ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಹಸಿರು ಶಾಲುಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ

ಸಿ.ಎನ್.ಡಿ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಅಡ್ಡಿಯಿಲ್ಲ. ಆದರೆ, ಕೃಷಿ ಭೂಮಿಯಲ್ಲಿ ಹೇಗೆ ಕೈಗಾರಿಕೆ ಮಾಡಲು ಹೊರಟಿದ್ದೀರಿ. ರೈತರು ಎಲ್ಲೋಗಬೇಕು.ಈ ಮೂಲಕ ಸಾವಿರಾರು ಕುಟುಂಬ ಗಳನ್ನು ಬೀದಿಗೆ ತಳ್ಳುತ್ತಿದ್ದೀರಿ. ನಿಮ್ಮ ವೈಯಕ್ತಿಕ ಲಾಭಕ್ಕಾಗಿ ರೈತಸಂಘಟನೆಗಳ ಮುಖಂಡರನ್ನು ಟೀಕೆ ಮಾಡುತ್ತಿರು ವುದು ಎಷ್ಟು ಸರಿ

ಜಂಗಮಕೋಟೆಯಲ್ಲಿಯೇ ಕೈಗಾರಿಕೆ ಮಾಡುವ ಹಠವೇಕೆ ?

ನಿಮಗೆ ರೈತರ ಭೂಮಿಯಲ್ಲಿ ಕೈಗಾರಿಕೆ ಮಾಡಲು ಅನುಮತಿ ಕೊಟ್ಟವರು ಯಾರು. ಭೂಮಿಯೇ ಇಲ್ಲ, ರೇಷ್ಮೆ ಮಾರುಕಟ್ಟೆ ಯಾರ ಉದ್ದಾರಕ್ಕೆ. ನಿಮ್ಮ ಕಮಿಷನ್ ಗಾಗಿ ಕೈಗಾರೀಕರಣ ಮಾಡುತ್ತಿದ್ದೀರಾ ಸಚಿವರೇ ಎಂದು ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಗೋಪಾಲ ವಾಗ್ದಾಳಿ ನಡೆಸಿದರು.

Profile Ashok Nayak May 4, 2025 11:08 AM

ಚಿಕ್ಕಬಳ್ಳಾಪುರ : ನಿಮಗೆ ರೈತರ ಭೂಮಿಯಲ್ಲಿ ಕೈಗಾರಿಕೆ ಮಾಡಲು ಅನುಮತಿ ಕೊಟ್ಟವರು ಯಾರು. ಭೂಮಿಯೇ ಇಲ್ಲ, ರೇಷ್ಮೆ ಮಾರುಕಟ್ಟೆ ಯಾರ ಉದ್ದಾರಕ್ಕೆ. ನಿಮ್ಮ ಕಮಿಷನ್ ಗಾಗಿ ಕೈಗಾರೀಕರಣ ಮಾಡುತ್ತಿದ್ದೀರಾ ಸಚಿವರೇ ಎಂದು ಪ್ರಶ್ನಿಸಿದ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಹಸಿರು ಶಾಲುಗಳ ಬಗ್ಗೆ ಹಗುರವಾಗಿ ಮಾತನಾಡುವುದು ಬಿಟ್ಟರೆ ನಿಮಗೆ ಒಳ್ಳೆಯದು ಎಂದು ವಾಗ್ದಾಳಿ ನಡೆಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂಮಿ ಕೊಟ್ಟ ಪ್ರತಿ ರೈತನ ಕುಟುಂಬಕ್ಕೆ ಉದ್ಯೋಗ, ಭೂಮಿ ಖರೀದಿ ಯಲ್ಲಿ ಶೇ.6ರಷ್ಟು ತೆರಿಗೆ ಕಡಿಮೆ ಮಾಡಲಾಗುವುದು ಎಂದು ಹೇಳುತ್ತಿದ್ದೀರಿ. ಇದುವರೆಗೆ ಮಸ್ತೇನಹಳ್ಳಿ ವ್ಯಾಪ್ತಿಯಲ್ಲಿ ಎಷ್ಟು ಜನರಿಗೆ ತೆರಿಗೆ ಕಡಿಮೆ ಮಾಡಿದ್ದೀರಿ. ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೀರಾ. ನೀವು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು.

ಸಿ.ಎನ್.ಡಿ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಅಡ್ಡಿಯಿಲ್ಲ. ಆದರೆ, ಕೃಷಿ ಭೂಮಿಯಲ್ಲಿ ಹೇಗೆ ಕೈಗಾರಿಕೆ ಮಾಡಲು ಹೊರಟಿದ್ದೀರಿ. ರೈತರು ಎಲ್ಲೋಗಬೇಕು.ಈ ಮೂಲಕ ಸಾವಿರಾರು ಕುಟುಂಬ ಗಳನ್ನು ಬೀದಿಗೆ ತಳ್ಳುತ್ತಿದ್ದೀರಿ. ನಿಮ್ಮ ವೈಯಕ್ತಿಕ ಲಾಭಕ್ಕಾಗಿ ರೈತಸಂಘಟನೆಗಳ ಮುಖಂಡರನ್ನು ಟೀಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.  

ಇದನ್ನೂ ಓದಿ: Chikkaballapur News: ಮೇ 5 ರಿಂದ 17ರ ತನಕ ನಡೆಯುವ ಜಾತಿಗಣತಿಯಲ್ಲಿ ಛಲವಾದಿ ಸಮುದಾಯ ಹೊಲೆಯ ಎಂದೇ ನಮೂದಿಸಿ : ಕೈವಾರ ಮಂಜುನಾಥ್ ಮನವಿ

ಉಸ್ತುವಾರಿ ಸಚಿವರಾಗಿ ರೈತರನ್ನು ಉಳಿಸಲು ಯೋಜನೆ ರೂಪಿಸಿ. ರೈತರ ವಿರುದ್ಧ ಹೋದವ ರಾಗಲಿ ಸರಕಾರವಾಗಲಿ ಉಳಿದಿಲ್ಲ. ರೈತರನ್ನು ಕಡೆಗಣನೆ ಮಾಡಿದರೆ ಸೋಲು ಖಚಿತ. ಸಚಿವರೇ ರೈತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಕುಟುಕಿದರು.

ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಕೃಷಿ ಭೂಮಿಯಲ್ಲಿ ಕೈಗಾರೀ ಕರಣ ಮಾಡಲು ನಮ್ಮ ವಿರೋಧವಿದೆ. ಸಚಿವರು ರೈತರ ವಿರುದ್ಧ ಮಾತನಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ರೈತ ಸಂಘದ ಮುನಿರಾಜು ಮಾತನಾಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದವರು ಇದೀಗ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಶಾಸಕರು ಕುಮ್ಮಕ್ಕು ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಜರಿದ್ದರು.