Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು
ಜಾನುವಾರುಗಳ ಹೆರಿಗೆ ಸಮಸ್ಯೆ, ಹೊಟ್ಟೆ ಉಬ್ಬರ, ಕಾಲುಮುರಿತ, ವಿಷ ಪ್ರಾಶನ, ಮೈ ಹೊರ ಬೀಳು ವುದು ಸೇರಿದಂತೆ ಇನ್ನಿತರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲೆಯ ರೈತರು ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತುರ್ತು ಚಿಕಿತ್ಸೆ ಪಡೆಯಬಹುದು. ತಜ್ಞ ವೈದ್ಯರು ತಮ್ಮ ಮನೆ ಬಾಗಿಲಿಗೆ ಸಂಚಾರಿ ವಾಹನದಲ್ಲಿ ಆಗಮಿಸಿ ಶೀಘ್ರ ಚಿಕಿತ್ಸೆ ನೀಡಲಿದ್ದಾರೆ. ಈ ಕಾರ್ಯಕ್ಕಾಗಿ 8 ತಾಲ್ಲೂಕುಗಳಲ್ಲಿ 8 ಸಂಚಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಪಶು ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ಟೋಲ್ ಪ್ರೀ ದೂರವಾಣಿ 1962 ಸಂಖ್ಯೆಗೆ ರೈತರು ಕರೆ ಮಾಡಿ ಮನೆ ಬಾಗಿಲಿಗೆ ಪಶು ಆರೋಗ್ಯ ಸೇವೆ ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು. -
ತುರ್ತು ಪಶು ಆರೋಗ್ಯ ಸೇವೆಗಳಿಗೆ 1962ಗೆ ಕರೆ ಮಾಡಲು ಮನವಿ
ಚಿಕ್ಕಬಳ್ಳಾಪುರ : ಪಶು ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ಟೋಲ್ ಪ್ರೀ ದೂರವಾಣಿ 1962 ಸಂಖ್ಯೆಗೆ ರೈತರು ಕರೆ ಮಾಡಿ ಮನೆ ಬಾಗಿಲಿಗೆ ಪಶು ಆರೋಗ್ಯ ಸೇವೆ ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಮತ್ತು ಸಂಚಾರಿ ಪಶುಚಿಕಿತ್ಸಾ ವಾಹನ ಘಟಕಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಜಾನುವಾರುಗಳ ಹೆರಿಗೆ ಸಮಸ್ಯೆ, ಹೊಟ್ಟೆ ಉಬ್ಬರ, ಕಾಲುಮುರಿತ, ವಿಷ ಪ್ರಾಶನ, ಮೈ ಹೊರ ಬೀಳುವುದು ಸೇರಿದಂತೆ ಇನ್ನಿತರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲೆಯ ರೈತರು ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತುರ್ತು ಚಿಕಿತ್ಸೆ ಪಡೆಯಬಹುದು. ತಜ್ಞ ವೈದ್ಯರು ತಮ್ಮ ಮನೆ ಬಾಗಿಲಿಗೆ ಸಂಚಾರಿ ವಾಹನದಲ್ಲಿ ಆಗಮಿಸಿ ಶೀಘ್ರ ಚಿಕಿತ್ಸೆ ನೀಡಲಿದ್ದಾರೆ. ಈ ಕಾರ್ಯಕ್ಕಾಗಿ 8 ತಾಲ್ಲೂಕುಗಳಲ್ಲಿ 8 ಸಂಚಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಸೇವೆ ದೊರೆಯಲು ರೈತರು ಕರೆಯನ್ನು ಮಾಡಿದರೆ ಸಾಕು, ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 2ನೇ ಹಂತದ ಲಸಿಕಾ ಅಭಿಯಾನ ಜಿಲ್ಲೆಯಲ್ಲಿ ಏ.23ರಿಂದ ಮೇ 22ರವರೆಗೆ ಒಂದು ತಿಂಗಳು ಕಾಲ ನಡೆಯಲಿದೆ.
ಜಿಲ್ಲೆಯಲ್ಲಿನ ದನ, ಎಮ್ಮೆಗಳಿಗೆ ರೈತರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾಲುಬಾಯಿ ರೋಗ ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಕಾಲುಬಾಯಿ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅತಿ ಬೇಗನೆ ಒಂದು ರಾಸುವಿನಿಂದ ಇನ್ನೊಂದಕ್ಕೆ ಗಾಳಿಯ ಮೂಲಕ ಹರಡು ತ್ತದೆ. ಆದ್ದರಿಂದ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆಯನ್ನು ಅನಿವಾರ್ಯವಾಗಿ ಹಾಕಲಾಗುತ್ತಿದೆ. ಈ ಬಗ್ಗೆ ಯಾವ ದಿನಾಂಕ, ಯಾವ ಗ್ರಾಮಗಳಿಗೆ ಲಸಿಕಾಕಾರರು ಬರಲಿದ್ದಾರೆ ಎಂಬುದನ್ನು ಡಂಗೂರದ ಮೂಲಕ ಪ್ರಚಾರ ಮಾಡಲು ಹಾಗೂ ಹಾಲಿನ ಡೈರಿಗಳಲ್ಲಿ ರೈತರನ್ನು ಸಂಪರ್ಕಿಸಿ ಜಾಗೃತಿ ಮೂಡಿಸಲು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ದನ, ಎಮ್ಮೆ ಸೇರಿದಂತೆ ಜಿಲ್ಲೆಯಲ್ಲಿ 1,81,676 ಜಾನುವಾರುಗಳಿರುತ್ತವೆ. ಇಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಪ್ರಗತಿಯ ವರದಿಯನ್ನು "ಭಾರತ್ ಪಶುಧನ್ ಪೋರ್ಟಲ್" ನಲ್ಲಿ ನಮೂದಿಸಬೇಕು ಒಟ್ಟಾರೆ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಪಶು ಪಾಲನಾ ಮತ್ತು ಪಶು ವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ರಂಗಪ್ಪ, ತಾಲ್ಲೂಕು ಪಶು ವೈದ್ಯಾಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಜರಿದ್ದರು.