್ಲಿ ಛಾಯಾಗ್ರಾಹಕ ಸಮುದಾಯಕ್ಕೆ ಸರಕಾರದಿಂದ ಬರಬೇಕಾದ ಎಲ್ಲಾ ಸೌಲತ್ತುಗಳನ್ನು ಒದಗಿಸಲು ಸಾಧ್ಯವಾಗಲಿದೆ

೧೭ ವರ್ಷಗಳ ತರುವಾಯ ಜಿಲ್ಲಾ ಕೇಂದ್ರದಲ್ಲಿ ವಿಶ್ವಛಾಯಾಗ್ರಾಹಕರ ದಿನಾಚರಣೆ ಆಗುತ್ತಿರುವುದು ಸಂತೋಷ ತಂದಿದೆ.ಎಲ್ಲಾ ಸದಸ್ಯರ ನೆರವಿನಿಂದ ಈ ಕಾರ್ಯಕ್ರಮ ಆಗುತ್ತಿದ್ದು ಸರಕಾರ ಛಾಯಾಗ್ರಾಹಕರ ಹಿತಕಾಯುವ ಉದ್ದೇಶದಿಂದ ಅಕಾಡೆಮಿ ಸ್ಥಾಪಿಸಬೇಕು ಎಂದು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹಿಸಿದರು. -

ಚಿಕ್ಕಬಳ್ಳಾಪುರ : ೧೭ ವರ್ಷಗಳ ತರುವಾಯ ಜಿಲ್ಲಾ ಕೇಂದ್ರದಲ್ಲಿ ವಿಶ್ವಛಾಯಾಗ್ರಾಹಕರ ದಿನಾಚರಣೆ ಆಗುತ್ತಿರುವುದು ಸಂತೋಷ ತಂದಿದೆ.ಎಲ್ಲಾ ಸದಸ್ಯರ ನೆರವಿನಿಂದ ಈ ಕಾರ್ಯಕ್ರಮ ಆಗುತ್ತಿದ್ದು ಸರಕಾರ ಛಾಯಾಗ್ರಾಹಕರ ಹಿತಕಾಯುವ ಉದ್ದೇಶದಿಂದ ಅಕಾಡೆಮಿ ಸ್ಥಾಪಿಸಬೇಕು ಎಂದು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಛಾಯಾಗ್ರಾಹಕರು ಇಂದು ತೀವ್ರವಾದ ಸಂಕಷ್ಟದಲ್ಲಿದ್ದಾರೆ.ಸರಕಾರ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿ ಅದರ ಮುಖೇನ, ಛಾಯಾಗ್ರಾಹಕರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗಬೇಕು.ಇದಾದಲ್ಲಿ ಛಾಯಾಗ್ರಾಹಕ ಸಮುದಾಯಕ್ಕೆ ಸರಕಾರದಿಂದ ಬರಬೇಕಾದ ಎಲ್ಲಾ ಸೌಲತ್ತುಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ.ವಿ.ನವೀನ್‌ಕಿರಣ್ ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ೧೭ ವರ್ಷಗಳ ನಂತರ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನೀವು ತೆಗೆಯುವ ಒಂದಿ ಚಿತ್ರ ಸಾವಿರ ಕಥೆಯನ್ನು ಹೇಳುವ ಸಾಮರ್ಥ್ಯ ಪಡೆಯುತ್ತದೆ.ಪೋಟೋ ಕೇವಲ ಪೋಟೋ ಆಗಿ ಉಳಿಯದೆ, ಪರಂಪರೆಯ ಕೊಂಡಿಯಾಗಿ, ಇತಿಹಾಸದ ಸಾಕ್ಷಿಪ್ರಜ್ಞೆಯಾಗಿ ಉಳಿಯುತ್ತದೆ ಎಂದರು.
ಆಧುನಿಕ ಜಗತ್ತಿನಲ್ಲಿ ಎಲ್ಲರೂ ಛಾಯಾಗ್ರಾಹಕರೇ ಆಗಿದ್ದಾರೆ.ಆದರೆ ವೃತಿನಿರತ ಛಾಯಾಗ್ರಾಹಕರ ಕೌಶಲ್ಯ ಮೊಬೈಲ್ ಪೋಟೋಗ್ರಾಫರ್‌ಗಳಿಗೆ ಬರಲು ಸಾಧ್ಯವಿಲ್ಲ. ನಿರುದ್ಯೋಗ ನಿವಾರಣೆಯಲ್ಲಿ ಛಾಯಾಗ್ರಾಹಕ ಬಳಗಕ್ಕೂ ತಮ್ಮದೇ ಆದ ಪಾಲಿದೆ.ಇಲ್ಲಿರುವವರು ಕೆಲವರು ಛಾಯಾಗ್ರಾಹಕ ರಾಗಿದ್ದರೆ, ಬಹಳಷ್ಟು ಮಂದಿ ಮಾಲಿಕರೂ ಇದ್ದಾರೆ.ಉಧ್ಯಮಿಗಳೂ ಇದ್ದಾರೆ. ನಿಮ್ಮೆಲ್ಲಾ ಆಶೋತ್ತರಗಳು ಈಡೇರಲಿ, ನಿಮ್ಮೊಂದಿಗೆ ನಾನು ಸದಾ ಇರಲಿದ್ದೇನೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಛಾಯಾಗ್ರಾಹಕರು ಒಗ್ಗಟ್ಟು ಪ್ರದರ್ಶನ ಮಾಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಬ್ರಹ್ಮಚಾರಿ, ರೂಪಸಿ ರಮೇಶ್.ಜಿ, ಕೃಷ್ಣಾಚಾರಿ, ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷರು ಧನಪಾಲ್ ಗುಪ್ತ, ಕಾರ್ಯದರ್ಶಿ ಶ್ರೀನಿವಾಸ ಆಚಾರಿ, ಖಜಾಂಚಿ ನಾಗರಾಜ್,ಕೆಪಿಎ ಅಧ್ಯಕ್ಷರಾದ ನಾಗೇಶ್. ಜಿಲ್ಲಾ ಸಲಹೆಗಾರ ಮಿಲ್ಟ್ರಿ ಮಂಜುನಾಥ್. ಮೂರ್ತಿ, ಉಪಾಧ್ಯಕ್ಷರು ನಂಜುAಡ ಬಾಬು. ಮಾರಪ್ಪ. ಸಂಚಾಲಕರು ಎಸ್ ಲೋಕೇಶ್. ಅ ಮಂಜುನಾಥ್. ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಮಾರ್. ರಾಮಚಂದ್ರ. ಸುರೇಂದ್ರ. ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಐದು ತಾಲೂಕಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.