Chinthamani News: ನಾಯಂದ್ರಹಳ್ಳಿಯಲ್ಲಿ ಎಂ.ಎಸ್.ಡಬ್ಲ್ಯೂ ಗ್ರಾಮೀಣ ಕಲಿಕಾ ಶಿಬಿರಕ್ಕೆ ಚಾಲನೆ
ಸ್ವಸಹಾಯ ಸಂಘಗಳು, ಮಹಿಳಾ ಸಂಘಟನೆಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳು ಮಹಿಳೆ ಯರ ಜೀವನ ಭದ್ರತೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ. ಮಹಿಳೆಯರಿಗೆ ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಅವರ ಜೀವನ ಮಟ್ಟ ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಎಲ್ಲಾ ಮಹಿಳೆಯರು ಉಪಯೋಗಪಡಿಸಿಕೊಂಡು ಮುಂದಕ್ಕೆ ಸಾಗಬೇಕಿದೆ
ನಾಯಂದ್ರಹಳ್ಳಿಯಲ್ಲಿ ಏಳು ದಿನಗಳ ಕಾಲ ವಿದ್ಯಾರ್ಥಿಗಳ ಕಲಿಕೆಗಾಗಿ ಬೆಂಗಳೂರಿನ ಎಸ್‌ಈಏ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿರುವ ಒಂದು ವಾರದ ವಿಶೇಷ ಗ್ರಾಮೀಣ ಕಲಿಕಾ ಶಿಬಿರಕ್ಕೆ ಚಾಲನೆ ನೀಡಲಾಯಿತು. -
ಚಿಂತಾಮಣಿ: ನಾಯಂದ್ರಹಳ್ಳಿಯಲ್ಲಿ ಏಳು ದಿನಗಳ ಕಾಲ ವಿದ್ಯಾರ್ಥಿಗಳ ಕಲಿಕೆಗಾಗಿ ಬೆಂಗಳೂರಿನ ಎಸ್‌ಈಏ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿರುವ ಒಂದು ವಾರದ ವಿಶೇಷ ಗ್ರಾಮೀಣ ಕಲಿಕಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಹಿಳಾ ಉದ್ಯಮಿ ಹಾಗೂ ವೇದಿಕ್ ಎಂಟರ್ ಪ್ರೆöÊಸರ್ಸ್ನ ಸ್ಥಾಪಕಿ ಗುಂಡಮನತ್ತ ರತ್ಮಮ್ಮ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸದೃಢಗೊಂಡು ಜೀವನವನ್ನು ರೂಪಿಸಿಕೊಳ್ಳಲು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕೊಂಡು ಕಿರು ಉದ್ಯಮಗಳನ್ನು ಕಟ್ಟುವ ಕಡೆಗೆ ಮುಂದಕ್ಕೆ ಬರಬೇಕು. ಮಹಿಳೆಯರು ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಕೃಷಿ, ಪಶುಸಂಗೋಪನೆ, ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದಾಗ್ಯೂ, ಅವರ ಜೀವನ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸ್ವಸಹಾಯ ಸಂಘಗಳು, ಮಹಿಳಾ ಸಂಘಟನೆಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳು ಮಹಿಳೆಯರ ಜೀವನ ಭದ್ರತೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ. ಮಹಿಳೆಯರಿಗೆ ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಎಲ್ಲಾ ಮಹಿಳೆಯರು ಉಪಯೋಗಪಡಿಸಿಕೊಂಡು ಮುಂದಕ್ಕೆ ಸಾಗಬೇಕಿದೆ ಎಂದು ತಿಳಿಸಿದರು.
ಉದ್ಯಮ ಕಟ್ಟುವುದು ಮತ್ತು ಮುನ್ನಡೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಅಷ್ಟಕ್ಕೆ ಮಹಿಳೆಯರು ಕುಗ್ಗುವ ಅಗತ್ಯವಿಲ್ಲ. ಆರಂಭದಲ್ಲಿ ನಾನು ಉದ್ಯಮ ಆರಂಭಿಸಿದ ಸಮಯದಲ್ಲಿ ಚಿಕ್ಕದಾಗಿಯೇ ಆರಂಭಿಸಿದೆ. ಅದರ ಜೊತೆಗೆ, ನಮಗಿರುವ ಜಮೀನುನಲ್ಲಿಯೇ ಕೃಷಿಯಲ್ಲಿ ತೊಡಗಿಸಿಕೊಂಡೆ. ಇವೆರಡನ್ನೂ ಸಮ ಪ್ರಮಾಣದಲ್ಲಿ ಮುನ್ನಡೆಸಿಕೊಂಡು ಬಂದಿರುವೆ. ಇದೀಗ ನಾವು ಮಾಡುವಂತಹ ಉತ್ಪನ್ನಗಳು ಕೋಲಾರದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆದಿದೆ. ಇದೇ ಮಾದರಿಯಲ್ಲಿ ಹಳ್ಳಿಯ ಮಹಿಳೆಯರು ಸಹ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಕವಿ ಶಶಿರಾಜ್ ಹರತಲೆ ಮಾತನಾಡಿ, ಗ್ರಾಮಗಳು ನಮ್ಮ ನೆಲ ಮೂಲದ ಅಸ್ಮಿತೆಗಳಾಗಿವೆ. ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ ಮಾತನಾಡಿ, ಗ್ರಾಮಗಳು ನಮ್ಮ ನಾಡಿನ ಅಸ್ಮಿತೆ ಮತ್ತು ನೆಲ ಸಂಸ್ಕೃತಿಯ ಜೀವಾಳವಾಗಿವೆ. ಭಾರತದ ಆತ್ಮ ಗ್ರಾಮಗಳಲ್ಲಿ ನೆಲೆಸಿದೆ ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ. ಗ್ರಾಮಗಳು ಕೇವಲ ಜನವಸತಿ ಪ್ರದೇಶಗಳಲ್ಲ, ಅವು ನಮ್ಮ ಸಂಸ್ಕೃತಿ, ಪರಂಪರೆ, ಕೃಷಿ ಮತ್ತು ಸಾಮಾಜಿಕ ಮೌಲ್ಯಗಳ ಪ್ರತೀಕಗಳಾಗಿವೆ ಎಂದು ಹೇಳಿದರು.
ಶತಮಾನಗಳಿಂದಲೂ ಹಳ್ಳಿಗಳಲ್ಲಿ ಜನರು ಕೂಡಿ ಜೀವನ ನಡೆಸುತ್ತಿದ್ದಾರೆ. ಅದನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕು. ಜಾತಿ, ಮತ, ಧರ್ಮ ಹಾಗೂ ರಾಜಕೀಯ ಕಾರಣಗಳಿಗಾಗಿ ಹಳ್ಳಿಯ ಒಗ್ಗಟ್ಟನ್ನು ಮುರಿಯಬಾರದು. ಎಲ್ಲರೂ ಒಗ್ಗೂಡಿ ಹಳ್ಳಿಗಳನ್ನು ಮರು ಕಟ್ಟುವ ಕಡೆಗೆ ಹೆಜ್ಜೆಗಳನ್ನಿಡಬೇಕು ಎಂದು ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದ ಜೀವಾಳ ಕೃಷಿ. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು ಒಂದಕ್ಕೊAದು ಸಂಬAಧವನ್ನು ಹೊಂದಿದೆ. ಇಂತಹ ಸಮಯದಲ್ಲಿ ಕೃಷಿಕರು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗಬಾರದು. ಕಾರ್ಪೋರೇಟ್ ಕಂಪನಿಗಳಿಗೆ, ರಿಯಲ್ ಎಸ್ಟೇಟ್ ಗಳಿಗೆ ಮಾರಾಟ ಮಾಡುವು ದಕ್ಕಿಂತ ಮುನ್ನ ಯೋಚಿಸಬೇಕು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ಬಹಳಷ್ಟು ರೈತರು ಈಗ ಅಲ್ಲಿಯೇ ಕೂಲಿಯಾಳುಗಳಾಗಿ ದುಡಿಯುವಂತಾಗಿದೆ. ಆ ಪರಿಸ್ಥಿತಿ ನಮ್ಮಲ್ಲಿಯೂ ಬರಬಾರದಂತೆ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಗುಂಡಪ್ಪ ದೇವಿಕೆರೆ, ಗ್ರಾಮದ ಹಾಲಿನ ಡೈರಿ ಅಧ್ಯಕ್ಷ ರಮೇಶ್, ಮಾಜಿ ಡೈರಿ ಅಧ್ಯಕ್ಷ ರಾಮಕೃಷ್ಣಪ್ಪ, ಗ್ರಾಮದ ಮುಖಂಡರಾದ ಹನುಮಂತಪ್ಪ, ನಾರಾಯಣಸ್ವಾಮಿ, ದಾಸಪ್ಪನವರ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಪ್ಪ, ಗೋಪಾಲಗೌಡ ಹಾಗೂ ಕಾಲೇಜಿನ ಆಡಳಿತ ಸಂಯೋಜಕ ರಾದ ಅಂಬರೀಶ್ ಜಿ ಎಸ್, ಶಿಬಿರದ ಸಂಯೋಜಕರಾದ ಮಮತ ವಿ, ಭವ್ಯ, ವಸಂತ ಕುಮಾರ್ ಎಚ್ ಆರ್ ಉಪಸ್ಥಿತರಿದ್ದರು. ಈ ವೇಳೆ ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್, ಮುನಿರಾಜು, ಸುಮಾ ಸೇರಿದಂತೆ ಮತ್ತಿತರರ ತಂಡದಿಂದ ಹಸಿರು ಪದಗಳನ್ನು ಪ್ರಸ್ತುತಪಡಿಸ ಲಾಯಿತು.