Chikkaballapur news: ಸೆ.3ಕ್ಕೆ ರಾಜ್ಯ ಮಟ್ಟದ ಗ್ಯಾರೆಂಟಿ ಕಾರ್ಯಾಗಾರ ; ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಉದ್ಘಾಟನೆ : ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್ ಹೇಳಿಕೆ
ಇದು ರಾಜ್ಯದ ಮೊಟ್ಟಮೊದಲ ಕಾರ್ಯಗಾರವಾಗಿದೆ. ಈ ಕಾರ್ಯಗಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.ನಮ್ಮ ಸರಕಾರ ಬಂದಾಗಿನಿಂದ ಶಕ್ತಿ ಯೋಜನೆ ಯಡಿ ೫೦೦ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.ಈ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

ಇದೇ ಮೊದಲ ಬಾರಿಗೆ ಪಂಚ ಗ್ಯಾರೆಂಟಿಗಳ ಬಗ್ಗೆ ಅವಲೋಕನ ಮಾಡುವ ಉದ್ದೇಶದಿಂದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಚಿಕ್ಕಬಳ್ಳಾಪುರದಲ್ಲಿನ ನಡೆಸಲಾಗುತ್ತಿದ್ದುನ ಇದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು. -

ಚಿಕ್ಕಬಳ್ಳಾಪುರ : ಇದೇ ಮೊದಲಬಾರಿಗೆ ಪಂಚಗ್ಯಾರೆAಟಿಗಳ ಬಗ್ಗೆ ಅವಲೋಕನ ಮಾಡುವ ಉದ್ದೇಶದಿಂದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಚಿಕ್ಕಬಳ್ಳಾಪುರದಲ್ಲಿನ ನಡೆಸಲಾಗುತ್ತಿದ್ದುನ ಇದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ ೩ರಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಕುರಿತಾದ ಕಾರ್ಯಾಗಾರವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ನಗರ ವರವಲಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಇದನ್ನೂ ಓದಿ: Chikkaballapur News: ಭಾಗ್ಯನಗರದಲ್ಲಿ ಆರಂಭವಾಗಿದೆ ಆರೋಗ್ಯ ಸೇವೆಯ ಹೊಸ ಅಧ್ಯಾಯ!
ಇದು ರಾಜ್ಯದ ಮೊಟ್ಟಮೊದಲ ಕಾರ್ಯಗಾರವಾಗಿದೆ. ಈ ಕಾರ್ಯಗಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.ನಮ್ಮ ಸರಕಾರ ಬಂದಾಗಿನಿಂದ ಶಕ್ತಿ ಯೋಜನೆ ಯಡಿ ೫೦೦ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.ಈ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.ಇದು ಕಾಂಗ್ರೆಸ್ ನೇತೃತ್ವದ ಸರಕಾರದ ಹೆಗ್ಗಳಿಕೆಯಾಗಿದ್ದು ಇದರೊಟ್ಟಿಗೆ ಅನ್ನಭಾಗ್ಯ , ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ ಹೀಗೆ ಎಲ್ಲವೂ ಶೇ ೧೦೦ರಷ್ಟು ಜನಪ್ರೀತಿಗಳಿಸಿರುವುದು ಸರಕಾರದ ಸಾಧನೆಗೆ ಸಾಕ್ಷಿಯಾಗಿವೆ ಎಂದರು.
ಗ್ಯಾರಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಅವರ ಸೂಚನೆಯಂತೆ ಜಿಲ್ಲೆಯಲ್ಲಿ ಈ ಕಾರ್ಯಗಾರವನ್ನು ಆಯೋಜಿಸುತ್ತಿದ್ದೇವೆ. ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಗಾರ ನಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.ಯುವನಿಧಿ ಮತ್ತು ಗೃಹಲಕ್ಷ್ಮಿಯ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ದಾಖಲಿಸಿ ಕೊಂಡು ಪರಿಹಾರದ ಮಾರ್ಗ ತೋರಿಸುವಂತೆ, ಈವರೆಗೂ ಕೂಡ ಪಂಚ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಒಳಪಡದವರಿಂದ ಕಾರ್ಯಾಗಾರದ ದಿನ ದೂರುಗಳನ್ನು ಸ್ವೀಕರಿಸಿ ಅವುಗಳ ಪರಿಹರಿಸು ವ ಕೆಲಸವನ್ನು ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಪಂಚಗ್ಯಾರೆಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ.ಈ ಪೈಕಿ ಶಕ್ತಿ ಯೋಜನೆ ಶೇ-೧೦೦ ರಷ್ಟು, ಗೃಹಲಕ್ಷ್ಮಿ ಶೇ- ೯೯, ಅನ್ನಭಾಗ್ಯ ಶೇ-೯೯, ಗೃಹ ಜ್ಯೋತಿ ಶೇ- ೯೯, ಯಶಸ್ಸು ಕಂಡಿದೆ.ಆದರೆ ಯುವನಿಧಿ ಯೋಜನೆ ಮಾತ್ರ ಶೇಕಡ ೯೬ರಷ್ಟು ಮಾತ್ರ ಪ್ರಗತಿ ಸಾಧಿಸಿರು ವುದು ಬೇಸರ ತರಿಸಿದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸ ಮಾಡಿ ಅರಿವು ಮೂಡಿಸ ಲಾಗುತ್ತದೆ. ಯುವ ನಿಧಿಯ ಫಲಾನುಭವಿಗಳು ೨೦೨೩-೨೪ ರಲ್ಲಿ ಪದವೀಧರರಾಗಿರಬೇಕು.
ಆರು ತಿಂಗಳ ಕಾಲ ಎಲ್ಲೂ ಉದ್ಯೋಗ ಮಾಡಿರಬಾರದು. ಉನ್ನತ ಶಿಕ್ಷಣಕ್ಕೆ ದಾಖಲಾಗಿರಬಾರದು. ಇಂತಹವರಿಗೆ ಯುವನಿದಿಯ ಪ್ರಯೋಜನ ಆಗಲಿದೆ. ಯಾರಿಗೆ ಈ ಯೋಜನೆಯ ಹಣ ದೊರೆತಿ ಲ್ಲವೋ ಅಂತಹವರು ಈ ಕಾರ್ಯಾಗಾರದಲ್ಲಿ ಬಂದು ನೋಂದಣಿ ಮಾಡಿಕೊಂಡರೆ ಸ್ಥಳದಲ್ಲಿಯೇ ಅವರ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ, ಹಣಕ್ಕಾಗಿ ಸಾಲಿನಲ್ಲಿ ನಿಲ್ಲದೆ, ಯಾರಿಗೂ ಕಮಿಷನ್ ಕೊಡದೆ ನೇರವಾಗಿ ಸರ್ಕಾರದ ಖಜನೆಯಿಂದಲೇ ಫಲಾನುಭವಿಯ ಖಾತೆಗೆ ಯಾವುದಾದರೂ ಹಣ ಪಾವತಿಯಾಗುತ್ತಿದ್ದರೆ ಅದು ಗ್ಯಾರೆಂಟಿ ಯೋಜನೆಯ ಹಣ ಮಾತ್ರವಾಗಿದೆ. ಹೀಗಾಗಿ ಇದು ದೇಶಕ್ಕೆ ಮಾದರಿಯಾಗಿದೆ ಎಂದರು.
ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ಉದ್ದಗಲಕ್ಕೂ ಪಂಚ ಗ್ಯಾರಂಟಿಗಳ ಸಂಬಂಧ ಅರಿವು ಮೂಡಿಸಲು ಬೀದಿ ನಾಟಕ ಕಲಾವಿಧರನ್ನು ಬಳಸಿಕೊಳ್ಳಲಾಗಿದೆ.ಜತೆಗೆ ಅರ್ಹ ಫಲಾನುಭವಿಗಳ ಹೇಳಿಕೆಯನ್ನು ಪ್ರಚುರಪಡಿಸಲಾಗುತ್ತಿದೆ.ಮೇಲಾಗಿ ಗ್ಯಾರೆಂಟಿ ಯೋಜನೆಗಳ ಹಣವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿರುವ ಅರ್ಹ ಫಲಾನುಭವಿಗಳ ಅನುಭವವನ್ನು ಕೂಡ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಪಂಚ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ವೃದ್ದಿಯಾಗುತ್ತಿದ್ದು ಜನಸಾಮಾನ್ಯರ ಕೈಯಲ್ಲಿ ಹಣ ನಿಲ್ಲುವಂತೆ ಆಗಿದೆ.ಇಷ್ಟಾದರೂ ಕೂಡ ವಿರೋಧ ಪಕ್ಷಗಳು ಗ್ಯಾರೆಂಟಿಗಳಿAದ ರಾಜ್ಯ ದಿವಾಳಿಯಾಗಲಿದೆ ಎಂದು ದೂರುವುದನ್ನು ನಿಲ್ಲಿಸಿಲ್ಲ. ಸತ್ಯ ಏನೆಂದರೆ ಬಿಜೆಪಿ ಪಕ್ಷವು ದೇಶಾದ್ಯಂತ ತನ್ನ ಅಧಿಕಾರವಿರುವ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ಒಂದೊAದಾಗಿ ಜಾರಿಗೊಳಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತವನ್ನು ಸಹಿಸಲಾಗದೆ, ಗ್ಯಾರೆಂಟಿ ಯೋಜನೆಗಳ ಸಾರ್ಥಕತೆ ಬಗ್ಗೆ ಚರ್ಚಿಸಲಾಗದೆ, ಸುಖಾಸುಮ್ಮನೆ ಎಸ್‌ಸಿಪಿ, ಟಿಎಸ್‌ಪಿ ಹಣ ದುರುಪಯೋಗದ ಬಗ್ಗೆ ಮಾತ ನಾಡುತ್ತಿದ್ದಾರೆ.ಈಗ ಹೊಸದಾಗಿ ಎಸ್‌ಐಟಿ ತನಿಖೆ ಮತ್ತು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿವೆ.ಇದಕ್ಕೆ ಹೊಸ ಸೇರ್ಪಡೆ ಬೂಕರ್ ಪ್ರಶಸ್ತಿ ವಿಜೇತೆ ಭಾನುಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಯಾಕೆ ಕರೆಯಬೇಕು, ಇದು ಮುಸ್ಲಿಂ ಓಲೈಕೆ ಇತ್ಯಾದಿಗಳಾಗಿವೆ. ಹೀಗಾಗಿ ವಿರೋಧ ಪಕ್ಷಗಳ ಟೀಕೆಯಲ್ಲಿ ಒಂದೂ ಸತ್ಯಾಂಶವಿಲ್ಲ ಎಂದರು.
ಎಸಿಪಿ ಟಿಎಸ್‌ಪಿ ಹಣವನ್ನು ಆಯಾ ವರ್ಗಗಳ ಕಲ್ಯಾಣಕ್ಕಾಗಿ ಬಳಸುವಂತೆ ಮುಖ್ಯಮಂತ್ರಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೂ ಇದಕ್ಕೂ ಸಂಬಂಧವಿಲ್ಲ. ನಮ್ಮ ಸರಕಾರ ಅಹಿಂದ ಪರವಾಗಿಗಿರುವುದು ಜನತೆಗೆ ತಿಳಿದಿದೆ ಎಂದರು.
ಈ ವೇಳೆ ಗ್ಯಾರೆಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಜಯರಾಮ್ ಸೇರಿ ೬ ತಾಲೂಕು ಗಳ ಅಧ್ಯಕ್ಷರು ಉಪಸ್ಥಿತರಿದ್ದರು.