ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಎಳ್ಳಷ್ಟು ಸಹಾಯವಾದರೂ ಬೆಟ್ಟದಷ್ಟು ಕೃತಜ್ಞತೆಯ ಗುಣ ಬೆಳೆಸಿಕೊಳ್ಳಬೇಕು: ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ

ಒಂದು ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಒಟ್ಟು ಫಲಿತಾಂಶವನ್ನು ಅಗಲಗುರ್ಕಿ ಬಿಜಿಎಸ್ ಶಾಲೆಯ ಮಕ್ಕಳು ಪಡೆದಿದ್ದಾರೆ. 620 ಅಂಕಗಳನ್ನು 16 ಮಕ್ಕಳು ಪಡೆದಿದ್ದಾರೆ. ಇದು ತಾಲೂಕಿನ ಹೆಮ್ಮೆ ಮಾತ್ರ ವಲ್ಲ ಜಿಲ್ಲೆಯ ಹಿರಿಮೆಯಾಗಿದೆ.ಅಜ್ಞಾನದಿಂದ ಜ್ಞಾನದ ಕಡೆಗೆ ಭಯದಿಂದ ನಿರ್ಭಯದ ಕಡೆ ಮುನ್ನಡೆಸುವವರೇ ಗುರುಗಳಾಗುತ್ತಾರೆ. ಎಂದಿಗೂ ಮಕ್ಕಳನ್ನು ನಿರುತ್ಸಾಹಿಗಳನ್ನಾಗಿ ಮಾಡಬೇಡಿ

ಎಳ್ಳಷ್ಟು ಸಹಾಯವಾದರೂ ಬೆಟ್ಟದಷ್ಟು ಕೃತಜ್ಞತೆಯ ಗುಣ ಬೆಳೆಸಿಕೊಳ್ಳಬೇಕು

-

Profile
Ashok Nayak Jun 13, 2026 11:44 PM

ಚಿಕ್ಕಬಳ್ಳಾಪುರ: ಎಳ್ಳಷ್ಟು ಸಹಾಯವಾದರೂ ಬೆಟ್ಟದಷ್ಟು ಕೃತಜ್ಞತೆಯ ಗುಣ ಬೆಳೆಸಿಕೊಳ್ಳಬೇಕು. ಈ ಭಾವ ವಿಶೇಷವಾಗಿ ಸಮಾಜದಲ್ಲಿ ಪೋಷಕರಲ್ಲಿ ಮೊದಲು ಬರಬೇಕಿದೆ. ಕೃತಜ್ಞತೆ ಇಲ್ಲದ ಯಾವುದೇ ಬದುಕು ವ್ಯರ್ಥ. ಮಕ್ಕಳ ಭವಿಷ್ಯವೇ ತಮ್ಮ ಬದುಕು ಎಂದು ಭಾವಿಸುವ ಗುರುಗಳನ್ನು ಗೌರವಿಸುವ ಸಂಸ್ಕೃತಿ ಸಂಸ್ಕಾರ ನಮ್ಮದಾಗಬೇಕಿದೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ತಿಳಿಸಿದರು.

ನಗರ ಹೊರವಲಯದ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಶನಿವಾರ ನಡೆದ ಗುರುವಂದನೆ -2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಯ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಮಾಡಿರುವ ಸಾಧನೆ ಸಾಮಾನ್ಯವಲ್ಲ. ನಮ್ಮದು ಫಲಿತಾಂಶವಲ್ಲ ಇತಿಹಾಸ. ಪೋಷಕರ ಕಸನಸಿಗೆ ನೀರೆರೆಯುವ ಕೆಲಸ ವನ್ನು ಶ್ರೀಮಠ ಪ್ರಾಮಾಣಿಕವಾಗಿ ಮಾಡುತ್ತಿದೆ. ಪೋಷಕರು ತಮ್ಮ ಮಕ್ಕಳ ಬೆಳವಣಿಗೆಯಲ್ಲಿಯೇ ಸಂತೋಷ ಹುಡುಕಬೇಕೇ ವಿನಃ ಪರಸ್ಪರ ಹೋಲಿಕೆಯಿಂದ ಅಲ್ಲವೇ ಅಲ್ಲ. 1 ರಿಂದ ಪಿಯುಸಿ ವರೆಗಿನ ಶಿಕ್ಷಣ ಬಹಳ ಮುಖ್ಯ. ಗುಣಮಟ್ಟದಿಂದ ಕೂಡಿದ್ದರೆ ಮುಂದಿನರು ಚೆನ್ನಾಗಿರಲಿದೆ ಎಂದರು.

ಇದನ್ನೂ ಓದಿ: Chief Justice Vibhubakru: ಪರಿಸರ ಸಂರಕ್ಷಣೆ ಸಮುದಾಯದ ಅಸ್ತಿತ್ವಕ್ಕೆ ಅತ್ಯಾವಶ್ಯಕ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅಭಿಮತ

ಒಂದು ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಒಟ್ಟು ಫಲಿತಾಂಶವನ್ನು ಅಗಲಗುರ್ಕಿ ಬಿಜಿಎಸ್ ಶಾಲೆಯ ಮಕ್ಕಳು ಪಡೆದಿದ್ದಾರೆ. 620 ಅಂಕಗಳನ್ನು 16 ಮಕ್ಕಳು ಪಡೆದಿದ್ದಾರೆ. ಇದು ತಾಲೂಕಿನ ಹೆಮ್ಮೆ ಮಾತ್ರವಲ್ಲ ಜಿಲ್ಲೆಯ ಹಿರಿಮೆಯಾಗಿದೆ. ಅಜ್ಞಾನದಿಂದ ಜ್ಞಾನದ ಕಡೆಗೆ ಭಯದಿಂದ ನಿರ್ಭಯದ ಕಡೆ ಮುನ್ನಡೆಸುವವರೇ ಗುರುಗಳಾಗುತ್ತಾರೆ. ಎಂದಿಗೂ ಮಕ್ಕಳನ್ನು ನಿರುತ್ಸಾಹಿ ಗಳನ್ನಾಗಿ ಮಾಡಬೇಡಿ ಎಂದರು.

ಇದೇ ಮೊದಲ ಬಾರಿಗೆ ಬಿಜಿಎಸ್ ಅಗಲಗುರ್ಕಿ ಶಾಲೆಯಲ್ಲಿ ಗುರುವಂದನೆ ಎಂಬ ಸಾರ್ಥಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪರಂಪರೆ ಮುಂದುವರೆದುಕೊಂಡು ಹೋಗಬೇಕಿದೆ. ಮೊದಲ ಕಾರ್ಯಕ್ರಮದಲ್ಲಿಯೇ ಅಂತಹ ಭರವಸೆ ಮೂಡಿಸಿರುವ ಪ್ರಾಂಶುಪಾಲ ಮೋಹನ್‌ ಕುಮಾರ್ ಅವರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರದ ಪರಂಪರೆ ಯನ್ನು ಮಕ್ಕಳಲ್ಲಿ ಬಿತ್ತಬೇಕು. ಗುರುವಂದನೆ ಜೊತೆಗೆ ಮಾತಾ ಪಿತೃವಂದನೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಆಯೋಜಿಸಲಾಗಿದೆ.

ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಮಾತನಾಡಿ, ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಪಡೆದಿರುವ ಪೋಷಕರ ಜವಾಬ್ದಾರಿ ಹೆಚ್ಚಿದೆ. ಈ ಒಂದು ವರ್ಷ ಪರ್ಯಂತ ತಮ್ಮ ಮಕ್ಕಳು ಮೊಬೈಲ್ ಮತ್ತು ಸ್ನೇಹಿತರ ಗೀಳಿಗೆ ಬೀಳದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಹೊರಬೇಕು. ಮಕ್ಕಳಿಗೆ ಯಾವುದು ಬೇಡ ಯಾವುದು ಬೇಕು ಎಂಬ ಬಗ್ಗೆ ನೀವೇ ನಿರ್ಧಾರ ಮಾಡಿ. ಅದರಂತೆ ನೀವು ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಹಕಾರ ನೀಡಿದ್ದಲ್ಲಿ ನೀವು ಬಯಸಿದ ಫಲಿತಾಂಶ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಮಕ್ಕಳ ಏಳಿಗೆಗಾಗಿ ನಮ್ಮ ಸಂಸ್ಥೆಯ ಶಿಕ್ಷಕರು ಭಾನುವಾರ ಎನ್ನದೆ ಹಬ್ಬ ಹರಿದಿನ ನೋಡದೆ ಮಕ್ಕಳಿಗೆ ಪಾಠ ಪ್ರವಚನ ಮಾಡಿದ್ದಾರೆ. ಹೀಗಾಗಿ, ಇದೇ ಮೊದಲ ಬಾರಿಗೆ ಸಮರ್ಪಣಾ ಭಾವದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಲಾಗಿದೆ. ಈ ಮೂಲಕ ಮಕ್ಕಳಿಗೆ ಪೋಷಕರನ್ನು ಗೌರವಿಸುವ ಮಾರ್ಗವನ್ನು ತೋರಲಾಗಿದೆ ಎಂದರು.

ಮಕ್ಕಳೂ ಕೂಡ ಪೋಷಕರ ಕಷ್ಟವನ್ನು ಅರಿತು ಗುರಿ ಮುಟ್ಟುವ ಕೆಲಸ ಮಕ್ಕಳು ಮಾಡಬೇಕು. ಮಕ್ಕಳಿಂದ ತಂದೆ ತಾಯಿ, ಶಿಷ್ಯರಿಂದ ಗುರುಗಳು ಗುರುತಿಸಿಕೊಂಡಾಗ ಪಡೆದ ಶಿಕ್ಷಣಕ್ಕೆ ಅರ್ಥ ಬರಲಿದೆ ಎಂದರು.

2026ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಅಭಿಷೇಕ್ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಾವು ಶ್ರದ್ಧೆ ಪರಿಶ್ರಮ ಹಾಕಿದ ಪರಿಣಾಮ 624 ಅಂಕ ಗಳಿಸುವಂತೆ ಆಗಿದೆ. ಶಿಕ್ಷಣದಲ್ಲಿ ಒಂದು ಅಂಕ ಕಡಿಮೆ ಆದರೂ ಪರವಾಗಿಲ್ಲ, ಸಂಸ್ಕಾರದಲ್ಲಿ ಯಾರಿಗೂ ಕಡಿಮೆ ಯಿರಬಾರದು ಎಂಬುದು ನಮ್ಮ ಬಿಜಿಎಸ್ ಶಾಲೆಯ ಧ್ಯೇಯ.ಹೀಗಾಗಿಯೆ ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಸಹಿತ ಉತ್ತಮ ಭವಿಷ್ಯ ದೊರೆಯುತ್ತಿದೆ ಎಂದರು.

ವಿದ್ಯಾರ್ಥಿಗಳು ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತು ಓದಿನಲ್ಲಿ ಮುಂದುವರೆಯಿರಿ. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಲೇ ಬೇಡಿ. ಗುರುಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ವಾಗಿ ಓದಿ.ಯಶಸ್ಸು ಎಂಬುದು ನಿರಂತರ ಪರಿಶ್ರಮ ಪ್ರಯತ್ನದಿಂದ ಮಾತ್ರ ಪಡೆಯಲು ಸಾಧ್ಯ. ಗುರುಗಳನ್ನು ಗೌರವಿಸುವುದು ಅತ್ಯುತ್ತಮ ಕಾರ್ಯಗಳಲ್ಲಿ ಒಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ 2026ರ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಾಧನೆಗೆ ಕಾರಣಕರ್ತರಾದ ಗುರು ಗಳನ್ನು ಅಭಿನಂದಿಸಲಾಯಿತು.