ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಷೇರು ಪ್ರಮಾಣ ಪತ್ರ ವಿತರಣೆ

ಪ್ರಜಾ ಸಂಗ್ರಾಮ ಕೋ ಆಪರೇಟಿವ್ ಸೊಸೈಟಿ ಕೇಂದ್ರ ಕಚೇರಿ ಹಾವೇರಿಯಲ್ಲಿದ್ದು. ರಾಜ್ಯಾದ್ಯಂತ ಷೇರು ದಾರರಿದ್ದಾರೆ. ತುಮಕೂರು ಜಿಲ್ಲೆಯ ನಿರ್ದೇಶಕರಾದ ಮಂಜುನಾಥ್ ಅವರ ಸಹಕಾರ ದೊಂದಿಗೆ ಷೇರುದಾರರು ಸಾಲ ಸೌಲಭ್ಯ ಹಾಗೂ ಉದ್ಯೋಗಾಭಿವೃದ್ಧಿಗೆ ಅಗತ್ಯವಾದ ನೆರವು ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು

ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಷೇರು ಪ್ರಮಾಣ ಪತ್ರ ವಿತರಣೆ

-

Ashok Nayak Ashok Nayak Oct 21, 2025 1:06 AM

ಗುಬ್ಬಿ: ಸಹಕಾರ ಕ್ಷೇತ್ರದಿಂದ ಆರ್ಥಿಕ ನೆರವು ಸಾಧ್ಯ ಎಂದು ಆದಿ ಜಾಂಬವ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಸವರಾಜು ತಿಳಿಸಿದರು. 

ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಲ್ಲಿ ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜಾ ಸಂಗ್ರಾಮ ಕೋ ಆಪರೇಟಿವ್ ಸೊಸೈಟಿ ಕೇಂದ್ರ ಕಚೇರಿ ಹಾವೇರಿಯಲ್ಲಿದ್ದು. ರಾಜ್ಯಾದ್ಯಂತ ಷೇರು ದಾರರಿದ್ದಾರೆ. ತುಮಕೂರು ಜಿಲ್ಲೆಯ ನಿರ್ದೇಶಕರಾದ ಮಂಜುನಾಥ್ ಅವರ ಸಹಕಾರ ದೊಂದಿಗೆ ಷೇರುದಾರರು ಸಾಲ ಸೌಲಭ್ಯ ಹಾಗೂ ಉದ್ಯೋಗಾಭಿವೃದ್ಧಿಗೆ ಅಗತ್ಯವಾದ ನೆರವು ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Gubbi News: ಗುಬ್ಬಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಪಂಚಾಕ್ಷರಿ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಅವಿರೋಧ ಆಯ್ಕೆ

ಹೊಸಕೆರೆ ಬಸವರಾಜ್ ಮಾತನಾಡಿ ಆರ್ಥಿಕವಾಗಿ ಪ್ರಗತಿಯತ್ತ ಸಾಗಲು ಸಹಕಾರ ಸಂಘಗಳು ಉತ್ತಮ ಸಹಕಾರ ನೀಡುತ್ತಿದ್ದು. ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಹಾಗೂ ಷೇರುದಾರರಾಗಬೇಕೆಂದು ತಿಳಿಸಿದರು.

ಇರಕ ಸಂದ್ರ ನರಸಿಂಹಮೂರ್ತಿ ಮಾತನಾಡಿ, ಈ ದಿನ 35 ಷೇರು ಪ್ರಮಾಣಪತ್ರಗಳನ್ನು ಫಲಾನು ಭವಿಗಳಿಗೆ ವಿತರಿಸಲಾಗಿದೆ. ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ಮೂಲಕ 50 ಸಾವಿರ ದಿಂದ 1ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಲಭ್ಯವಿದ್ದು, ಅರ್ಹ ಫಲಾನುಭವಿಗಳಿಗೆ ಬ್ಯಾಂಕಿನ ಸಹಕಾರದೊಂದಿಗೆ ಸಾಲವನ್ನು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವರಾಜು, ಮುದ್ದಯ್ಯ, ಬಾಲಾಜಿ, ರೇಖಾ, ಮಂಜುಳಾ ಸೇರಿದಂತೆ ಹಲವಾರು ಮುಖಂಡರು ಹಾಗೂ ಷೇರುದಾರರು ಉಪಸ್ಥಿತರಿದ್ದರು.