Chikkaballapur News: ನ್ಯಾನೋ ಡಿಎಪಿ ಯೂರಿಯಾ ದ್ರಾವಣ ಸಿಂಪಡಣೆಯಿಂದ ರೈತರಿಗೆ ವರದಾನ : ತಾಲೂಕು ಕೃಷಿ ಅಧಿಕಾರಿ ಮುನಿರಾಜು ಅಭಿಮತ
ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೊಟ್ಟಿಗೆ ಗೊಬ್ಬರವನ್ನು ಹೊಲ ಗದ್ದೆ ಮತ್ತು ತೋಟ ಗಳಿಗೆ ಹಾಕುವುದನ್ನು ಮರೆತಿದ್ದಾರೆ.ಬದಲಿಗೆ ಡಿಎಪಿ, ಕಾಂಪ್ಲೆಕ್ಸ್,ಯೂರಿಯಾ ಇತ್ಯಾದಿ ರಸಗೊಬ್ಬರಗಳನ್ನೇ ಬಳಸಿ ಬೆಳೆ ತೆಗೆಯಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಭೂಮಿ ಮತ್ತು ಪರಿಸರಕ್ಕೆ ತುಂಬಾ ಹಾನಿ ಯಾಗುತ್ತಿದೆ.

ನ್ಯಾನೋ ಡಿಎಪಿ ಯೂರಿಯಾ ದ್ರಾವಣ ಸಿಂಪಡಣೆಯಿAದ ರೈತರಿಗೆ ವರದಾನ ಎಂದು ತಾಲೂಕು ಕೃಷಿ ಅಧಿಕಾರಿ ಮುನಿರಾಜು ಅಭಿಪ್ರಾಯಪಟ್ಟರು. -

ಚಿಕ್ಕಬಳ್ಳಾಪುರ: ತೋಟಗಾರಿಕಾ ಬೆಳಗಳಿರಲಿ, ಮಳೆಯಾಧಾರಿತ ಬೆಳೆಯಾಗಲಿ ನ್ಯಾನೋ ಡಿಎಪಿ ಯೂರಿಯಾ ದ್ರಾವಣವನ್ನು ೧ ಲೀಟರ್ ನೀರಿಗೆ ೪ ಎಂಎಲ್‌ನಂತೆ ಸಿಂಪಡಿಸಿದರೆ ಉತ್ತಮ ಪರಿಣಾಮ ಕಾಣಬಹುದು,ಭುಮಿಯ ಆರೋಗ್ಯ ಕಾಪಾಡಬಹುದು ಎಂದು ತಾಲೂಕು ಕೃಷಿ ಅಧಿಕಾರಿ ಮುನಿರಾಜು ತಿಳಿಸಿದರು.
ತಾಲೂಕಿನ ಗಂಗರೇಕಾಲವೇ ಗ್ರಾಮದ ಪ್ರಗತಿಪರ ರೈತ ಮಂಜುನಾಥ್ ಅವರ ತೋಟದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ನ್ಯಾನೋ ಡಿಎಪಿ ಯೂರಿಯಾ ದ್ರಾವಣವನ್ನು ಪ್ರಾಯೋಗಿಕವಾಗಿ ಡ್ರೋನ್ ಮೂಲಕ ಸಿಂಪಡಣೆ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದರು.
ಇದನ್ನೂ ಓದಿ: Chikkaballapur News: ನಿಮ್ಮ ಗಡಿಪಾರು ಬೆದರಿಕೆಗೆ ಹೆದರುವ ಪೈಕಿ ನಾನಲ್ಲ : ಕೋಡಗಲ್ ರಮೇಶ್ ಅಕ್ರೋಶ
ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೊಟ್ಟಿಗೆ ಗೊಬ್ಬರವನ್ನು ಹೊಲ ಗದ್ದೆ ಮತ್ತು ತೋಟ ಗಳಿಗೆ ಹಾಕುವುದನ್ನು ಮರೆತಿದ್ದಾರೆ.ಬದಲಿಗೆ ಡಿಎಪಿ, ಕಾಂಪ್ಲೆಕ್ಸ್,ಯೂರಿಯಾ ಇತ್ಯಾದಿ ರಸಗೊಬ್ಬರಗಳನ್ನೇ ಬಳಸಿ ಬೆಳೆ ತೆಗೆಯಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಭೂಮಿ ಮತ್ತು ಪರಿಸರಕ್ಕೆ ತುಂಬಾ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ನಿಯಮಿತವಾಗಿ ಬೆಳೆಗಳಿಗೆ ತಿಪ್ಪೆಗೊಬ್ಬರ ಕೊಡುವುದು ರೂಢಿಸಿಕೊಳ್ಳಬೇಕು. ಇದರ ಜೊತೆಗೆ ನ್ಯಾನೋ ಡಿಎಪಿ ಯೂರಿಯಾ ದ್ರಾವಣವನ್ನು ವಿಜ್ಞಾನಿಗಳ ಸಲಹೆಯಂತೆ ಸಿಂಪಡಣೆ ಮಾಡುವುದನ್ನು ಕಲಿಯಬೇಕಿದೆ ಎಂದರು.
ವ್ಯವಸಾಯದಲ್ಲಿ ಯೂರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತಿದೆ.
ಯೂರಿಯಾ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಮೂಲವಾದರೂ ಅದನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಆಮ್ಲೀಯತೆ ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳವಾಗಬಹುದು. ಹೆಚ್ಚಾಗಿ ಬಳಕೆ ಮಾಡಿದರೆ ಇಳುವರಿ ಕಡಿಮೆಯಾಗ ಬಹುದು. ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು, ಹಾಗೂ ಹೆಚ್ಚಿನ ಸಾರಜನಕ ಪ್ರಮಾಣದಿಂದ ಸಸ್ಯಗಳಿಗೆ ವಿಷಕಾರಿಯಾದ ಪರಿಣಾವಾಗಬಹುದು ಎಂದು ತಿಳಿಸಿದರು.
ಆರೋಗ್ಯಕ್ಕೆ ಹಾನಿಕರ
ಯೂರಿಯಾ ಹೆಚ್ಚಾಗಿ ಬಳಸಿ ಬೆಳೆದ ತರಕಾರಿ, ಹಣ್ಣುಗಳು ಧಾನ್ಯಗಳಲ್ಲಿ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇಂತಹುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿ ಯಾಗಿ ಹೊಟ್ಟೆ ನೋವು, ಅಜೀರ್ಣ, ವಾಂತಿ ಮುಂತಾದವು ಸಂಭವಿಸಬಹುದು ಹಾಗೂ ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ಆಹಾರದಲ್ಲಿ ನೈಟ್ರೇಟ್‌ಗಳು ಹೆಚ್ಚಾಗಿದ್ದರೆ, ಅವು ನೈಟ್ರೋಸಾಮೈನ್ಗಗಳಾಗಿ ಪರಿವರ್ತನೆಯಾಗಿ ಕ್ಯಾನ್ಸರ್‌ಗೆ ಕಾರಣ ವಾಗಬಹುದು.
ಶಿಶುಗಳಲ್ಲಿ “ಬ್ಲೂ ಬೇಬಿ ಸಿಂಡ್ರೋಮ್” ಎಂಬ ಸಮಸ್ಯೆ ಆಗಬಹುದು. ಇದು ರಕ್ತದಲ್ಲಿ ಆಮ್ಲಜನ ಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಯೂರಿಯಾ ಭೂಮಿಯಿಂದ ನೆಲದ ಅಥವಾ ನದಿ-ಕೆರೆಗಳಿಗೆ ಹಾರಿದರೆ, ಕುಡಿಯುವ ನೀರಿನಲ್ಲಿ ನೈಟ್ರೇಟ್ ಮಟ್ಟ ಹೆಚ್ಚಾಗಬಹುದು. ಇದು ಮಾನವ ಆರೋಗ್ಯಕ್ಕೆ ತುಂಬಾ ಹಾನಿಕರ ಎಂದು ಎಚ್ಚರಿಸಿದರು.
ಮಣ್ಣಿನ ಆರೋಗ್ಯ
ನಿರಂತರ ಹಾಗೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ ಪಿಹೆಚ್‌ಅನ್ನು ಕಡಿಮೆಮಾಡಿ ಅದನ್ನು ಆಮ್ಲೀಯವಾಗಿಸುತ್ತದೆ. ಆಮ್ಲೀಯ ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ ಮತ್ತು ಉಪಯುಕ್ತ ಸೂಕ್ಷ್ಮ ಜೀವಿಗಳ ಚಟುವಟಿಕೆ ತೊಂದರೆಗೆ ಒಳಗಾಗುತ್ತದೆ. ಇದರಿಂದ ಒಟ್ಟು ಮಣ್ಣಿನ ಆರೋಗ್ಯ, ಪೋಷಕಾಂಶಗಳ ಅಸಮತೋಲನ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.ನ್ಯಾನೋ ಯುರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ ೫೦% ಕಡಿಮೆ ಮಾಡಬಹುದು. ಬೆಳೆಯು ಬಿತ್ತನೆಯಾದ ಮೂವತ್ತು ದಿನಗಳ ನಂತರ ಹಾಗೂ ಹೂವಾಡುವ ಪೂರ್ವ ಹಂತದಲ್ಲಿ ೪.ಮಿಲಿ ಪ್ರತಿ ಲೀಟರ್‌ನಂತೆ ಬಳಸಬಹುದಾಗಿದೆ.
• ನ್ಯಾನೋ ಡಿಎಪಿ ದ್ರವವು ಶೇ.೮% ರಷ್ಟು ಸಾರಜನಕ ಹಾಗೂ ಶೇ.೧೬% ರಷ್ಟು ರಂಜಕ ಪೋಷ ಕಾಂಶ ಹೊಂದಿರುತ್ತದೆ. ಬಿತ್ತನೆ ಮುಂಚಿತವಾಗಿ ಬೀಜ/ಗಡ್ಡೆ/ಕಟಿಂಗ್ಸ್ಗಳನ್ನು ೪.ಮಿಲಿ ನ್ಯಾನೋ ಡಿಎಪಿ ಧ್ರವವನ್ನು ಪ್ರತಿ ಲೀಟರ್‌ನಲ್ಲಿ ಮಿಶ್ರಣ ಮಾಡಿ ೨೦ ರಿಂದ ೩೦ ನಿಮಿಷಗಳ ಕಾಲ ಧ್ರವದಲ್ಲಿ ನೆನಸಿ ನೆರಳಿನಲ್ಲಿ ಒಣಗಿಸಿ ಬಳಸಬಹುದಾಗಿದೆ. ಸಿಂಪರಣೆಗೆ ಪ್ರತಿ ೫.ಮಿಲಿ ಪ್ರತಿ ಲೀಟರ್‌ನಂತೆ ಬಳಸಬಹುದಾಗಿದೆ ಎಂದು ಸಲಹೆ ನೀಡಿದರು.
• ಡ್ರೋನ್ ಮುಖಾಂತರ ನ್ಯಾನೋ ಯೂರಿಯಾ ಡಿಎಪಿ ಸಿಂಪರಣೆ ಮಾಡಲು ಇಚ್ಚಿಸುವ ರೈತರು ಈ ಕೆಳಕಂಡ ಇಫ್ಕೋ ಮತ್ತು ಕೋರಮಂಡಲ್ ಇಂಟರ್‌ನ್ಯಾಷನಲ್ ಕಂಪನಿಯ ಪ್ರತಿನಿಧಿಗಳಾದ ಇಫ್ಕೋ ಅಕ್ಷಯ್-೯೦೩೬೩೬೨೧೫೯, ಸಿಐಎಲ್ ಆನಂದ್-೮೯೭೦೩೭೪೫೨೯ ಇವರನ್ನು ಸಂಪರ್ಕಿಸ ಬಹುದಾಗಿದೆ ಎಂದರು.
*
ಪ್ರಗತಿಪರ ರೈತ ಮಂಜುನಾಥ್ ಮಾತನಾಡಿ ನಾವು ನಮ್ಮ ತಾತ ಮುತ್ತಾತನ ಕಾಲದಿಂದ ತೋಟ ಗಾರಿಕೆ ಮತ್ತು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಯಂತೆ ಇತ್ತೀಚಿಗೆ ನಾವು ನ್ಯಾನೋ ಡಿಎಪಿ ಮತ್ತು ಯೂರಿಯಾವನ್ನು ಬಳಸುತ್ತಿದ್ದು ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವು ದಿಲ್ಲ. ಎಲ್ಲಾ ರೈತರು ಇದನ್ನು ಬಳಸಿಕೊಂಡರೆ ಹೆಚ್ಚಿನ ಲಾಭವಿದೆ ಎಂದು ಸಲಹೆ ನೀಡಿದರು.