ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget 2026: 2026-27ನೇ ಸಾಲಿನ ರಾಜ್ಯ ಬಜೆಟ್ ಜಿಲ್ಲೆಗೆ ದಕ್ಕಿದ್ದೇನು ? ಜನತೆಯ ನಿರೀಕ್ಷೆ ಏನಾಗಿತ್ತು : ಒಂದು ಪಕ್ಷಿ ನೋಟ..!!

ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಬೇಕಾಗಿತ್ತು. ಇದರಿಂದ ರೇಷ್ಮೇ ವಸ್ತ್ರ ಮತ್ತು ಸೀರೆ ಹಾಗೂ ರೇಷ್ಮೇ ಕರಕುಶಲ ಗಾರರಿಗೆ ಅನುಕೂಲ ವಾಗುತ್ತದೆ. 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ‍್ಯಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆ ಯಿಂದ ಮತ್ತು ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ದಿಂದಬೆರಳೆಣಿಕೆ ಮಂದಿಗಷ್ಟೇ ಉದ್ಯೋಗ ದೊರೆಯಬಹುದು

ರಾಜ್ಯ ಬಜೆಟ್ ಜಿಲ್ಲೆಗೆ ದಕ್ಕಿದ್ದೇನು ? ಒಂದು ಪಕ್ಷಿ ನೋಟ..!!

-

Ashok Nayak
Ashok Nayak Mar 6, 2026 11:04 PM

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ್ದು, ಜಿಲ್ಲೆಯ ಜನತೆ ಬೆಟ್ಟದಷ್ಟು ನಿರೀಕ್ಷೆಯನ್ನು ಬಜೆಟ್ ಮೇಲೆ ಹೊಂದಲಾಗಿತ್ತು. ಆದರೆ ಶಾಶ್ವತ ನೀರಾವರಿ, 3ನೇ ಹಂತದ ಶುದ್ಧೀಕರಣ ಸೇರಿ ದಶಕಗಳ ಕನಸು ಕನಸಾಗಿಯೆ ಉಳಿದಿದ್ದು ಹೆಚ್ಚಿನ ನಿರಾಸೆಯನ್ನು ಮೂಡಿಸಿದೆ.

ಈ ಬಜೆಟ್ ನಲ್ಲಿ ಜಿಲ್ಲೆಯ ಜನರು ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದರು. ನಮ್ಮ ತಾಲ್ಲೂಕಿಗೆ ಯಾವ ಯೋಜನೆಗಳು ದೊರೆಯುತ್ತವೆ ಎನ್ನುವ ನಿರೀಕ್ಷೆಯಲ್ಲಿ ಇದ್ದರು.ಆದರೆ ಈ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ. ಕೆಐಎ ಡಿಬಿ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ‍್ಯಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ. ಘೋಷಣೆಯಾಗಿದೆ.

ಇದನ್ನೂ ಓದಿ: Karnataka Budget 2026: ಸಿದ್ದರಾಮಯ್ಯ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?; ಯೋಜನೆ, ಅನುದಾನದ ಮಾಹಿತಿ ಇಲ್ಲಿದೆ

ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಬೇಕಾಗಿತ್ತು. ಇದರಿಂದ ರೇಷ್ಮೇ ವಸ್ತ್ರ ಮತ್ತು ಸೀರೆ ಹಾಗೂ ರೇಷ್ಮೇ ಕರಕುಶಲ ಗಾರರಿಗೆ ಅನುಕೂಲ ವಾಗುತ್ತದೆ. 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ‍್ಯಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆ ಯಿಂದ ಮತ್ತು ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ದಿಂದಬೆರಳೆಣಿಕೆ ಮಂದಿಗಷ್ಟೇ ಉದ್ಯೋಗ ದೊರೆಯಬಹುದು. ಈ ಯೋಜನೆಗಳೆಲ್ಲವೂ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ ಎಂಬುದು ಜನರ ಅನಿಸಿಕೆ ಯಾಗಿದೆ.

ಚಿಕ್ಕಬಳ್ಳಾಪುರದ ಜನತೆಯ ನಿರೀಕ್ಷೆಗಳಾದ ಎಚ್‌ಎನ್ ವ್ಯಾಲಿ ವ್ಯಾಲಿಯಿಂದ ಬರುವ ನೀರನ್ನು ಹೆಚ್ಚು ಶುದ್ಧ ಮಾಡಲು ೩ನೇ ಹಂತದ ಸಂಸ್ಕರಣೆ ಯೋಜನೆ ಜಾರಿ, ಎತ್ತಿನ ಹೊಳೆ ಯೋಜನೆಗೆ ಈ ಭಾರಿಯಾದರೂ ವೇಗ ಪಡೆದು ಜಿಲ್ಲೆಯ ಜನತೆಗೆ ಕುಡಿಯುವ ನೀರು ಸಿಗತ್ತದೆ. ಜಿಲ್ಲೆಯ ಆಂಧ್ರದ ಗಡಿಯವರೆಗೂ ಬಂದಿರುವ ಕೃಷ್ಣಾನದಿ ನೀರು ಜಿಲ್ಲೆಗೆ ಕುಡಿಯುವ ನೀರಾಗಿಯಾದರೂ ಬರುತ್ತದೆ ಎಂಬ ನೀರಿಕ್ಷೆ ಈಡೇರಲಿಲ್ಲ.

ದಶಕಗಳ ಬೇಡಿಕೆಯಾದ ಹಣ್ಣು-ತರಕಾರಿ ಶೀಥಲ ಗೃಹಗಳ ನಿರ್ಮಾಣ, ವೈನ್ ತಯಾರಿಕಾ ಘಟಕಗಳ ಸ್ಥಾಪನೆಯು ಪ್ರಸ್ತುತ ಬಜೆಟ್‌ನಲ್ಲಿ ಘೋಷಣೆಯಾಲಿಲ್ಲಾ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿಲ್ಲ.

ಜಿಲ್ಲೆಯ ರೈತರು ಹಾಲು, ರೇಷ್ಮೆ, ತರಕಾರಿ, ಹೂವು, ಹಣ್ಣು ಬೆಳೆಯುವುದರಲ್ಲಿ ರಾಜ್ಯ ದಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಹೂವು, ಹಣ್ಣು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅಗತ್ಯವಿರುವ ಮಾರುಕಟ್ಟೆ ನಿರ್ಮಿಸಬೇಕಿತ್ತು. ಇಲ್ಲಿ ಹಣ್ಣು, ತರಕಾರಿ, ಹೂವು ಶೇಖರಿಸಿಡುವ ಶೀತಲೀಕರಣ ಘಟಗಳಿಲ್ಲದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಬೆಂಗಳೂರಿಗೆ ಕೊಂಡೊಯ್ದು ಬಂದ ಬೆಲೆಗೆ ಮಾರಾಟ ಮಾಡಿ ಬರುವ ದುಸ್ಥಿತಿ ರೈತನಿಗಿದೆ. ಆದ್ದರಿಂದ ಶೀತಲೀಕರಣ ಘಟಕ ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬ ರೈತರ ಒತ್ತಾಯಕ್ಕೆ ಈ ಬಾರಿ ಸರ್ಕಾರ ಸ್ಪಂದನೆ ತೋರಿಲ್ಲ.



ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದರೂ, ಜಿಲ್ಲೆ ಯಲ್ಲಿ ಒಂದೇ ಒಂದು ವೈನ್ ತಯಾರಿಕಾ ಘಟಕವಿಲ್ಲ. ಹಾಗಾಗಿ ದಲ್ಲಾಳಿಗಳ ಕಾಟ ಎದುರಿಸಲಾಗದೆ ಬಂದ ಬೆಲೆಗೆ ತೋಟದಲ್ಲಿಯೇ ದ್ರಾಕ್ಷಿ ಮಾರುವ ದುಸ್ಥಿತಿ ಎದುರಾಗಿದೆ. ವೈನ್ ತಯಾರಿಕಾ ಘಟಕ ಸ್ಥಾಪಿಸಿ ಸಮಸ್ಯೆ ಪರಿಹಾರಿಸಲು ಹಲವು ದಶಕಗಳಿಂದ ಬೆಳೆಗಾರ ರಿಂದ ಒತ್ತಾಯ ಕೇಳಿ ಬರುತ್ತಿದ್ದು ಈ ಬಜೆಟ್ ನಲ್ಲಿ ಸಾಕಾರವಾಗಲಿಲ್ಲ. ಹಿಂದೆ ಘೋಷಣೆ ಯಾಗಿದ್ದ ಮೊಬೈಲ್ ಬಿಡಿ ಭಾಗಗಳ ತಯಾರಿಕಾ ಘಟಕದ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯ ಕುರಿತು ಘೋಷಣೆ ಮಾಡಿಲಿಲ್ಲಾ ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿಲ್ಲ.

ಚಿಕ್ಕಬಳ್ಳಾಪುರ ನಗರಕ್ಕೆ ಟೌನ್ ಶಿಪ್ ನಗರ ಯೋಜನೆಗೆ ಮತ್ತು ಹೊಸ ಉದ್ಯಮಗಳಿಗೆ ನೂತನ ಆಯಾಮ ನೀಡಲಿಲ್ಲ. ಬಯಲು ಸೀಮೆ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಈ ಬಾರಿ ಹಿಂದೆ ಘೋಷಿಸಿದ ಮತ್ತು ಈ ಬಾರಿ ಘೋಷಿಸುವ ಯೋಜನೆಗಳು ಬರೀ ಘೋಷಣೆಗಳಾಗಿ ಮಾತ್ರ ಉಳಿಯದೆ ಕಾರ್ಯರೂಪಕ್ಕೆ ಬರಲೆಂಬುದು ಜಿಲ್ಲೆಯ ಜನತೆಯ ಬೇಡಿಕೆಯಾಗಿತ್ತು ಇವು ಯಾವುವೂ ಈಡೇರಲಿಲ್ಲ.

ಇದರ ನಡುವೆಯೂ ಜಿಲ್ಲೆಯಲ್ಲಿ ಒಂದೆರಡು ಕೈಗಾರಿಕೆಗಳ ಸ್ಥಾಪನೆ ಆಗಲಿರುವುದು ಮರು ಭೂಮಿಯಲ್ಲಿ ಮರೀಚಿಕೆಯನ್ನು ಅರಸುವಂತಿರುವುದು ಸುಳ್ಳಲ್ಲ. ಇನ್ನಾದರೂ ಜನಪ್ರತಿನಿಧಿಗಳು ಜಿಲ್ಲೆಯ ಸರ್ವಾಂಗೀಣ ಪ್ರಗತಿಗಾಗಿ ಸರಕಾರದ ಮನವೊಲಿಸಿ ಆಗಬೇಕಾ ದದ್ದನ್ನು ಆಗಿಸುವತ್ತ ದಿಟ್ಟ ಹೆಜ್ಜೆ ಇಡುವ ಅಗತ್ಯವಿದೆ ಎನ್ನುವುದು ಜನತೆಯ ಆಶಯ ವಾಗಿದೆ.