Gauribidanur News: ಅದ್ದೂರಿ ಅಂಬೇಡ್ಕರ್ ಜಯಂತಿಗೆ ನಿರ್ಧರಿಸಿದ ರವಿ ನಾರಾಯಣ ರೆಡ್ಡಿ ಗುಂಪು
ತಾಲೂಕು ಘಟಕದ ಅಧ್ಯಕ್ಷರನ್ನು ಒಳಗೊಂಡ ಸಂಸದ ಡಾ.ಕೆ.ಸುಧಾಕರ್ ಬೆಂಬಲಿತ ಗುಂಪು ಇತ್ತೀಚಿಗೆ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿತ್ತು, ಆದರೆ ಅವರಿಗಿಂತ ನಾವು ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಿ ಸಡ್ಡು ಹೊಡೆಯ ಬೇಕು ಎಂದು ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ ಬೆಂಬಲಿತರ ಗುಂಪು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
-
ಗೌರಿಬಿದನೂರು: ಸ್ಥಳೀಯ ಬಿಜೆಪಿಯ ಎರಡು ಗುಂಪುಗಳ ಪೈಕಿ ಒಂದು ಗುಂಪು ಇತ್ತೀಚೆ ಗಷ್ಟೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಿತ್ತು, ಇದೀಗ ಮತ್ತೊಂದು ಗುಂಪು ಮತ್ತೊಮ್ಮೆ ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ತಾಲೂಕು ಘಟಕದ ಅಧ್ಯಕ್ಷರನ್ನು ಒಳಗೊಂಡ ಸಂಸದ ಡಾ.ಕೆ.ಸುಧಾಕರ್ ಬೆಂಬಲಿತ ಗುಂಪು ಇತ್ತೀಚಿಗೆ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿತ್ತು, ಆದರೆ ಅವರಿ ಗಿಂತ ನಾವು ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಿ ಸಡ್ಡು ಹೊಡೆಯ ಬೇಕು ಎಂದು ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ ಬೆಂಬಲಿತರ ಗುಂಪು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: Gauribidanur News: ಆರ್ಯ ವೈಶ್ಯ ಸಮುದಾಯ ವಹಿವಾಟಿನ ಜೊತೆಗೆ ಸೇವಾ ಕಾಯಗಳಿಗೂ ಒತ್ತು: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು
ಭಾನುವಾರ ಮಾನಸ ಆಸ್ಪತ್ರೆ ಸಭಾಂಗಣದಲ್ಲಿ ತಮ್ಮ ಬೆಂಬಲಿಗರ ಪೂರ್ವಭಾವಿ ಸಭೆ ನಡೆಸಿ, ಮೇ.3ರಂದು ಭಾನುವಾರ ಅಂಬೇಡ್ಕರ್ ಜಯಂತಿ ಆಚರಣೆಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.
ನಗರದ ಕೆಂಪೇಗೌಡ ವೃತ್ತದಿಂದ ಬಿ.ಎಚ್.ರಸ್ತೆ, ಎಂ.ಜಿ ವೃತ್ತದವರೆಗೆ ಸುಮಾರು ಒಂದೂ ವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬೃಹತ್ ಬೈಕ್ ರ್ಯಾಲಿ ನಡೆಸುವುದು ಹಾಗೂ ಎಂ.ಜಿ.ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಪಕ್ಷದ ಮುಖಂಡರಾದ ಬಾಗೇಪಲ್ಲಿ ಸಿ.ಮುನಿರಾಜು, ಚಿಕ್ಕಬಳ್ಳಾಪುರದ ಸಂದೀಪ್ ರೆಡ್ಡಿ ಅವರು ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವ ಕಂಡ ಅಪರೂಪದ ನಾಯಕ. ದೀನ ದಲಿತರ ಶೋಷಿತರ ದನಿಯಾಗುವ ಜೊತೆಗೆ ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ರಚಿಸಿ ಕೊಟ್ಟರು. ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾರ್ಗದರ್ಶನವಾಗಿದೆ. ಈ ನಿಟ್ಟಿ ನಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಮಟ್ಟದಲ್ಲಿ ಜಯಂತಿ ಆಚರಿಸ ಲಾಗುತ್ತಿದೆ ಎಂದರು.
ಪಕ್ಷದ ಮುಖಂಡ ಡಾ.ಎಚ್.ಎಸ್.ಶಶಿಧರ್ ಮಾತನಾಡಿ, ಅಂಬೇಡ್ಕರ್ ಮಹಾನ್ ಮಾನವ ತಾವಾದಿ. ಅವರೊಬ್ಬ ಸಾಧನೆಗಳ ಮೇರು ಪರ್ವ. ಅವರನ್ನು ಅರ್ಥ ಮಾಡಿಕೊಂಡು ಆದರ್ಶಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗಲಿದೆ. ಆದ್ದರಿಂದ ಬೃಹತ್ ಅಂಬೇಡ್ಕರ್ ಜಯಂತಿ ಮೂಲಕ ಅವರ ತತ್ವ ಆದರ್ಶಗಳನ್ನು ಯುವ ಜನತೆಗೆ ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.
ಸಭೆಯಲ್ಲಿ ಮುಖಂಡರಾದ ವೇಮಾರೆಡ್ಡಿ, ಬಿ.ಎನ್.ರಂಗನಾಥ, ಎನ್.ಆರ್.ಭರತ್ ರೆಡ್ಡಿ, ಎಸ್.ಎಸ್.ಡಿ.ಸತ್ಯನಾರಾಯಣ್, ಎಚ್.ಎನ್.ಸನಂದ್ ಕುಮಾರ್, ಬಾಲಕೃಷ್ಣ, ಮುನಿ ಲಕ್ಷ್ಮಮ್ಮ, ಭಾಸ್ಕರ ರೆಡ್ಡಿ, ಸುಧಾಕರ್, ಜಯಣ್ಣ, ಮಲ್ಲಿಕಾರ್ಜುನ್ ರೆಡ್ಡಿ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.