Chikkaballapur News: ಗುರುಗಳ ಸ್ಮರಣೆ, ಸ್ನೇಹಿತರ ಸಂಗಮ: ನಂದಿಯಲ್ಲಿ ಗುರುವಂದನ ಕಾರ್ಯಕ್ರಮ
ಜೀವನದಲ್ಲಿ ಆಸ್ತಿ–ಅಂತಸ್ತುಗಳು ಶಾಶ್ವತವಲ್ಲ; ಕಲಿತ ವಿದ್ಯೆಯೇ ಜೀವನಪೂರ್ತಿ ಜೊತೆಯಾಗಿ ರುತ್ತದೆ ಎಂದು ವಿದ್ಯಾರ್ಥಿ ಗಳಿಗೆ ಬೋಧಿಸಿದರು. ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕುಂಠಿತವಾಗು ತ್ತಿರುವ ಸಂದರ್ಭದಲ್ಲಿಯೇ, ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ನೆನೆದು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ
-
ನಂದಿ: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಸರ್ಕಾರಿ ಪ್ರೌಢಶಾಲೆಯ 1997–98ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ನಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಪೇಟೆ ಚಿಕ್ಕು ಫಾರಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಕರಿಗೆ ಹೂಮಳೆ ಸುರಿಸಿ ಪಟಾಕಿ ಸಿಡಿಸಿ ಆತ್ಮೀಯ ಸ್ವಾಗತ ಕೋರಲಾಯಿತು.
ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶ್ರಮಪಟ್ಟಂತಹ ಅಪ್ಪ ಜಪ್ಪನವರ ಮಕ್ಕಳಾದ ಸತ್ಯನಾರಾಯಣ ರೆಡ್ಡಿ ದಂಪತಿಗಳು ಹಾಗೂ ರಾಮರೆಡ್ಡಿ ದಂಪತಿ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಉದ್ಘಾಟನಾ ಭಾಷಣದಲ್ಲಿ ಶಿಕ್ಷಕರು ಮಾತನಾಡಿ, ಜೀವನದಲ್ಲಿ ಆಸ್ತಿ–ಅಂತಸ್ತುಗಳು ಶಾಶ್ವತವಲ್ಲ; ಕಲಿತ ವಿದ್ಯೆಯೇ ಜೀವನಪೂರ್ತಿ ಜೊತೆಯಾಗಿರುತ್ತದೆ ಎಂದು ವಿದ್ಯಾರ್ಥಿ ಗಳಿಗೆ ಬೋಧಿಸಿದರು. ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕುಂಠಿತವಾಗು ತ್ತಿರುವ ಸಂದರ್ಭದಲ್ಲಿಯೇ, ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ನೆನೆದು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ
2016ರಿಂದ ನಿರಂತರವಾಗಿ ನಡೆಯುತ್ತಿರುವ ಈ ಗುರುವಂದನ ಕಾರ್ಯಕ್ರಮವು ಗುರು–ಶಿಷ್ಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದು, ಮುಂದಿನ ತಲೆಮಾರಿಗೆ ಗುರು ಗೌರವದ ಮೌಲ್ಯವನ್ನು ಸಾರುವ ಮಹತ್ವದ ಪ್ರಯತ್ನವಾಗಿದೆ ಎಂದು ಶಿಕ್ಷಕರು ಅಭಿಪ್ರಾ ಯಪಟ್ಟರು. ಜೊತೆಗೆ ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಹಾಗೂ ಮೊಬೈಲ್ ಬಳಕೆಯ ನಿಯಂತ್ರಣದ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಕೃಷ್ಣಪ್ಪ, ಎಂ.ಸಿ. ಮುನಿಕೃಷ್ಣಪ್ಪ, ಗೋಪಾಲಕೃಷ್ಣ, ಮಂಜುನಾಥ್, ಪ್ರಸನ್ನಕುಮಾರ್, ಆಂಜಿನಪ್ಪ, ದೇವೇಂದ್ರ ಪರಮಹಟ್ಟಿ, ಪಿ. ಶೈಲಜಾ ಹಾಗೂ ವೇದಾವತಿ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಶಿಕ್ಷಕಿಯರಿಗೆ ವಿದ್ಯಾರ್ಥಿ ಯಶೋಧರವರು ಅರಿಶಿನ–ಕುಂಕುಮ ಬಳೆ ಹಾಗೂ ಸೀರೆಯನ್ನು ನೀಡಿ ಗೌರವಿಸಿದರು. ಅಗಲಿದ ಶಿಕ್ಷಕರು ಹಾಗೂ ಸ್ನೇಹಿತರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡು, ಗುರು ಗಳೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು.
ಕೆಲ ವಿದ್ಯಾರ್ಥಿಗಳು ಮಾತನಾಡಿ ಅವರು ಶಾಲೆಯಲ್ಲಿ ಓದುತ್ತಿದ್ದ ಹಳೆಯ ನೆನಪುಗಳನ್ನು ನೆನೆದು ಖುಷಿ ಪಟ್ಟರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.
ಗುರುವಂದನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಮಕ್ಕಳು ನೃತ್ಯ ಪ್ರದರ್ಶನವನ್ನು ನೀಡಿದರು ಅದನ್ನು ನೋಡಿದ ಶಿಕ್ಷಕರು ಹಾಗೂ ಸ್ನೇಹಿತರು ಶಾಲೆಯಲ್ಲಿ ಹಾಡಿದ ನೃತ್ಯವನ್ನು ನೆನಪು ಮಾಡಿಕೊಂಡು ಚಪ್ಪಾಳೆಯನ್ನು ತಟ್ಟುತ್ತಾ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಯಶೋಧ, ರಮೇಶ್, ಗುರುಪ್ರಸಾದ್, ವೆಂಕಟೇಶ್, ಕೇಶವ ರೆಡ್ಡಿ, ಪ್ರಕಾಶ್, ಶಶಿಕಲಾ, ಸುಶೀಲಾ, ನರಸಿಂಹರಾಜು, ಗೋಪಾಲ್, ರಾಧಿಕಾ, ಲಕ್ಷ್ಮೀ ದೇವಿ, ಮಂಜುನಾಥ್, ಶಾಂತ ಕುಮಾರ್, ಜಗದೀಶ್, ಸುರೇಶ್, ಕುಮಾರ್, ವೆಂಕಟರಮಣ ಹಾಗೂ 1997-98 ನೇ ಸಾಲಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಇನ್ನು ಮುಂತಾದವರು ಹಾಜರಿದ್ದರು.