ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA BN Ravikumar: ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ: ಶಾಸಕ ಬಿ ಎನ್ ರವಿಕುಮಾರ್

ಅನಧಿಕೃತ ಬ್ಯಾನರ್ ಗಳ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮುಂದಿನ ದಿನಗಳಲ್ಲಿ ಸಭೆ ಮಾಡುತ್ತೇನೆ. ನಗರಸಭೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಪಡೆದು ಬ್ಯಾನರ್ ಅಳವಡಿಕೆ ಮಾಡಬೇಕು. ಜನಪ್ರತಿನಿಧಿಗಳು ಜನರ ಮಧ್ಯೆ ಯಾವ ರೀತಿ ಮಾತನಾಡಬೇಕು ಹೇಗೆ ನಡೆದುಕೊಳ್ಳಬೇಕು ಎನ್ನುವ ಜ್ಞಾನ ಅವರಿಗೆ ಇರಬೇಕು

ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ

-

Ashok Nayak
Ashok Nayak Jan 15, 2026 11:52 PM

ಶಿಡ್ಲಘಟ್ಟ: ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ದೂರು ದಾಖಲು ಮಾಡಿ ದ್ದಾರೆ. ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರೂ ದೂರು ದಾಖಲಿಸಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿರುವುದು ಕಾಂಗ್ರೆಸ್ ಪಕ್ಷ ತಲೆತಗ್ಗಿಸು ವಂತ ಕೆಲಸವಾಗಿದೆ ಎಂದು ಶಾಸಕ ಬಿ ಎನ್ ರವಿಕುಮಾರ್(MLA BN Ravikumar) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಕ್ಷೇತ್ರದಲ್ಲಿ ನೆಮ್ಮದಿ ಇರಬೇಕು ಯಾವುದೇ ರೀತಿಯ ಗಲಾಟೆ ಆಗಬಾರದು ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ ಎಂದು ಮುಖಂಡರಿಗೆ ತಿಳಿಸಿದ್ದೇನೆ ಎಂದರು.

ಇದನ್ನೂ ಓದಿ: Shidlaghatta News: ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಸುಪ್ತಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ: ಶಾಸಕ ಬಿ.ಎನ್.ರವಿಕುಮಾರ್

ಅನಧಿಕೃತ ಬ್ಯಾನರ್ ಗಳ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮುಂದಿನ ದಿನಗಳಲ್ಲಿ ಸಭೆ ಮಾಡುತ್ತೇನೆ. ನಗರಸಭೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಪಡೆದು ಬ್ಯಾನರ್ ಅಳವಡಿಕೆ ಮಾಡಬೇಕು. ಜನಪ್ರತಿನಿಧಿಗಳು ಜನರ ಮಧ್ಯೆ ಯಾವ ರೀತಿ ಮಾತನಾಡಬೇಕು ಹೇಗೆ ನಡೆದುಕೊಳ್ಳಬೇಕು ಎನ್ನುವ ಜ್ಞಾನ ಅವರಿಗೆ ಇರಬೇಕು. ರೌಡಿಗಳ ರೀತಿಯಲ್ಲಿ ವರ್ತನೆ ಮಾಡಿದರೆ ಜನಪ್ರತಿನಿಧಿಗಳು ಆಗ್ತಾರೆ ಅಂತ ಅವರು ಗಮನದಲ್ಲಿಟ್ಟುಕೊಂಡಿದ್ದಾರೆ.

ಇಂತಹ ವರ್ತನೆಗಳಿಗೆ ಸಮಯ ಬಂದಾಗ ಮತದಾರರು ಬುದ್ಧಿ ಕಲಿಸುತ್ತಾರೆ. ಇಂತಹ ಪ್ರಕರಣಗಳು ಮುಂದೆ ಮರುಕಳಿಸಬಾರದು ಎಂದರೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.