ವಿಶಿಷ್ಟವಾಗಿ ಜನ್ಮದಿನ ಆಚರಿಸಿದ ಹಿರಿಯ ವಕೀಲ ಮುನೇಗೌಡರ ಪುತ್ರ ಕಿಶಲ್ ವತ್ಸ
ನನ್ನ ಮಗನ ಕಳೆದ ೧೨ ವರ್ಷಗಳಿಂದಲೂ ನನ್ನ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಪರಿಪಾಠ ಬೆಳೆಸಿಕೊಂಡಿಲ್ಲ. ಬದಲಿಗೆ ಅನಾಥಾಶ್ರಮ, ವೃದ್ಧಾಶ್ರಮ,ಶಾಲೆಯ ಆವರಣ, ಇವತ್ತು ಮೀನುಗಾರರ ಕಾಲೋನಿ ಹೀಗೆ ಜನರ ನಡುವೆ ಆಚರಿಸುವ ಮೂಲಕ ಅವರ ಆಶೀರ್ವಾದ ವನ್ನು ಮಗನಿಗೆ ಕೊಡಿಸುತ್ತಾ ಬಂದಿದ್ದೇವೆ.

ಮೀನುಗಾರ ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಬೆಡ್ ಶೀಟ್ ವಿತರಿಸಿ ಸಿಹಿ ಹಂಚುವ ಮೂಲಕ ಹಿರಿಯ ವಕೀಲ ಕೆ.ಎಂ.ಮುನೇಗೌಡ ಅವರ ಮಗ ಕಿಶಲ್ ವತ್ಸ ಅವರ ೧೨ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. -

ಚಿಕ್ಕಬಳ್ಳಾಪುರ : ಮೀನುಗಾರ ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಬೆಡ್ ಶೀಟ್ ವಿತರಿಸಿ ಸಿಹಿ ಹಂಚುವ ಮೂಲಕ ಹಿರಿಯ ವಕೀಲ ಕೆ.ಎಂ.ಮುನೇಗೌಡ ಅವರ ಮಗ ಕಿಶಲ್ ವತ್ಸ ಅವರ ೧೨ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಚಿಕ್ಕಬಳ್ಳಾಪುರ ನಗರದ ವಾಸಿಯಾದ ಹಿರಿಯ ವಕೀಲರು ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಎಂ.ಮುನೇಗೌಡ ಅವರು ಗುಡಿಬಂಡೆ ಪಟ್ಟಣದಲ್ಲಿರುವ ಅಶಕ್ತ ಮೀನುಗಾರ ಕುಟುಂಬಗಳ ಸಂಕಷ್ಟವನ್ನು ಸ್ನೇಹಿತರ ಮೂಲಕ ತಿಳಿದು ಸುಮ್ಮನಾಗಲಿಲ್ಲ. ಬದಲಿಗೆ ತಮ್ಮ ಮಗ ಕಿಶಲ್ ವತ್ಸ ಅವರ ಹುಟ್ಟುಹಬ್ಬದಂದು ಕುಟುಂಬ ಸಮೇತ ಅಲ್ಲಿಗೆ ತೆರಳಿ ಹಿರಿಯರಿಗೆ ಬೆಡ್‌ಶೀಟ್‌ಗಳನ್ನು ವಿತರಿಸಿದರು.ಮಕ್ಕಳಿಗೆ ಸಿಹಿಹಂಚುವ ಮೂಲಕ ವಿನೂತನವಾಗಿ ಆಚರಿಸಿ ಇತರರಿಗೆ ಮಾದರಿ ಯಾಗಿದ್ದಾರೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಈ ಸಮಯದಲ್ಲಿ ಮಾತನಾಡಿದ ಕೆ.ಎಂ.ಮುನೇಗೌಡ, ನನ್ನ ಮಗನ ಕಳೆದ ೧೨ ವರ್ಷಗಳಿಂದಲೂ ನನ್ನ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಪರಿಪಾಠ ಬೆಳೆಸಿಕೊಂಡಿಲ್ಲ. ಬದಲಿಗೆ ಅನಾಥಾಶ್ರಮ, ವೃದ್ಧಾಶ್ರಮ,ಶಾಲೆಯ ಆವರಣ, ಇವತ್ತು ಮೀನುಗಾರರ ಕಾಲೋನಿ ಹೀಗೆ ಜನರ ನಡುವೆ ಆಚರಿಸುವ ಮೂಲಕ ಅವರ ಆಶೀರ್ವಾದವನ್ನು ಮಗನಿಗೆ ಕೊಡಿಸುತ್ತಾ ಬಂದಿದ್ದೇವೆ. ನಮ್ಮಂತೆ ಎಲ್ಲರೂ ಖುಷಿಯಾಗಿರಬೇಕು ಎನ್ನುವುದು ನಮ್ಮ ಉದ್ದೇಶ. ಮುಂದೆ ನನ್ನ ಮಗ ಸಹ ಇದೇ ಸಿದ್ಧಾಂತವನ್ನು ಪಾಲಿಸಲಿ ಎಂಬುದು ನಮ್ಮ ಇಚ್ಛೆ ಎಂದು ತಿಳಿಸಿದರು.

ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಡಾ. ಗುಂಪು ಮರದ ಆನಂದ್ ಅವರ ಸಹಕಾರದೊಂದಿಗೆ ಗುಡಿಬಂಡೆ ಪಟ್ಟಣಕ್ಕೆ ಬಂದು ಮೀನುಗಾರ ಕುಟುಂಬಗಳ ಜತೆ ಈ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದ್ದು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹುದು ಎಂದರು.