Shidlaghatta News: ಸಮಾಜಕ್ಕೆ ನೀಡಿದ ಸೇವೆಯಿಂದ ಜನ ಮಾನಸದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿದ್ದಾರೆ : ಚುಂಚಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿರುವ ಜ್ಞಾನ ಜ್ಯೋತಿ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಲಾದ ಬಿ.ಎಂ.ಮೂರ್ತಿಯವರ ಮಹಾ ಪ್ರಸ್ತಾನದ 25ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಬಿ.ಎಂ.ಮೂರ್ತಿಯವರ ಪುತ್ಥಳಿ ಅನಾವರಣ, ಜೀವನ ಚರಿತ್ರೆ ಪುಸ್ತಕ ಲೋಕಾರ್ಪಣೆ ಮತ್ತು ಹೊಸ ಜ್ಞಾನಜ್ಯೋತಿ ಕ್ಯಾಂಪಸ್‌ಗೆ ಭೂಮಿ ಪೂಜೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
-
ಶಿಡ್ಲಘಟ್ಟ: ಎಲ್ಲಾ ವರ್ಗದ ಜನತೆಯ ಪ್ರೀತಿಗೆ ಪಾತ್ರರಾಗಿದ್ದ ಬಿ.ಎಂ.ಮೂರ್ತಿ ಅವರು ಸಮಾಜಕ್ಕೆ ನೀಡಿದ ಸೇವೆಯಿಂದ ಜನ ಮಾನಸದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನದ ಮಠ ಪೀಠಾಧ್ಯಕ್ಷರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ(Sri Dr. Nirmalanandanath Swamiji) ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿರುವ ಜ್ಞಾನ ಜ್ಯೋತಿ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಲಾದ ಬಿ.ಎಂ.ಮೂರ್ತಿಯವರ ಮಹಾ ಪ್ರಸ್ತಾನದ 25ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಬಿ.ಎಂ.ಮೂರ್ತಿಯವರ ಪುತ್ಥಳಿ ಅನಾವರಣ, ಜೀವನ ಚರಿತ್ರೆ ಪುಸ್ತಕ ಲೋಕಾರ್ಪಣೆ ಮತ್ತು ಹೊಸ ಜ್ಞಾನಜ್ಯೋತಿ ಕ್ಯಾಂಪಸ್‌ಗೆ ಭೂಮಿ ಪೂಜೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೇರ ನಡೆ ನುಡಿಯ ಸ್ಪೂರ್ತಿದಾಯಕ ವ್ಯಕ್ತಿತ್ವ ಹೊಂದಿದ್ದ ಬಿ.ಎಂ ಮೂರ್ತಿ ಅವರು ಬಿಟ್ಟು ಹೋದಂತಹ ಹೆಜ್ಜೆಗುರುತುಗಳು ಸಾಮಾನ್ಯವಲ್ಲ. ಶಿಕ್ಷಣದಂತಹ ಸೇವಾ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರ ಎಂದರು.
ಇದನ್ನೂ ಓದಿ: Shidlaghatta News: ದ್ವೇಷ ಭಾಷಣ ತಡೆ ಮಸೂದೆ: ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ !
ಈ ದೇಹದ ಮನಸ್ಸಿನಿಂದ ನಿಸ್ಕಲ್ಮಶವಾಗಿ ಇಟ್ಟುಕೊಳ್ಳಬೇಕು. ಬೆಳಗ್ಗೆ ಮಾಡಿದ ಅನ್ನ ಸಮಯಕ್ಕೆ ಉಪಯೋಗಿಸದೆ ಹೋದ್ರೆ ಸಂಜೆ ಹೊತ್ತಿಗೆ ಹಳಸಿ ಬಿಸಾಡಬೇಕಾಗುತ್ತದೆ. ಅಂತಹ ಅನ್ನವನ್ನು ಕೊಟ್ಟು ಬೆಳೆಸಿದ ಈ ದೇವರೇ ನಮ್ಮೆಲ್ಲರಲ್ಲಿ ಉನ್ನತ ಮೌಲ್ಯಗಳನ್ನು, ಜೀವನ ಕ್ರಮಗಳನ್ನು ಕೊಟ್ಟಿರುತ್ತಾನೆ. ಕಾಯವಳಿದರೂ ಕಾಯಕ ಮಾತ್ರ ಉಳಿಯುತ್ತದೆ ಎಂಬುದಕ್ಕೆ ದೇಹವನ್ನ ಬಿಟ್ಟಿ ದ್ದರೂ ಕೂಡ ಚೇತನ ಮೂರ್ತಿಯಾಗಿ ನಮ್ಮೆಲ್ಲರ ಇಂತಹ ಕಾರ್ಯಕ್ರಮದ ಮೂಲಕ ಒಂದು ಗೂಡಿಸಿರುವ ಮೂರ್ತಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಗ್ರಾಮೀಣ ವಿದ್ಯಾ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಜೀವ್ ಕುಮಾರ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸುರಕ್ಷಿತ ಕಲಿಕೆಯ ವಾತಾವರಣವನ್ನು ಒದಗಿಸಲು ಒಳ್ಳೆ ಶಿಕ್ಷಣ ನೀಡಬೇಕೆಂದು ಬಿ.ಎಂ.ಮೂರ್ತಿ ಅವರ ಸಂಕಲ್ಪವಾಗಿದೆ.ಜೀವನ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವ ಅಭಿಜಾತ ಮಹಾಕಾವ್ಯವಿದ್ದಂತೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೇ ಜ್ಞಾನಜೋತಿ ಶಾಲೆ ಮೂಲಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಶಿಡ್ಲಘಟ್ಟ ಅಜಯ್ ಕೀರ್ತಿ ಅದ್ಯಕ್ಷತೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷರು ಆದ ವಿ.ಮುನಿಯಪ್ಪ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಸಿ.ಎನ್.ಅಶ್ವಥ್ ನಾರಾಯಣ್, ಹೊಸಕೋಟೆ ಶಾಸಕ ಶರತ್ ಬಚ್ಚೇ ಗೌಡ, ಮಾಜಿ ಶಾಸಕ ಎಂ ರಾಜಣ್ಣ, ಕೆಪಿಸಿಸಿ ಸಂಚಾಲಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಎಸ್ ಎನ್ ಕ್ರಿಯಸ್ಟ್ ಸಮಾಜ ಸೇವಕರು ಆಂಜಿನಪ್ಪ ಪುಟ್ಟು, ಬಿಜೆಪಿ ಜಿಲ್ಲಾಧ್ಯಕ್ಷ ರಾಮ ಚಂದ್ರಗೌಡ, ಯಲುವಳ್ಳಿ ಎನ್ ರಮೇಶ್, ಶ್ರೀನಿವಾಸ್ ರಾಮಯ್ಯ, ರೈತ ಸಂಘದ ಭಕ್ತರಹಳ್ಳಿ ಭೈರೇ ಗೌಡ, ಸೇರಿದಂತೆ ಶಾಲೆಯ ಸಿಬ್ಬಂದಿಗಳು ಶಿಕ್ಷಕರು ಹಾಜರಿದ್ದರು.