MLA B N Ravikumar: ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಬಿ ಎನ್ ರವಿಕುಮಾರ್ ಚಾಲನೆ
ಮೆರವಣಿಗೆಯಲ್ಲಿ ಡೊಳ್ಳು, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಜ್ಜೆ ಹಾಕಿ ನರ್ತಿಸಿದರು. ಅಲ್ಲದೇ, ಮೆರವಣಿಗೆಯಲ್ಲಿ ಪ್ರತಿಯೊಂದು ಹಳ್ಳಿಯಿಂದ ಆಗಮಿಸಿದ ವಾಲ್ಮೀಕಿ ಯುವಕ ಪದಾಧಿಕಾರಿಗಳು ತಮ್ಮ ತಮ್ಮ ವಾಹನಗಳಿಗೆ ದೊಡ್ಡ ಪ್ರಮಾಣದಲ್ಲಿ ವಾಲ್ಮೀಕಿ ಭಾವ ಚಿತ್ರವಿರುವ ಪ್ಲೆಕ್ಸ್ಗಳನ್ನು ಕಟ್ಟಿಕೊಂಡು ತಂಡೋಪ ತಂಡವಾಗಿ ಆಗಮಿಸುವ ಮೂಲಕ ಮೆರವಣಿಗೆಯ ಮೆರಗು ಹೆಚ್ಚಿಸಿದರು.

-

ಶಿಡ್ಲಘಟ್ಟ : ನಗರದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ(Maharishi Valmiki Jayanti) ಯ ಅಂಗವಾಗಿ ನಡೆದ ಭಾವ ಚಿತ್ರ ಮೆರವಣಿಗೆ ಸಮಾಜದ ಬಾಂಧವರು ವಿವಿಧ ಕಲಾ ತಂಡಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ನಗರದ ಮಯೂರ ವೃತ್ತದ ಬಳಿಯ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರಂಭವಾದ ಮೆರವಣಿಗೆಗೆ ಶಾಸಕ ಬಿ.ಎನ್ ರವಿಕುಮಾರ್(MLA B N Ravikumar) ಅದ್ಧೂರಿ ಚಾಲನೆ ಮಾತನಾಡಿ ದ ಅವರು ದೇಶದ ಸಂಸ್ಕೃತಿ ಹಾಗೂ ಪರಂಪರೆ ಕುರಿತು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ದಾರ್ಶನಿಕ ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ . ಶ್ರೇಷ್ಠ ಚಿಂತನೆಗಳ ಮೂಲಕ ಜಗತ್ತಿನ ಆಸ್ತಿಯಾಗಿದ್ದಾರೆ’ ಎಂದರು.
ಇದನ್ನೂ ಓದಿ: Shidlaghatta News: ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ : ಪುಟ್ಟು ಆಂಜಿನಪ್ಪ ಭಾಗಿ
ಮೆರವಣಿಗೆಯಲ್ಲಿ ಡೊಳ್ಳು, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಜ್ಜೆ ಹಾಕಿ ನರ್ತಿಸಿದರು. ಅಲ್ಲದೇ, ಮೆರವಣಿಗೆಯಲ್ಲಿ ಪ್ರತಿಯೊಂದು ಹಳ್ಳಿಯಿಂದ ಆಗಮಿಸಿದ ವಾಲ್ಮೀಕಿ ಯುವಕ ಪದಾಧಿಕಾರಿಗಳು ತಮ್ಮ ತಮ್ಮ ವಾಹನಗಳಿಗೆ ದೊಡ್ಡ ಪ್ರಮಾಣದಲ್ಲಿ ವಾಲ್ಮೀಕಿ ಭಾವ ಚಿತ್ರವಿರುವ ಪ್ಲೆಕ್ಸ್ಗಳನ್ನು ಕಟ್ಟಿಕೊಂಡು ತಂಡೋಪ ತಂಡವಾಗಿ ಆಗಮಿಸುವ ಮೂಲಕ ಮೆರವಣಿಗೆಯ ಮೆರಗು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನ ಸಿಂಧು,ಇಓ ಹೇಮಾವತಿ ಅರ್, ನಗರಸಭೆ ಪೌರಾಯುಕ್ತೆ ಅಮೃತಾ ಜಿ, ಬಂಕ್ ಮುನಿಯಪ್ಪ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರು ಭಾಗವಹಿಸಿದ್ದರು.