Seekal Ramachandra Gowda: ಹೆಮ್ಮರವಾಗಿ ಬೆಳೆದಿರುವ ಆರ್.ಎಸ್.ಎಸ್ ನಿಷೇಧ ಸಾಧ್ಯವಿಲ್ಲ : ಸೀಕಲ್ ರಾಮಚಂದ್ರಗೌಡ
ದೇಶಕ್ಕೆ ಗಂಡಾಂತರ ಎದುರಾದಾಗಲೆಲ್ಲಾ ದೇಶರಕ್ಷಣೆಗೆ ಆರ್‌ಎಸ್‌ಎಸ್ ನಿಂತಿದೆ. ಇಂತಹ ಸಂಘಟನೆ ಯನ್ನು ನಿಷೇಧಿಸಲು ನೆಹರು ,ಇಂದಿರಾಗಾಂಧಿ ಪ್ರಯತ್ನಿಸಿ ಸೋತಿದ್ದಾರೆ. ಇನ್ನು ಪ್ರಿಯಾಂಕ ಖರ್ಗೆ ಮತ್ತು ಅವರ ಸರಕಾರದಿಂದ ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು ದೇಶಕ್ಕೆ ದೇಶವೇ ಆರ್‌ಎಸ್‌ಎಸ್ ಸಂಘಟನೆಯನ್ನು ಮೆಚ್ಚಿರುವಾಗ ಯಾರೋ ಕೆಲವರು ಅದಕ್ಕೆ ವಿರೋಧ ತೋರುವುದು ಸಾಮಾನ್ಯ .ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ

ಶಿಡ್ಲಘಟ್ಟ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಆರ್‌ಎಸ್‌ಎಸ್ ನೂರು ವರ್ಷದ ಸಂಭ್ರಮದ ಪಥಸಂಚಲನ ನಡೆಯಿತು. -

ಶಿಡ್ಲಘಟ್ಟ : ರಾಷ್ಟ್ರೀಯ ಸ್ವಯಂ ಸೇವಕ ಸಂಘವೆAಬ ೧೦೦ ವರ್ಷದ ಸಂಘಟನೆ ಇಂದು ಹೆಮ್ಮರ ವಾಗಿ ಬೆಳೆದು ನಿಂತಿದ್ದು ಇದನ್ನು ನಿಷೇಧಿಸಲಾಗಲಿ, ಇದರ ಕಾರ್ಯಚಟವಟಿಕೆಗಳಿಗೆ ನಿರ್ಭಂಧ ಹೇರುವುದಾಗಲಿ ಯಾರಿಂದಲೂ ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದಲ್ಲಿ ಭಾನುವಾರ ಮುಸ್ಸಂತೆ ಏರ್ಪಡಿಸಿದ್ಧ ಪಥಸಂಚಲನದಲ್ಲಿ ಭಾಗವಹಿಸಿ ಮಾತನಾಡಿ ದರು.
ದೇಶಕ್ಕೆ ಗಂಡಾಂತರ ಎದುರಾದಾಗಲೆಲ್ಲಾ ದೇಶರಕ್ಷಣೆಗೆ ಆರ್‌ಎಸ್‌ಎಸ್ ನಿಂತಿದೆ. ಇಂತಹ ಸಂಘಟನೆಯನ್ನು ನಿಷೇಧಿಸಲು ನೆಹರು ,ಇಂದಿರಾಗಾಂಧಿ ಪ್ರಯತ್ನಿಸಿ ಸೋತಿದ್ದಾರೆ. ಇನ್ನು ಪ್ರಿಯಾಂಕ ಖರ್ಗೆ ಮತ್ತು ಅವರ ಸರಕಾರದಿಂದ ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು ದೇಶಕ್ಕೆ ದೇಶವೇ ಆರ್‌ಎಸ್‌ಎಸ್ ಸಂಘಟನೆಯನ್ನು ಮೆಚ್ಚಿರುವಾಗ ಯಾರೋ ಕೆಲವರು ಅದಕ್ಕೆ ವಿರೋಧ ತೋರುವುದು ಸಾಮಾನ್ಯ.ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯುವಕರು ಮತ್ತು ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಬೆಳೆಸುವ ಆರ್‌ಎಸ್‌ಎಸ್ ಅವಿನಾಶಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ; Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವ ನೈತಿಕತೆಯು ಸಿದ್ದರಾಮಯ್ಯ ಅವರಿ ಗಾಗಲಿ ಅಥವಾ ವಾಚಾಳಿ ಪ್ರಿಯಾಂಕ್ ಖರ್ಗೆಗಾಗಲಿ ಇಲ್ಲ. ಹಾದಿ ಬೀದಿಯಲ್ಲಿ ರಕ್ತ ಹರಿಸುವ ಮುಸ್ಲಿಂಮತೀಯ ಸಂಘಟನೆ ಕುರಿತು, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಮತಾಂಧರ ಕುರಿತು ಮೃದು ಧೋರಣೆ ತಾಳುವ ಸಚಿವರು, ಮುಖ್ಯಮಂತ್ರಿಗಳು ಈಗ ಪ್ರಚಾರಕ್ಕಾಗಿ, ಅಧಿಕಾರ ಉಳಿಸಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೆ ಬಿದ್ದಿದ್ದಾರೆ.
ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್ ನೆರಳಿನಲ್ಲಿ ನಿಂತು ಮಾತನಾಡುತ್ತಿರುವ ನಿಮಗೆ ಶತಮಾನ ವನ್ನು ಕಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯಾವ ಚಟುವಟಿಕೆಗಳನ್ನೂ ನಿಲ್ಲಿಸಲು ನಿಮ್ಮ ಸರ್ಕಾರದ ಕೈಯಿಂದ ಸಾಧ್ಯವಿಲ್ಲ ಎಂದು ಅಪಹಾಸ್ಯ ಮಾಡಿದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪಾಕಿಸ್ತಾನದ ಎಲ್ಲ ಮನೆಗಳಲ್ಲಿ ರಾಹುಲ್ ಗಾಂಧಿ ಫೋಟೋ ಇದೆ. ಅಂತಹ ವ್ಯಕ್ತಿ ಆರ್.ಎಸ್ .ಎಸ್ ಬಗ್ಗೆ ಮಾತನಾಡುತ್ತಾರೆ. ಸಂಘದ ಇತಿಹಾಸ ಗೊತ್ತಿಲ್ಲ. ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ಕೊಡದೆ ವಿದೇಶಕ್ಕೆ ಹೋಗಿದ್ದಾರೆ. ಎಸ್.ಪಿ.ಜಿಗೆ ಮಾಹಿತಿ ಕೊಟ್ಟಿಲ್ಲ. ಹಾಗಿರುವಾಗ ಸಂಘದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ಗೆ ಓಟಿನ ಪ್ರೇಮ ಇದೆ. ಆದರೆ ನಮಗೆ ರಾಷ್ಟ್ರ ಪ್ರೇಮ ಇದೆ. ನಮಗೆ ಜನನೀ ಜನ್ಮ ಭೂಮಿ ಯೇ ಮುಖ್ಯ. ನಾವು ದೇಶಕ್ಕಾಗಿ ಬದುಕುತ್ತೇವೆ ಹಾಗೂ ದೇಶಕ್ಕಾಗಿ ಸಾಯುತ್ತೇವೆ. ಕಾಂಗ್ರೆಸ್‌ಗೆ ಅಧಿಕಾರಕ್ಕಾಗಿ ಸಾಯುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಮುಖಂಡರಾದ ರಮೇಶ್ ಬಾಯಾರಿ, ಕನಕಪ್ರಸಾದ್, ಆನಂದ ಗೌಡ, ಡಾ.ಸತ್ಯನಾರಾಯಣರಾವ್, ಎನ್.ಶ್ರೀಕಾಂತ್,ಪ್ರಕಾಶ್, ನಾರಾಯಣ ಸ್ವಾಮಿ ಮತ್ತಿತ್ತರು ಹಾಜರಿದ್ದರು.