ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA SN Subbareddy: ಹರಿದು ಬರುತ್ತಿರುವ ಹೆಚ್.ಎನ್ ವ್ಯಾಲಿ ನೀರಿನಿಂದ ಕೆರೆಗಳಲ್ಲಿ ಜಲ-ಕಳೆ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಂತಸ

ಕಳೆದ ಹಲವಾರು ವರ್ಷಗಳಿಂದ ಮಳೆಯ ಅಭಾವದಿಂದ ಕಂಗೆಟ್ಟಿರುವ ಈ ಪ್ರದೇಶದಲ್ಲಿ ಅಂತರ ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು ರೈತರು ನೀರಿಗಾಗಿ ಕೊಳವೆಬಾವಿಗಳನ್ನು ನಂಬಿಕೊಂಡು ಬದುಕು ವಂತಾಗಿದ್ದು. ದುಡಿದು ಸಂಪಾದಿಸಿದ ಹಣವೆಲ್ಲಾ ಕೊಳವೆಬಾವಿಗಳು ಕೊರೆಸಲು ಮರು ಬಳಸು ವಂತಾಗಿದೆ.

ಹರಿದು ಬರುತ್ತಿರುವ ಹೆಚ್.ಎನ್ ವ್ಯಾಲಿ ನೀರಿನಿಂದ ಕೆರೆಗಳಲ್ಲಿ ಜಲ-ಕಳೆ

-

Ashok Nayak Ashok Nayak Oct 27, 2025 10:23 PM

ಬಾಗೇಪಲ್ಲಿ: ಕುಸಿದು ಹೋಗಿರುವ ಅಂತರಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೆಚ್.ಎನ್. ವ್ಯಾಲಿ ಯೋಜನೆಯ ನೀರು ತಾಲ್ಲೂಕಿನ ಕೆರೆಗಳಿಗೆ ಹರಿದು ಬರುತ್ತಿದ್ದು ಕೆರೆಗಳಲ್ಲಿ ‘ಜಲ-ಕಳೆ’ ತುಂಬಿ ತುಳುಕುತ್ತಿದೆ. ತಾಲ್ಲೂಕಿನ ಆಚೇಪಲ್ಲಿ ಕೆರೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ( MLA SN Subbareddy) ಸ್ವತ: ನೀರನ್ನು ಕುಡಿದು ಸಂತಸ ವ್ಯಕ್ತಪಡಿಸಿದರು.

ಕಳೆದ ಹಲವಾರು ವರ್ಷಗಳಿಂದ ಮಳೆಯ ಅಭಾವದಿಂದ ಕಂಗೆಟ್ಟಿರುವ ಈ ಪ್ರದೇಶದಲ್ಲಿ ಅಂತರ ಜಲಮಟ್ಟ ದಿನೇ ದಿನೇ ಕುಸಿಯುತ್ತಿದ್ದು ರೈತರು ನೀರಿಗಾಗಿ ಕೊಳವೆಬಾವಿಗಳನ್ನು ನಂಬಿಕೊಂಡು ಬದುಕು ವಂತಾಗಿದ್ದು. ದುಡಿದು ಸಂಪಾದಿಸಿದ ಹಣವೆಲ್ಲಾ ಕೊಳವೆಬಾವಿಗಳು ಕೊರೆಸಲು ಮರು ಬಳಸುವಂತಾಗಿದೆ.

ಇಂತಹ ಸನ್ನಿವೇಶದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಅವಿತರ ಶ್ರಮದ ಫಲವಾಗಿ ತಾಲ್ಲೂಕಿನ ಕೆರೆಗಳಿಗೆ ಕಳೆದ ಕೆಲ ತಿಂಗಳಿAದ ಹರಿದು ಬರುತ್ತಿದ್ದು ಇದರ ಜೊತೆಗೆ ಉತ್ತಮ ಮಳೆಯೂ ಆಗುತ್ತಿರುವುದರಿಂದ ಹೆಚ್.ಎನ್.ವ್ಯಾಲಿ ವ್ಯಾಪ್ತಿಯ ಕೆರೆಗಳು ತುಂಬಿ ತುಳುಕುತ್ತಿದ್ದು ಜಲ-ಕಳೆ ಸಹಜವಾಗಿ ಜನರನ್ನು ವಿಶೇಷವಾಗಿಇ ರೈತರನ್ನು ಸಂಭ್ರಮಿಸುವಂತೆ ಮಾಡುತ್ತಿದೆ.

ಇದನ್ನೂ ಓದಿ: Chikkaballapur News: ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ

ಹೆಚ್.ಎನ್. ವ್ಯಾಲಿ ನೀರಿನ ವಿಚಾರದಲ್ಲಿ ಈಗಾಗಲೇ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ೩ನೇ ಹಂತದ ಶುದ್ದೀಕರಣ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಆಚೇಪಲ್ಲಿ ಕೆರೆಗೆ ಹರಿದು ಬರುತ್ತಿರುವ ಹೆಚ್.ಎನ್. ವ್ಯಾಲಿ ನೀರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪರಿಶೀಲಿಸಿದರಲ್ಲದೆ ನೀರನ್ನು ಕುಡಿಯುವುದರ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು. ಮಲ್ಲಿಗುರ್ಕಿ ೧&೨, ಮೇರುವಪಲ್ಲಿ ೧&೨, ಯಲ್ಲಂಪಲ್ಲಿ ೧&೨ ಸೇರಿದಂತೆ ಅನೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.

ಆಚೇಪಲ್ಲಿ ಕೆರೆಗೆ ನೀರು ಹರಿಯುತ್ತಿದ್ದು ಹೆಚ್.ಎನ್. ವ್ಯಾಲಿ ಯೋಜನೆಯ ಮೂಲಕ ತಾಲ್ಲೂಕಿನ ಒಟ್ಟು ೨೪ ಕೆರೆಗಳು ಪ್ರತಿ ವರ್ಷವೂ ತುಂಬುವ ಅವಕಾಶವನ್ನು ಪಡೆದುಕೊಂಡಿದ್ದು ಆಭಾಗದಲ್ಲಿ ಅಂತರಜಲ ಮಟ್ಟ ಹೆಚ್ಚಾಗುವುದರ ಜೊತೆಗೆ ಕೊಳವೆಬಾವಿಗಳಲ್ಲಿ ಯತೇಚ್ಛವಾಗಿ ನೀರು ಲಭ್ಯ ವಾಗಿ ರೈತರು ಅನಗತ್ಯವಾಗಿ ಕೊಳವೆಬಾವಿಗಳನ್ನು ಕೊರೆಸುವುದರ ಮೂಲಕ ಆಗುತ್ತಿದ್ದ ನಷ್ಠ ದಿಂದ ಹೊರ ಬರುವಂತಾಗುತ್ತದೆ. ಕೃಷಿಯಲ್ಲಿ ಮತ್ತಷ್ಠು ಉತ್ಸಾಹದಿಂದ ಪಾಲ್ಗೊಳ್ಳಲು ಸಾಧ್ಯ ವಾಗುತ್ತದೆ.

*
ಹೆಚ್.ಎನ್ ವ್ಯಾಲಿ ಮೂಲಕ ೨೭ ಕೆರೆಗಳಿಗೆ ನೀರು: ಎಸ್.ಎನ್.ಸುಬ್ಬಾ ರೆಡ್ಡಿ ಆಚೇಪಲ್ಲಿ ಕೆರೆಯಲ್ಲಿ ಹೆಚ್.ಎನ್ ವ್ಯಾಲಿ ನೀರು ಪರೀಕ್ಷಿಸಿದ ನಂತರ ಶಾಸಕ ಎಸ್.ಎನ್.ಸುಬ್ಬಾ ರೆಡ್ಡಿ ಮಾತನಾಡಿ, ಕಳೆದ ಚುನಾವಣಾ ಸಂದರ್ಭದಲ್ಲಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಭರವಸೆಯನ್ನು ನೀಡಿದ್ದೆ ಅದನ್ನು ಈಗ ಈಡೇರಿಸಿದ್ದೇನೆ. ನೀರಿಲ್ಲದೆ ಕಳೆಗುಂದಿದ್ದ ಕೆರೆಗಳಿಗೆ ಈಗ ಜೀವಕಳೆ ಬಂದಿದೆ. ಹೆಚ್.ಎನ್ ವ್ಯಾಲಿ ಯೋಜನೆ ಕುಡಿಯುವ ನೀರಿನ ಯೋಜನೆಯಲ್ಲ.

ಅಂತರ ಜಲಮಟ್ಟ ಹೆಚ್ಚಿಸುವ ಯೋಜನೆಯಾಗಿದ್ದು ಕೆರೆಗಳಲ್ಲಿ ನೀರು ತುಂಬಿಕೊಂಡಿರುವ ಕಾರಣ ಅಂತರಜಲಮಟ್ಟ ಹೆಚ್ಚಾಗಿ ರೈತರಿಗೆ ವ್ಯವಸಾಯಕ್ಕೆ ಅಗತ್ಯವಾಗಿರುವ ನೀರು ಸುಲಭವಾಗಿ ಲಭ್ಯವಾಗುತ್ತದೆ. ಈ ಯೋಜನೆಯ ಮೂಲಕ ತಾಲ್ಲೂಕಿನ ೨೪ ಕೆರೆಗಳು ಮತ್ತು ಗುಡಿಬಂಡೆ ತಾಲ್ಲೂಕಿನ ೩ ಕೆರೆಗಳು ತುಂಬುತ್ತವೆ. ಇದರ ಜೊತೆಗೆ ಅತಿ ಶೀಘ್ರದಲ್ಲಿಯೇ ೨೦೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗಂಟ್ಲಮಲ್ಲಮ್ಮ ಡ್ಯಾಂ ಮೂಲಕ ಎತ್ತಿನಹೊಳೆ ನೀರನ್ನು ಹರಿಸಿ ಉಳಿದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತದೆ. ಕೇವಲ ೧-೨ ವರ್ಷಗಳಲ್ಲಿಯೇ ಸದಾ ಬರಗಾಲ ದಿಂದ ಕಂಗೆಟ್ಟು ನೀರಿಗಾಗಿ ಪರದಾಡುತ್ತಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನತೆಗೆ ನೀರಿನ ಸಮಸ್ಯೆ ಪೂರ್ಣವಾಗಿ ಪರಿಹಾರವಾಗುತ್ತದೆ ಎಂಬ ವಿಶ್ಚಾಸವನ್ನ ವ್ಯಕ್ತಪಡಿಸಿದರು.
*

ಮರಳುಗಾಡಿನ ಓಯಾಸಿಸ್ ಹೆಚ್.ಎನ್. ವ್ಯಾಲಿ:ತಾಲೂಕಿನ ಕೆರೆಗಳಿಗೆ ಹೆಚ್.ಎನ್. ವ್ಯಾಲಿ ನೀರು ಹರಿಯುತ್ತಿರುವುದು ಸದ್ಯಕ್ಕೆ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಂತಾಗಿದೆ. ಕೆರೆಗಳಲ್ಲಿ ನೀರು ತುಂಬಿಕೊಳ್ಳುವುದರಿAದ ಅಂತರ್‌ಜಲ ಹೆಚ್ಚಾಗಿ ರೈತರ ಕೊಳವೆ ಬಾವಿಗಳಲ್ಲಿ ನೀರು ಸದಾ ಲಭ್ಯವಿದ್ದು ಅನಗತ್ಯವಾಗಿ ಬೋರ್‌ವೆಲ್ ಕೊರೆಸಿ ವೆಚ್ಚಮಾಡುವುದರಿಂದ ಪಾರಾಗಬಹುದು. ಇದಕ್ಕಾಗಿ ಶಾಸಕರನ್ನು ಅಭಿನಂದಿಸುತ್ತೇನೆ.
-ಅಖಿಲ ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಸಂಚಾಲಕ ಪಿ.ಮಂಜುನಾಥರೆಡ್ಡಿ