Chinthamani News: ಚಿಂತಾಮಣಿಯಲ್ಲಿ ಜೆಸಿಬಿಗಳ ಅಬ್ಬರ: ಐಡಿಎಸ್‌ಎಂಟಿ ಮಾರುಕಟ್ಟೆ ಕಟ್ಟಡ ನೆಲಸಮ ಕಾರ್ಯಾರಂಭ
ಹಲವು ದಿನಗಳಿಂದ ಈ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಲಾಗಿತ್ತು. ಇಂದು ಮಾರುಕಟ್ಟೆ ಆವರಣದಲ್ಲಿ ಜೆಸಿಬಿ ಯಂತ್ರಗಳ ಗರ್ಜನೆ ಕೇಳಿಬರುತ್ತಿದ್ದು, ಹಳೆಯ ಮಳಿಗೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹೊಸ ಮತ್ತು ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ನಗರದ ಹೃದಯಭಾಗದಲ್ಲಿರುವ ಐಡಿಎಸ್‌ಎಂಟಿ ಮಾರುಕಟ್ಟೆ ಸಂಕೀರ್ಣದಲ್ಲಿ ದಶಕಗಳಷ್ಟು ಹಳೆಯದಾದ ಮತ್ತು ಶಿಥಿಲಗೊಂಡಿದ್ದ ಮಾರುಕಟ್ಟೆ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಶನಿವಾರ ಯಶಸ್ವಿಯಾಗಿ ನಡೆಯಿತು. -
ಚಿಂತಾಮಣಿ: ನಗರದ ಹೃದಯಭಾಗದಲ್ಲಿರುವ ಐಡಿಎಸ್‌ಎಂಟಿ ಮಾರುಕಟ್ಟೆ ಸಂಕೀರ್ಣ ದಲ್ಲಿ ದಶಕಗಳಷ್ಟು ಹಳೆಯದಾದ ಮತ್ತು ಶಿಥಿಲಗೊಂಡಿದ್ದ ಮಾರುಕಟ್ಟೆ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಶನಿವಾರ ಯಶಸ್ವಿಯಾಗಿ ನಡೆಯಿತು.
ಹಲವು ದಿನಗಳಿಂದ ಈ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಲಾಗಿತ್ತು. ಇಂದು ಮಾರುಕಟ್ಟೆ ಆವರಣದಲ್ಲಿ ಜೆಸಿಬಿ ಯಂತ್ರಗಳ ಗರ್ಜನೆ ಕೇಳಿಬರುತ್ತಿದ್ದು, ಹಳೆಯ ಮಳಿಗೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹೊಸ ಮತ್ತು ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Chinthamani News: ಕಾಗತಿ ಗ್ರಾಮದಲ್ಲಿ ರೈತರಿಗೆ ಒಂದು ದಿನದ ತೋಟಗಾರಿಕೆ ತರಬೇತಿ ಕಾರ್ಯಕ್ರಮ
ನೆಲಸಮ ಕಾಮಗಾರಿ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮಾರುಕಟ್ಟೆಯ ಸುತ್ತಮುತ್ತ ಸಾರ್ವಜನಿಕರ ಓಡಾಟವನ್ನು ನಿಯಂತ್ರಿಸಲಾಗಿದ್ದು, ಪೊಲೀಸ್ ವಾಹನಗಳು ಮತ್ತು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ನೆಲಸಮ ಕಾರ್ಯ ಆರಂಭವಾಗುವ ಮೊದಲು ಮಳಿಗೆಗಳಲ್ಲಿದ್ದ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಮತ್ತು ಪೀಠೋಪಕರಣಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸು ತ್ತಿರುವುದು ಕಂಡುಬಂದಿತು. ಈ ಕಾಮಗಾರಿಯಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿ ಧೂಳು ಮತ್ತು ಅವಶೇಷಗಳ ರಾಶಿ ಬಿದ್ದಿದ್ದು, ನಗರಸಭೆ ವತಿಯಿಂದ ತೆರವು ಕಾರ್ಯ ಮುಂದು ವರಿದಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಮಾರು ಕಟ್ಟೆ ತಲೆಎತ್ತಲಿದ್ದು, ನಗರದ ವ್ಯಾಪಾರ ವಹಿವಾಟಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.