Gauribidanur News: ವಿಜ್ಞಾನ ಕಲಿಕೆ ಕ್ರಿಯಾತ್ಮಕವಾಗಿರಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ
ಮಕ್ಕಳಲ್ಲಿ ಶಾಲಾ ಹಂತ ದಲ್ಲಿಯೇ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಆಸಕ್ತಿ ಯನ್ನು ಹೆಚ್ಚಿಸುವ ನಿಟ್ಟಿ ನಲ್ಲಿ ವಿಜ್ಞಾನ ದಿನಾಚರಣೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗುವುದರ ಜೊತೆಗೆ ಸಿ.ವಿ.ರಾಮನ್ ಅವರ ಕಾರ್ಯವೈಖರಿಯು ಎಲ್ಲರಿಗೂ ಮಾದರಿಯಾಗಿದೆ
ವಿಜ್ಞಾನ ಕೇವಲ ಕಲಿಕೆಯ ವಿಷಯವಾಗಿರದೆ ವಿದ್ಯಾರ್ಥಿಗಳ ಕ್ರಿಯಾತ್ಮಕ ಆಲೋಚನೆಗಳನ್ನು ಪ್ರಬಲಗೊಳಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ ಹೇಳಿದರು. -
Ashok Nayak
Nov 1, 2025 2:11 PM
ಗೌರಿಬಿದನೂರು : ವಿಜ್ಞಾನ ಕೇವಲ ಕಲಿಕೆಯ ವಿಷಯವಾಗಿರದೆ ವಿದ್ಯಾರ್ಥಿಗಳ ಕ್ರಿಯಾತ್ಮಕ ಆಲೋಚನೆಗಳನ್ನು ಪ್ರಬಲಗೊಳಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ ಹೇಳಿದರು.
ನಗರದ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನ ದೈನಂದಿನ ಜೀವನದಲ್ಲಿ ವಿಜ್ಞಾನ ತನ್ನದೇ ಆದ ಮಹತ್ವ ಹೊಂದಿದೆ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ತರ್ಕಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಶ್ನಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ವಿವೇಕಾನAದ ಶಾಲೆಯ ಕಾರ್ಯದರ್ಶಿ ಸಿ.ಎನ್.ನಂಜೇಗೌಡ ಮಾತನಾಡಿ, ಮಕ್ಕಳು ವೈಜ್ಞಾನಿಕ ವಿಚಾರಗಳತ್ತ ಆಸಕ್ತಿ ಬೆಳೆಸಿಕೊಳ್ಳುವ ಜೊತೆಗೆ ವಿಜ್ಞಾನದ ಪ್ರಯೋಗಾತ್ಮಕ ಚಿಂತನೆಯನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಬಹುದು ಎಂದರು.
ಇದನ್ನೂ ಓದಿ: America-China: ವ್ಯಾಪಾರ ಉದ್ವಿಗ್ನತೆಯ ನಡುವೆಯೇ ಟ್ರಂಪ್-ಜಿನ್ ಪಿಂಗ್ ಭೇಟಿ; ಏನಿದರ ಒಳ ಗುಟ್ಟು?
ಸರ್ವೋದಯ ಕಾಲೇಜು ಪ್ರಾಂಶುಪಾಲ ಟಿ.ಎನ್.ರಾಮಪ್ಪ ಮಾತನಾಡಿ, ಮಕ್ಕಳಲ್ಲಿ ಶಾಲಾ ಹಂತ ದಲ್ಲಿಯೇ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿ ನಲ್ಲಿ ವಿಜ್ಞಾನ ದಿನಾಚರಣೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗುವುದರ ಜೊತೆಗೆ ಸಿ.ವಿ.ರಾಮನ್ ಅವರ ಕಾರ್ಯವೈಖರಿಯು ಎಲ್ಲರಿಗೂ ಮಾದರಿಯಾಗಿದೆ’ ಎಂದು ಹೇಳಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾದ ಸಿ.ಎನ್.ಅಶ್ವತಪ್ಪರನ್ನು ಸನ್ಮಾನಿಸಲಾಯಿತು. ಶಾಲೆಗಳ ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ವಿಜ್ಞಾನ ದಿನಾ ಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸ ಲಾಯಿತು.
ಮುಖ್ಯ ಶಿಕ್ಷಕಿ ಯಶೋದಮ್ಮ, ಶಾಲಾ ಸಂಯೋಜಕ ವರದರಾಜ, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಅವಲನ್ನ, ತೀರ್ಪುಗಾರ್ತಿ ಮಂಜುಳಾ, ಶಿಕ್ಷಕರಾದ ಹರೀಶ್, ದಿನೇಶ್ ಅನಿಲ್, ನವೀನ್ ಹಾಜರಿದ್ದರು.