Chikkaballapur News: ನಿಮ್ಮ ಗಡಿಪಾರು ಬೆದರಿಕೆಗೆ ಹೆದರುವ ಪೈಕಿ ನಾನಲ್ಲ : ಕೋಡಗಲ್ ರಮೇಶ್ ಅಕ್ರೋಶ
ಇತ್ತೀಚೆಗೆ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ದಲಿತ ವಿರೋಧಿ ಧೋರಣೆ ಖಂಡಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಅಹವಾಲು ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಅವರು ಹತ್ತು ದಿನಗಳ ಒಳಗೆ ಎಲ್ಲಾ ದಲಿತ ಮುಖಂಡರು ಮತ್ತು ಎಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು

ಕಳೆದ ಎರಡುವರೆ ವರ್ಷಗಳಿಂದ ಜಿಲ್ಲೆಯಲ್ಲಿ ದಲಿತ ವಿರೋಧಿ ನೀತಿಗಳು ಜಾರಿಯಲ್ಲಿವೆ. ಬಾಯಲ್ಲಿ ಬಾಬಾ ಸಾಹೇಬ, ಆಚರಣೆಯಲ್ಲಿ ಮಹಾ ಮೋಸ ನಡೆಯುತ್ತಿದೆ. ಇದನ್ನು ಸರಿಪಡಿಸದಿದ್ದರೆ ಆಲ್ ಇಂಡಿಯಾ ಬಿಎಸ್‌ಪಿ ಪಕ್ಷದಿಂದ ಸಂಘಟಿತ ಹೋರಾಟ ರೂಪಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಕೊಡಗಲ್ ರಮೇಶ್ ಗುಡುಗಿದರು -

ಚಿಕ್ಕಬಳ್ಳಾಪುರ: ಕಳೆದ ಎರಡುವರೆ ವರ್ಷಗಳಿಂದ ಜಿಲ್ಲೆಯಲ್ಲಿ ದಲಿತ ವಿರೋಧಿ ನೀತಿಗಳು ಜಾರಿಯಲ್ಲಿವೆ. ಬಾಯಲ್ಲಿ ಬಾಬಾ ಸಾಹೇಬ, ಆಚರಣೆಯಲ್ಲಿ ಮಹಾ ಮೋಸ ನಡೆಯುತ್ತಿದೆ. ಇದನ್ನು ಸರಿಪಡಿಸದಿದ್ದರೆ ಆಲ್ ಇಂಡಿಯಾ ಬಿಎಸ್‌ಪಿ ಪಕ್ಷದಿಂದ ಸಂಘಟಿತ ಹೋರಾಟ ರೂಪಿಸಲಾಗು ವುದು ಎಂದು ಜಿಲ್ಲಾಧ್ಯಕ್ಷ ಕೊಡಗಲ್ ರಮೇಶ್ ಗುಡುಗಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎರಡುವರೆ ವರ್ಷದಿಂದ ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಬಾಬಾ ಸಾಹೇಬರು ಹೇಳಿರುವಂತೆ ಎಲ್ಲಿ ಅನ್ಯಾಯವಾಗುತ್ತದೆಯೋ ಅಲ್ಲಿ ನಾವು ನ್ಯಾಯವನ್ನು ಕೇಳುತ್ತೇವೆ. ಅನ್ಯಾಯವನ್ನು ಖಂಡಿಸಿ ನ್ಯಾಯ ಕೇಳಿದರೆ ರೌಡಿಗಳು ಹೇಗಾಗುತ್ತಾರೆ. ಸಂವಿಧಾನದ ಯಾವ ಆರ್ಟಿಕಲ್‌ನಲ್ಲಿ ಈ ರೀತಿ ಬರೆದಿದೆ? ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ದಲಿತ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ನಮ್ಮ ಧನಿಯನ್ನು ಹತ್ತಿಕ್ಕಲಾಗದು. ಉಸ್ತುವಾರಿ ಸಚಿವರೇ ನಿಮ್ಮ ಗಡಿಪಾರು ಬೆದರಿಕೆ ಹೆದರುವ ಮಾತೇ ಇಲ್ಲ ಎಂದರು.
ಇದನ್ನೂ ಓದಿ: Chikkaballapur News: ಭಾಗ್ಯನಗರದಲ್ಲಿ ಆರಂಭವಾಗಿದೆ ಆರೋಗ್ಯ ಸೇವೆಯ ಹೊಸ ಅಧ್ಯಾಯ!
೨೦೨೬ರ ಏಪ್ರಿಲ್ ೧೪ರ ಒಳಗೆ ಜಿಲ್ಲಾಡಳಿತ ಭವನದ ಎದುರು ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕು. ಅದಕ್ಕೂ ಪೂರ್ವದಲ್ಲಿ ರಾತ್ರೋರಾತ್ರಿ ತೆರವು ಮಾಡಿರುವ ಚಿಂತಾಮಣಿ ಸರ್ಕಾರಿ ಶಾಲೆಯಲ್ಲೂ ಕೂಡ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಇತ್ತೀಚೆಗೆ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ದಲಿತ ವಿರೋಧಿ ಧೋರಣೆ ಖಂಡಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಅಹವಾಲು ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಅವರು ಹತ್ತು ದಿನಗಳ ಒಳಗೆ ಎಲ್ಲಾ ದಲಿತ ಮುಖಂಡರು ಮತ್ತು ಎಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು. ಅದಾಗಿ ೨೦ ದಿನ ಕಳೆದರೂ ಸಭೆಯ ಪ್ರಸ್ತಾಪವೇ ಮಾಡಿಲ್ಲ, ಇದು ಇವರ ದಲಿತ ಪರವಾದ ಕಾಳಜಿ ಎಂದು ಬೇಸರಿಸಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚಿಂತಾಮಣಿಯ ಎಂ .ಆರ್. .ನಾರಾಯಣಸ್ವಾಮಿ ಮಾತನಾಡಿ ಸ್ವಾತಂತ್ರ‍್ಯ ಬಂದು ೨೯ ವರ್ಷವಾದರೂ ಅಹಿಂದ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ. ಮೂರು ರಾಷ್ಟ್ರೀಯ ಪಕ್ಷಗಳು ಮೋಸ ಮಾಡುತ್ತಲೇ ಬಂದಿವೆ. ಇದನ್ನು ಮನಗಂಡು ಜನ್ಮ ತಾಳಿರುವ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರಿಗೆ ಸ್ಪರ್ಧೆ ಮಾಡಲಿದೆ.
ನೋಟು ಇರುವವರಿಗೆ ಸೋಲಾಗಲಿದ್ದು ಮತದಾರರಿಗೆ ಗೆಲುವಾಗಲಿದೆ. ಜಿಲ್ಲೆಯಲ್ಲಿ ಕನಿಷ್ಠ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದರು.
ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚಿಂತಾಮಣಿಯ ಎಂ .ಆರ್ .ನಾರಾಯಣಸ್ವಾಮಿ ಮಾತನಾಡಿ ಸ್ವಾತಂತ್ರ‍್ಯ ಬಂದು ೨೯ ವರ್ಷವಾದರೂ ಅಹಿಂದ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ. ಮೂರು ರಾಷ್ಟ್ರೀಯ ಪಕ್ಷಗಳು ಮೋಸ ಮಾಡುತ್ತಲೇ ಬಂದಿವೆ. ಇದನ್ನು ಮನ ಗಂಡು ಜನ್ಮ ತಾಳಿರುವ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲಿದೆ.
ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರಿಗೆ ಸ್ಪರ್ಧೆ ಮಾಡಲಿದೆ. ನೋಟು ಇರುವವರಿಗೆ ಸೋಲಾಗಲಿದ್ದು ಮತದಾರರಿಗೆ ಗೆಲುವಾಗಲಿದೆ. ಜಿಲ್ಲೆ ಯಲ್ಲಿ ಕನಿಷ್ಠ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
*
ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ನೂತನ ಪದಾಧಿಕಾರಿಗಳ ಪಟ್ಟಿ
ರಾಜ್ಯ ಸಮಿತಿಯ ಉಪಾಧ್ಯಕ್ಷರು ಬಿ.ಎಂ.ಗAಗಾಧರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ , ಪಿ.ವಿ ನಾಗಪ್ಪ, ರಾಜ್ಯ ಕಾರ್ಯದರ್ಶಿ ಕವಾಲಿ ವೆಂಕಟರಮಣಪ್ಪ, ರಾಜ್ಯ ಕಾರ್ಯದರ್ಶಿಗಳಾಗಿ ಮುನಿಕೃಷ್ಣಯ್ಯ, ವಿಜಯ ನರಸಿಂಹ, ಹೆಣ್ಣೂರು ನಂದೀಶ್, ಸೋಮಶೇಖರ್, ಕೆ ಎಮ್ ಗಂಗಾಧರ್, ಜಿಲ್ಲಾ ಸಂಯೋಜಕರುಗಳಾಗಿ ಆನಂದ್, ನರಸಿಂಹ, ನಾರಾಯಣಸ್ವಾಮಿ ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರು ಕೊಡಗಲ್ ರಮೇಶ್ , ಉಪಾಧ್ಯಕ್ಷರು ಸುರೇಶ್ ವಿ, ಬಾಗೇಪಲ್ಲಿ ವೆಂಕಟೇಶ್, ಜನಾರ್ಧನ್ ಬಾಬು, ಎಂಆರ್ ನಾರಾಯಣಸ್ವಾಮಿ, ದೇವರಾಜ್, ನರಸಿಂಹಮೂರ್ತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ, ಎನ್ ನಾರಾಯಣಸ್ವಾಮಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಜನಾರ್ಧನ್ ನಾಗಪ್ಪ ಆಯ್ಕೆಯಾಗಿದ್ದಾರೆ,
ಈ ವೇಳೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಾರ್ಯದರ್ಶಿ ವಿಜಯ ನರಸಿಂಹ, ವಿವಿ ನಾಗಪ್ಪ, ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಗೇಪಲ್ಲಿ ಮುಖಂಡ ವೆಂಕಟೇಶ್ ಶಿಡ್ಲಘಟ್ಟ ನಾರಾಯಣ ಸ್ವಾಮಿ ಜನಾರ್ಧನ್ ಬಾಬು ಟಿ ಎನ್ ನಾರಾಯಣಸ್ವಾಮಿ ದೇವರಾಜ್ ನರಸಿಂಹಮೂರ್ತಿ ಜನಾರ್ಧನ್ ನಾಗಪ್ಪ ಇದ್ದರು.