ನರೇಂದ್ರ ಮೋದಿ ದೇಶ ಕಂಡ ಯಶಸ್ವಿ ಪ್ರಧಾನಿ ಹಾಗೂ ದೂರ ದೃಷ್ಠಿಯ ನೇತಾರ : ಬಿಜೆಪಿ ತಾಲೂಕು ಅಧ್ಯಕ್ಷ ಕೋಡಿರ್ಲಪ್ಪ
ವಿದೇಶಿ ಪ್ರವಾಸದ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ ದ್ದಾರೆ. ವಿವಿಧ ಒಪ್ಪಂದಗಳ ಮೂಲಕ ಬಂಡವಾಳ ತಂದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನ(Make in India Campaign)ವು 2047ರೊಳಗೆ ಅಭಿವೃದ್ಧಿ ಶೀಲ ಭಾರತ ನಿರ್ಮಾಣದ ಅವರ ಸ್ಪಷ್ಟ ದೃಷ್ಟಿಕೋನ ಮತ್ತು ಕಾರ್ಯಪಥವನ್ನು ಪ್ರತಿಬಿಂಬಿಸು ತ್ತದೆ ಎಂದರು.
ಪ್ರಧಾನಿ ಮೋದಿ ದೇಶ ಕಂಡ ಯಶಸ್ವಿ ಪ್ರಧಾನಿ ಹಾಗೂ ದೂರ ದೃಷ್ಠಿಯ ನೇತಾರ ಎಂದು ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಕೋಡಿರ್ಲಪ್ಪ ಹೇಳಿದರು. -
ಗೌರಿಬಿದನೂರು: ಪ್ರಧಾನಿ ಮೋದಿ ದೇಶ ಕಂಡ ಯಶಸ್ವಿ ಪ್ರಧಾನಿ ಹಾಗೂ ದೂರ ದೃಷ್ಠಿಯ ನೇತಾರ ಎಂದು ಭಾರತೀಯ ಜನತಾ ಪಾರ್ಟಿ(BJP)ಯ ತಾಲೂಕು ಅಧ್ಯಕ್ಷ ಕೋಡಿರ್ಲಪ್ಪ ಹೇಳಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಯಶಸ್ವಿಯಾಗಿ ಹನ್ನೆರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಲ್ಲೂಕಿನ ಅಲಕಾಪುರ ಗ್ರಾಮದ ಶ್ರೀ ಚನ್ನಸೋಮೇಶ್ವರ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು.
ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದೇಶಕ್ಕೆ ಮಾದರಿ ಅಭಿವೃದ್ಧಿಯನ್ನು ಮಾಡಿ ತೋರಿಸಿದ ನರೇಂದ್ರ ಮೋದಿ(Narendra Modi) ಅವರು ನಿರಂತರವಾಗಿ ಹನ್ನೆರಡು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ. ಅವರ ಅವಧಿಯಲ್ಲಿ ಭ್ರಷ್ಠಾಚಾರಕ್ಕೆ ಅವಕಾಶ ನೀಡದೆ, ಪಾರದರ್ಶಕ ಆಡಳಿತ ನೀಡಿದ್ದಾರೆ. ಜನಪರ ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಇದನ್ನೂ ಓದಿ: Chikkaballapur News: ವೈಭವ ಮತ್ತು ಲವಲವಿಕೆಯಿಂದ 91ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ
ವಿದೇಶಿ ಪ್ರವಾಸದ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ ದ್ದಾರೆ. ವಿವಿಧ ಒಪ್ಪಂದಗಳ ಮೂಲಕ ಬಂಡವಾಳ ತಂದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನ(Make in India Campaign)ವು 2047ರೊಳಗೆ ಅಭಿವೃದ್ಧಿ ಶೀಲ ಭಾರತ ನಿರ್ಮಾಣದ ಅವರ ಸ್ಪಷ್ಟ ದೃಷ್ಟಿಕೋನ ಮತ್ತು ಕಾರ್ಯಪಥವನ್ನು ಪ್ರತಿಬಿಂಬಿಸು ತ್ತದೆ ಎಂದರು.
ನಗರಸಭೆ ಮಾಜಿ ಸದಸ್ಯ ಮಾರ್ಕೆಟ್ ಮೋಹನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಜಾಗತಿಕ ಮಟ್ಟದ ಶ್ರೇಷ್ಠ ನಾಯಕ. ತಮ್ಮ ನಡೆಗಳ ಮೂಲಕ ಭಾರತಕ್ಕೆ ವಿಶ್ವ ಮನ್ನಣೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಕರೋನಾದಂತಹ ಸಂದರ್ಭ ದಲ್ಲಿ ಅನೇಕ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಆದರೆ ಮೋದಿ ಅವರು ಬೃಹತ್ ದೇಶವನ್ನು ಆರ್ಥಿಕ ಸಮತೋಲನದ ಹಾದಿಯಲ್ಲಿ ಕೊಂಡೊಯ್ಯುವ ಮೂಲಕ ವಿಶ್ವದ ಗಮನ ಸೆಳೆಯುವಂತೆ ಮಾಡಿದರು ಎಂದರು.
ಪಕ್ಷದ ನಗರ ಅಧ್ಯಕ್ಷ ವೇಣುಮಾದವ, ರಮೇಶ್ ರಾವ್ ಶೆಲ್ಕೇ,ಸೋಮಶೇಖರ್, ಮಲ್ಲಿಕಾರ್ಜುನ್, ಕೃಷ್ಣಾರೆಡ್ಡಿ,ಡಿ. ರಾಜಕುಮಾರ್, ಮಂಜು, ಮುದ್ದುಕೃಷ್ಣ, ಅರುಣಮ್ಮ, ಲಕ್ಷ್ಮಿ ನರಸಮ್ಮ, ಸೇರಿದಂತೆ ಇನ್ನಿತರ ಮುಖಂಡರು ಕಾರ್ಯಕರ್ತರು ಹಾಜರಿದ್ದರು.