Shravana Shanivar: ಕೊನೆ ಶ್ರಾವಣ ಶನಿವಾರದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ವರಾದಾದ್ರಿ ಬೆಟ್ಟದ ಮೇಲೆ ಇರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಪೂಜಾ ಶ್ರೀ ವರದಾಂಜನೇಯ ಸ್ವಾಮಿಯವರಿಗೆ ತಿರುಪತಿ ತಿರುಮಲದಲ್ಲಿ ನಡೆಯುವ ಶೈಲಿಯಲ್ಲಿ 108 ಕೆ ಜಿಗಳ ಪುಳಿಯೋಗರೆ ಸೇವೆ ತಿರುಪ್ಪಾವಡ ಸೇವೆ ಮಾಡಲಾಗಿತ್ತು. ಇತಿಹಾಸ ಪ್ರಸಿದ್ಧ ಈ ದೇವಸ್ಥಾನ ದಲ್ಲಿ ಪ್ರತಿವರ್ಷ ಶ್ರಾವಣ ಹಿನ್ನೆಲೆಯಲ್ಲಿ ಶನಿವಾರ,ಸೋಮವಾರ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.


ಚಿಂತಾಮಣಿ: ಶ್ರಾವಣ ಮಾಸದ ಕೊನೆಯ ಶನಿವಾರದಂದು,ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ವರಾದಾದ್ರಿ ಬೆಟ್ಟದ ಮೇಲೆ ಇರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಪೂಜಾ ಶ್ರೀ ವರದಾಂಜನೇಯ ಸ್ವಾಮಿಯವರಿಗೆ ತಿರುಪತಿ ತಿರುಮಲದಲ್ಲಿ ನಡೆಯುವ ಶೈಲಿಯಲ್ಲಿ 108 ಕೆ ಜಿಗಳ ಪುಳಿಯೋಗರೆ ಸೇವೆ ತಿರುಪ್ಪಾವಡ ಸೇವೆ ಮಾಡಲಾಗಿತ್ತು. ಇತಿಹಾಸ ಪ್ರಸಿದ್ಧ ಈ ದೇವಸ್ಥಾನದಲ್ಲಿ ಪ್ರತಿವರ್ಷ ಶ್ರಾವಣ ಹಿನ್ನೆಲೆಯಲ್ಲಿ ಶನಿವಾರ, ಸೋಮವಾರ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಇದನ್ನೂ ಓದಿ: Shravana Shanivara: ಮೂರನೇ ಶ್ರಾವಣ ಶನಿವಾರ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ಹರಿದು ಬಂದ ಭಕ್ತ ಸಾಗರ
ಅದರಂತೆ ಬೆಳಿಗ್ಗೆ ಕಾಕಡಾರತಿ, ವಾಯಸ್ತುತಿ ಪುನಶ್ಚರಣ,ವಿಷ್ಣು ಸಹಸ್ರನಾಮ,ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮ ಗಳು ಜರುಗಿದವು.
ನಗರದ ವಿವಿಧ ಭಾಗಗಳಲ್ಲಿ ದೇವಸ್ಥಾನಗಳ ಮುಂಭಾಗ ಅನ್ನದಾನ ಕಾರ್ಯಕ್ರಮಗಳು ಸಹ ಏರ್ಪಡಿಸಲಾಗಿತ್ತು.