Gauribidanur News: ಪ್ರಗತಿಪರ ರೈತ ಅಬ್ದುಲ್ಲಾ ಹೊಲದಲ್ಲಿ ಮೆಕ್ಕೆಜೋಳ ಬೆಳೆಯ ಪ್ರಾತ್ಯಕ್ಷಿಕೆ
ಮಣ್ಣಿನ ಆಧಾರದ ಮೇಲೆ ಯಾವ ಪ್ರದೇಶದಲ್ಲಿ ಯಾವ ತಳಿ ಮೆಕ್ಕೆ ಜೋಳ ಬೆಳೆಯಬೇಕೆಂದು ರೈತರಲ್ಲಿ ಅರಿವು ಮೂಡಿಸುತ್ತದೆ. ಈ ಭಾಗದಲ್ಲಿ ೮೦೧೧ ಹೈಬ್ರಿಡ್ ನಾಮ್ ಧಾರಿ ತಳಿಯನ್ನು ಆಯ್ಕೆ ಮಾಡಿ ರೈತರಿಗೆ ನೀಡಲಾಗಿದೆ. ಈ ತಳಿಯಲ್ಲಿ ರೋಗ ವಿರೋಧಕ ಶಕ್ತಿ ಹೆಚ್ಚಿದೆ. ದಂಟು ಸಣ್ಣದಾಗಿದ್ದು, ಬೀಜ ದಪ್ಪದಾಗಿದೆ.ದಂಟಿನ ತುದಿಯತನಕ ಬೀಜ ಬೆಳೆದಿದೆ.
ರೈತರು ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಮುಸುಕಿನ ಜೋಳ ಬೆಳೆಯಬೇಕು ಎಂದು ನಾಮ್ ಧಾರಿ ಸೀಡ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಠಾಕೂರ್ ಉದಯ್ ಸಿಂಗ್ ಜೀ ರೈತರಿಗೆ ತಿಳಿಸಿದರು. -
Ashok Nayak
Oct 27, 2025 11:54 PM
ಗೌರಿಬಿದನೂರು: ಪ್ರಗತಿಪರ ರೈತ ಅಬ್ದುಲ್ಲಾ ಅವರ ಹೊಲದಲ್ಲಿ ಬೆಳೆದಿರುವ ಮೆಕ್ಕೆಜೋಳ ಬೆಳೆಯ ಪ್ರಾತ್ಯಕ್ಷಿಕೆ ನೋಡಿದ ನಂತರ ಮಾತನಾಡಿದ ನಾಮ್‌ಧಾರಿ ಸೀಡ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಠಾಕೂರ್ ಉದಯ್ ಸಿಂಗ್ ರೈತರು ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಮುಸುಕಿನ ಜೋಳ ಬೆಳೆದರೆ ಲಾಭ ಹೆಚ್ಚು ಎಂದು ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಅಲಕಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ನಾಮ್‌ಧಾರಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರೈತರಿಗೆ ಬೆಳೆ ಪ್ರಾತ್ಯಕ್ಷಿಕೆ ಅರಿವು ಕಾರ್ಯಗಾರದಲ್ಲಿ ಮಾತನಾಡಿದರು.
ಮಣ್ಣಿನ ಆಧಾರದ ಮೇಲೆ ಯಾವ ಪ್ರದೇಶದಲ್ಲಿ ಯಾವ ತಳಿ ಮೆಕ್ಕೆ ಜೋಳ ಬೆಳೆಯಬೇಕೆಂದು ರೈತರಲ್ಲಿ ಅರಿವು ಮೂಡಿಸುತ್ತದೆ. ಈ ಭಾಗದಲ್ಲಿ ೮೦೧೧ ಹೈಬ್ರಿಡ್ ನಾಮ್ ಧಾರಿ ತಳಿಯನ್ನು ಆಯ್ಕೆ ಮಾಡಿ ರೈತರಿಗೆ ನೀಡಲಾಗಿದೆ. ಈ ತಳಿಯಲ್ಲಿ ರೋಗ ವಿರೋಧಕ ಶಕ್ತಿ ಹೆಚ್ಚಿದೆ. ದಂಟು ಸಣ್ಣದಾಗಿದ್ದು, ಬೀಜ ದಪ್ಪದಾಗಿದೆ.ದಂಟಿನ ತುದಿಯತನಕ ಬೀಜ ಬೆಳೆದಿದೆ. ಮಳೆ ಬಂದರೂ ಸಹ ಬೆಳೆಗೆ ಯಾವುದೇ ರೀತಿ ಹಾನಿ ಆಗಿಲ್ಲ, ಈಗಾಗಲೇ ಬೆಳೆ ಕಟಾವಿಗೆ ಸಿದ್ದವಾಗಿದ್ದು, ಪ್ರತಿ ಎಕರೆ ಅಂದಾಜು ೩೬ ರಿಂದ ೪೦ ಕ್ವಿಂಟಾಲ್ ನಿರೀಕ್ಷಿಸಲಾಗಿದೆ ಎಂದರು.
ಇದನ್ನೂ ಓದಿ: Gauribidanur News: ಶಾಸಕರ ಬೆಂಬಲಿಗರ ತೆಕ್ಕೆಗೆ ಕಲ್ಲೂಡಿ ಡೈರಿ
ರೈತ ಮುಖಂಡ ಅಬ್ದುಲ್ಲಾ ಅವರು ಮಾತನಾಡಿ, ನಾನು ನನ್ನ ಎಂಟು ಎಕರೆ ಜಮೀನಿನಲ್ಲಿ ನಾಮದಾರಿ ಕಂಪನಿಯ ಮುಸುಕಿನ ಜೋಳ ಬೆಳೆದಿದ್ದೇನೆ. ಈ ತಳಿಯಿಂದ ಉತ್ತಮ ಇಳಿಯುವರಿ ನಿರೀಕ್ಷಿಸಲಾಗಿದೆ,ಪ್ರತಿ ಎಕರೆಗೆ ೩೦ ಸಾವಿರಕ್ಕೂ ಹೆಚ್ಚು ಖರ್ಚು ಬಂದಿದೆ. ಬೆಳೆ ಉತ್ತಮವಾಗಿದೆ. ಆದರೆ ಈ ಹಿಂದೆ ೨೫೦೦ ರೂ. ಇದ್ದ ಕ್ವಿಂಟಾಲ್ ಬೆಲೆ ಈಗ ಕ್ವಿಂಟಾಲ್ಗೆ ೧೮೦೦ ರೂಗೆ ಇಳಿದಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಮುಸುಕಿನ ಜೋಳ ಖರೀದಿ ಮಾಡಿದರೆ ರೈತರಿಗೆ ತುಂಬಾ ಉಪಯುಕ್ತವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಬೆಳೆ ಬೆಳೆದಿದ್ದ ಪ್ರಗತಿಪರ ರೈತ ಅಬ್ದುಲ್ಲಾ ಅವರನ್ನು ನಾಮದಾರಿ ಕಂಪನಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನಂತರ ತಾಲೂಕಿನ ಹೊಸೂರು, ಗುಂಡಾಪುರ, ಮುದುಗಾನ ಕುಂಟೆ, ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.
ಕಾರ್ಯಕ್ರಮದಲ್ಲಿ ನಾಮ್ ಧಾರಿ ಸೀಡ್ಸ್ ಕಂಪನಿಯ ಸಿಇಒ ಗುರುಮುಖ್ ಸಿಂಗ್, ಕಂಪನಿಯ ತಳಿ ಸಂಶೋಧನಾ ವಿಭಾಗದ ಉಜ್ವಲ್ ಖ್ ರ್ , ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಟಿ ಮಂಜುನಾಥ್, ಮತ್ತು ನಾಗಭೂಷಣ್, ರಾಜೇಶ್, ಶಂಕ್ರಾನAದ,, ಶ್ರೀನಿವಾಸ್ ನಾಯಕ್, ರೈತ ಮುಖಂಡರಾದ ಗಂಗಾಧರಪ್ಪ,ಸತ್ತಿ, ಸುಬ್ರಾಯಪ್ಪ, ಚಲಪತಿ, ಮಂಜುನಾಥ್ ನಾಯಕ್, ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.