ರ‍್ಯಾಂಪ್ ಯೋಜನೆಯಡಿಯಲ್ಲಿ ಎಕ್ಸ್ ಪೋರ್ಟ್ ಪ್ರಮೋಷನ್ ಅಂಡ್ ಫೆಲಿಸಿಟೇಷನ್ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರ
ಅ.೧೦ ರಂದು ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಜಿಟಿಟಿಸಿ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಜಾಗೃತಿ ಕಾರ್ಯಗಾರವನ್ನು ಮಾಜಿ ಕೃಷಿ ಸಚಿವರು ಹಾಗೂ ಗೌರಿಬಿದನೂರು ಕೈಗಾರಿಕಾ ಸಂಘ ಅಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಉದ್ಘಾಟನೆ ನೆರವೇರಿಸಿದರು.

ರ‍್ಯಾಂಪ್ ಯೋಜನೆಯಡಿಯಲ್ಲಿ ಎಕ್ಸ್ ಪೋರ್ಟ್ ಪ್ರಮೋಷನ್ ಅಂಡ್ ಫೆಲಿಸಿಟೇಷನ್ ಕುರಿತು ಒಂದು ದಿನದ ಜಾಗೃತಿ ಕಾರ್ಯಗಾರ ನಡೆಯಿತು. -

ಚಿಕ್ಕಬಳ್ಳಾಪುರ : ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಏಅಖಿU, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಕೈಗಾರಿಕಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸರ್ಕಾರದ ರ‍್ಯಾಂಪ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿನ ಎಂಎಸ್‌ಎಂಇ ಉದ್ದಿಮೆದಾರರಿಗೆ ಎಕ್ಸ್ ಪೋರ್ಟ್ ಪ್ರಮೋಷನ್ ಅಂಡ್ ಫೆಲಿಸಿಟೇಷನ್ ಕುರಿತು ಅ.೧೦ ರಂದು ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಜಿಟಿಟಿಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಜಾಗೃತಿ ಕಾರ್ಯಗಾರವನ್ನು ಮಾಜಿ ಕೃಷಿ ಸಚಿವರು ಹಾಗೂ ಗೌರಿಬಿದನೂರು ಕೈಗಾರಿಕಾ ಸಂಘ ಅಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡುತ್ತಾ, ಎಂಎಸ್‌ಎಂಇ ಉದ್ದಿಮೆದಾರರನ್ನು ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದ ರಾಜಧಾನಿ ಬೆಂಗಳೂರುನೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಕೆಂಪೇಗೌಡ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೇವಲ ೩೫ ಕಿ.ಮೀ ಅಂತರದಲ್ಲಿದೆ.
ಇದನ್ನೂ ಓದಿ: Chikkaballapur News ಆರೋಪಿಯ ಶವಯಾತ್ರೆ ನಡೆಸಿದ ಆರ್‌ಪಿಐ ಮತ್ತು ಸಮತ ಸೈನಿಕ ದಳ ಕಾರ್ಯಕರ್ತರು
ಜಿಲ್ಲೆಯಲ್ಲಿ ಕೌಶಲ್ಯಭರಿತ ಮಾನವ ಸಂಪನ್ಮೂಲವಿದ್ದು ರಫ್ತು ಮಾಡಲು ಭೌಗೋಳಿಕವಾಗಿ ವಿಪುಲವಾದ ಅವಕಾಶವಿರುತ್ತದೆ. ನಮ್ಮ ಜಿಲ್ಲೆಯ ಪ್ರಮುಖ ರಫ್ತು ಆಧಾರಿತ ಬೆಳೆಗಳಾದ ಬೆಂಗಲೂರು ರೋಸ್, ಆನಿಯನ್, ಗ್ರೇಫ್ಸ್-ಬೆಂಗಳೂರು ಬ್ಲೂ, ಜಿಐಟ್ಯಾಗ್, ಮ್ಯಾಂಗೋ, ರ‍್ಕಿನ್ ಅಂಡ್ ಟೊಮೆಟೋ ಉತ್ಪನ್ನಗಳನ್ನು ರಫ್ತು ಮಾಡುವಲ್ಲಿ ಹೆಚ್ಚಿನ ಅವಕಾಶಗಳಿದ್ದು, ಈ ಕುರಿತು ರಫ್ತು ಉತ್ತೇಜನಕ್ಕಾಗಿ ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಬೆಂಗಳೂರು ವತಿಯಿಂದ ರಫ್ತು ಉತ್ತೇಜನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳಿಂದ ಹಲವು ಯೋಜನೆಗಳಿದ್ದು, ಇವುಗಳನ್ನು ಇಂದಿನ ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಿದ್ದು, ಈ ಯೋಜನೆಗಳನ್ನು ಉದ್ದಿಮೆದಾರರು ಸದುಪಯೋಗಪಡಿಸಿಕೊಂಡು ಜಿಲ್ಲೆಯಿಂದ ಹೆಚ್ಚು ಉತ್ಪನ್ನಗಳನ್ನು ರಫ್ತು ಮಾಡಿ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡುಗೆಯನ್ನು ನೀಡುವಂತೆ ಕರೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ರವರು ಮಾತನಾಡಿ, ಭಾರತ ಸರ್ಕಾರದ ಖಂಒಂ ಯೋಜನೆಯಡಿ ರಫ್ತು ಉದ್ಯಮ ಕೈಗೊಳ್ಳಲು ಮತ್ತು ಇತರೆ ಯೋಜನೆಗಳ ಕುರಿತು ಇರುವ ಅವಕಾಶ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರ್.ಎಂ.ವಿ ಇಂಡಸ್ಟ್ರೀಯಲ್ ಅಸೋಸಿಯೇಷನ್ ಅಧ್ಯಕ್ಷ ಹೆಚ್. ಆರ್. ಗೋವಿಂದರಾಜು, ಉಪಾಧ್ಯಕ್ಷ ಅನಿಲ್ ಕುಮಾರ್ ಡಿ.ಎನ್, ಗೌರಿಬಿದನೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಜಯಕೃಷ್ಣನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಶ್ರೀನಿವಾಸರೆಡ್ಡಿ, ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಟಿ.ಮುಕುಂದ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಲ್ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.