Womens World Cup 2025: ಬಾಂಗ್ಲಾದೇಶ ವಿರುದ್ದ ಇಂಗ್ಲೆಂಡ್ ವನಿತೆಯರಿಗೆ 4 ವಿಕೆಟ್ ಜಯ!
2025ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಶುಭಾರಂಭ ಕಂಡಿದ್ದ ಬಾಂಗ್ಲಾದೇಶ ವನಿತೆಯರು, ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಬಹುತೇಕ ಗೆಲುವಿನ ಸನಿಹ ಬಂದಿದ್ದ ಬಾಂಗ್ಲಾಗೆ ಕೊನೆಯ ಹೀದರ್ ನೈಟ್ ಅರ್ಧಶತಕದ ಮೂಲಕ ಗೆಲುವನ್ನು ತನ್ನತಾ ಕಸಿದುಕೊಂಡರು.

ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಮಹಿಳಾ ತಂಡಕ್ಕೆ 4 ವಿಕೆಟ್ ಜಯ. -

ಗುವಾಹಟಿ: 2025ರ ಮಹಿಳಾ ವಿಶ್ವಕಪ್ (womens World Cup 2025) ಟೂರ್ನಿಯಲ್ಲಿ ದೊಡ್ಡ ಆಘಾತವೊಂದು ಸ್ವಲ್ಪದರಲ್ಲೇ ತಪ್ಪಿತು. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ( ENGW vs BANW Highlights) ಬಾಂಗ್ಲಾದೇಶ ಒಂದು ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತ್ತು. ಬಾಂಗ್ಲಾಗೆ ಗೆಲುವು ಖಚಿತವೆನಿಸಿದರೂ ಅಂತಿಮವಾಗಿ ಸೋಲು ಒಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ಕೇವಲ 178 ರನ್‌ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ 30ನೇ ಓವರ್‌ನಲ್ಲಿ 103 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಸೋಲಿನ ಭೀತಿಗೆ ಒಳಗಾಗಿತ್ತು. ನಂತರ ಹೀದರ್‌ನೈಟ್ ಅರ್ಧಶತಕದ ಬಲದಿಂದ ಇಂಗ್ಲೆಂಡ್, ನಾಲ್ಕು ವಿಕೆಟ್‌ಗಳಿಂದ ಪಂದ್ಯವನ್ನು ರೋಚಕ ಗೆಲುವು ಸಾಧಿಸಿತು.
179 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಮಹಿಳಾ ತಂಡವು ಕಳಪೆ ಆರಂಭವನ್ನು ಪಡೆದಿತ್ತು. ವಿಕೆಟ್ ಕೀಪರ್ ಎಮಿ ಜೋನ್ಸ್ ಕೇವಲ ಒಂದು ರನ್‌ಗೆ ಮರುಫಾ ಅಖ್ತರ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಟಾಮಿ ಬಿಮೌಂಟ್ 13 ರನ್‌ಗಳಿಗೆ ನಿರ್ಗಮಿಸಿದರು. ಹೀದರ್ ನೈಟ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಮೂರನೇ ವಿಕೆಟ್‌ಗೆ 40 ರನ್‌ಗಳನ್ನು ಸೇರಿಸಿದರು. ನಾಯಕಿ ಬ್ರಂಟ್ 41 ಎಸೆತಗಳಲ್ಲಿ 32 ರನ್ ಗಳಿಸಿ ಫಾತಿಮಾ ಖಾತುನ್‌ಗೆ ಔಟ್ ಆದರು. ನಂತರ ಖಾತುನ್ ತಮ್ಮ ಮ್ಯಾಜಿಕ್ ಪ್ರದರ್ಶಿಸಿದರು. ಸೋಫಿ ಡಂಕ್ಲಿ ತನ್ನ ಖಾತೆ ತೆರೆಯಲು ಅವಕಾಶ ನೀಡಲಿಲ್ಲ ಮತ್ತು ಎಮ್ಮಾ ಲಂಬ್ ಒಂದು ರನ್ ಗಳಿಸಿದ ನಂತರ ಔಟಾದರು. ಇಂಗ್ಲೆಂಡ್ ತಂಡದ ಅರ್ಧದಷ್ಟು ಆಟಗಾರರು 78 ರನ್‌ಗಳಿಗೆ ಪೆವಿಲಿಯನ್ ಸೇರಿದ್ದರು.
ಐಸಿಸಿ ಸೆಪ್ಟಂಬರ್ ತಿಂಗಳ ಪ್ರಶಸ್ತಿಗೆ ಮೂವರು ಭಾರತೀಯರು ನಾಮ ನಿರ್ದೇಶನ!
ಅಲೆಕ್ಸ್ ಕ್ಯಾಪ್ಸಿ 20 ರನ್ ಗಳಿಸಿ ಔಟಾದರು ಮತ್ತು ಇಂಗ್ಲೆಂಡ್ ಕೇವಲ 103 ರನ್‌ಗಳನ್ನು ತಲುಪಿತ್ತು. ಇಲ್ಲಿಂದ ತಂಡದ ಗೆಲುವು ಕಷ್ಟಕರವೆಂದು ತೋರಿತು ಆದರೆ ಒಂದು ತುದಿಯಲ್ಲಿ ಹಿಡಿತ ಸಾಧಿಸಿದ್ದ ಹೀದರ್ ನೈಟ್‌ಗೆ ಚಾರ್ಲಿ ಡೀನ್ ಬೆಂಬಲ ನೀಡಿದರು. ನೈಟ್ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ನೈಟ್ ಮತ್ತು ಡೀನ್ 100 ಎಸೆತಗಳಲ್ಲಿ 79 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಗಳಿಸಿದರು ಮತ್ತು ಇಂಗ್ಲೆಂಡ್ ಗೆದ್ದಿತು. ಪಂದ್ಯಶ್ರೇಷ್ಠ ಹೀದರ್ ನೈಟ್ 111 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಡೀನ್ 56 ಎಸೆತಗಳಲ್ಲಿ 27 ರನ್‌ಗಳ ಇನಿಂಗ್ಸ್ ಆಡಿದರು. ಬಾಂಗ್ಲಾದೇಶ ಪರ ಫಾತಿಮಾ ಖಾತುನ್ 10 ಓವರ್‌ಗಳಲ್ಲಿ 16 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು.
ಶೋಭಾನಾ ಮೊಸ್ತಾರಿ ಅರ್ಧಶತಕ
ಬಾಂಗ್ಲಾದೇಶದ ಪರ ಶೋಭನಾ ಮೊಸ್ತಾರಿ 108 ಎಸೆತಗಳಲ್ಲಿ 60 ರನ್ ಗಳಿಸಿದರು ಮತ್ತು ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಬಿಯಾ ಖಾನ್ 27 ಎಸೆತಗಳಲ್ಲಿ 43 ರನ್ ಗಳಿಸಿದರು. ಇಂಗ್ಲೆಂಡ್ ಪರ ಎಕ್ಲೆಸ್ಟನ್ 24 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಇಂಗ್ಲೆಂಡ್‌ನ ಬೌಲರ್‌ಗಳಲ್ಲಿ ಆಫ್-ಸ್ಪಿನ್ನರ್ ಷಾರ್ಲೆಟ್ ಡೀನ್ ಹತ್ತು ಓವರ್‌ಗಳಲ್ಲಿ 28 ರನ್‌ಗಳಿಗೆ ಎರಡು ವಿಕೆಟ್ ಪಡೆದರು ಮತ್ತು ಆಲಿಸ್ ಕ್ಯಾಪ್ಸಿ ಎಂಟು ಓವರ್‌ಗಳಲ್ಲಿ 31 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಾಂಗ್ಲಾದೇಶ, ಉತ್ತಮ ಆರಂಭವನ್ನು ಪಡೆದಿತ್ತು. ಶರ್ಮೀನ್ ಅಖ್ತರ್, ಸೋಫಿಯಾ ಎಕ್ಲೆಸ್ಟೋನ್‌ಗೆ ವಿಕೆಟ್ ಒಪ್ಪಿಸಿದರು.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
ಎಡಗೈ ಸ್ಪಿನ್ನರ್ ಲಿನ್ಸೆ ಸ್ಮಿತ್, ಶರ್ಮೀನ್ ಮತ್ತು ರುಬಿಯಾ ಹೈದರ್ ಮುಕ್ತವಾಗಿ ಆಡದಂತೆ ತಡೆದರು. ಸ್ಮಿತ್ ಒಂದು ತುದಿಯಿಂದ ಉತ್ತಮವಾಗಿ ಬೌಲ್ ಮಾಡುವುದನ್ನು ಮುಂದುವರಿಸಿದರು. ಮೂರನೇ ಓವರ್‌ನಲ್ಲಿ ಹೈದರ್ ಅವರನ್ನು ಔಟ್ ಮಾಡುವ ಮೂಲಕ ಬೆಲ್ ಬಾಂಗ್ಲಾದೇಶಕ್ಕೆ ಮೊದಲ ಹೊಡೆತ ನೀಡಿದರು. ಹೈದರ್ ಹೈ-ಫ್ಲೈಯಿಂಗ್ ಶಾಟ್ ಆಡಿದರು ಮತ್ತು ಸೋಫಿಯಾ ಡಂಕ್ಲಿ ಅದ್ಭುತ ಕ್ಯಾಚ್ ಪಡೆದರು.