ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pawan Kumar: ನಿರ್ದೇಶಕ ಪವನ್ ಕುಮಾರ್‌ಗೆ ಒಲಿದು ಬಂತು ಬಾಲಿವುಡ್ ಆಫರ್!

Pawan Kumar: ನಿರ್ದೇಶಕ ಪವನ್ ಕುಮಾರ್ ಅವರಿಗೂ ಕೂಡ ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳುವ ಆಫರ್ ಒಂದು ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ನಟನಾಗಿ , ನಿರ್ದೇಶಕರಾಗಿ ಗುರುತಿಸಿ ಕೊಂಡಿದ್ದ ಇವರು ಈಗ ಹಿಂದಿಯ ಸಿನಿಮಾ ಒಂದಕ್ಕೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ಭಾರತೀಯ ಚಲನಚಿತ್ರ ವಿಮರ್ಶಕರಾದ ತರಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಪೊಸ್ಟ್ ಮಾಡಿ ಹಂಚಿಕೊಂಡಿದ್ದಾರೆ..

ನಿರ್ದೇಶಕ ಪವನ್ ಕುಮಾರ್ ಅವರಿಗೆ ಬಾಲಿವುಡ್ ಸಿನಿಮಾ ಆಫರ್!

ನಿರ್ದೇಶಕ ಪವನ್ ಕುಮಾರ್ ಗೆ ಬಾಲಿವುಡ್ ಸಿನಿಮಾ ಆಫರ್ -

Profile
Pushpa Kumari Nov 9, 2025 6:36 PM

ನವದೆಹಲಿ: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಹಿಟ್ ಸಿನಿಮಾ ಮಾಡಿದ್ದ ನಟ ನಟಿಯರ ಬೇಡಿಕೆ ಹೆಚ್ಚಾಗುತ್ತಲೇ ಇರುತ್ತದೆ. ಅದರಲ್ಲೂ ಅವರ ಫ್ಯಾನ್ಸ್ ಫಾಲೋವರ್ಸ್ ಹೆಚ್ಚಿ ದ್ದರೆ ಪರಭಾಷೆಯಲ್ಲಿಯೂ ಬೇಡಿಕೆ ಇರುತ್ತದೆ‌‌. ಸಿನಿಮಾದಲ್ಲಿ ಅಭಿನಯಿಸುವವರಿಗೆ ಮಾತ್ರವಲ್ಲದೆ ಸಿನಿಮಾ ನಿರ್ದೇಶಕರಿಗೂ ಪರಭಾಷೆಯ ಸಿನಿಮಾ ಮಾಡಲು ಆಫರ್ ನೀಡುವುದು ಇತ್ತೀಚೆಗೆ ಸಾಮಾನ್ಯ ವಿಚಾರವಾಗಿದೆ. ಕೆಜಿಎಫ್ ಸಿನಿಮಾ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಬಂದಿದ್ದು ನಟ ಮೋಹನ್ ಲಾಲ್ ಅವರ ಹೊಸ ಸಿನಿ ಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಂತೆಯೇ ಇದೀಗ ನಿರ್ದೇಶಕ ಪವನ್ ಕುಮಾರ್ (Pawan Kumar) ಅವರಿಗೂ ಕೂಡ ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳುವ ಆಫರ್ ಒಂದು ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ನಟನಾಗಿ , ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಇವರು ಈಗ ಹಿಂದಿಯ ಸಿನಿಮಾ ಒಂದಕ್ಕೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.

ಈ ಬಗ್ಗೆ ಭಾರತೀಯ ಚಲನಚಿತ್ರ ವಿಮರ್ಶಕರಾದ ತರಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಪೊಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ನಿರ್ಮಾಪಕ ಮನೀಶ್ ಮತ್ತು ನಟ, ನಿರ್ದೇಶಕ ಪವನ್ ಕುಮಾರ್ ಜೊತೆ ಇದ್ದ ಫೋಟೊ ಹಂಚಿಕೊಂಡಿದ್ದು ಅದರೊಂದಿಗೆ ಇಬ್ಬರು ಕೂಡ ಹೊಸ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಪವನ್ ಬಾಲಿವುಡ್ ಸಿನಿಮಾ ಒಂದಕ್ಕೆ ನಿರ್ದೇಶನ ಮಾಡುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ



ಬಾಲಿವುಡ್ ನ ಜಮ್ತಾರ ಹೆಸರಿನ ವೆಬ್ ಸರಣಿಯ ನಿರ್ಮಾಪಕ ರಾದ ಮನೀಶ್ ತ್ರೇಹನ್ (Manish Trehan) ಅವರ ಹೊಸ ಸಿನಿಮಾಕ್ಕೆ ನಿರ್ದೇಶಕರಾಗಲು ಸ್ಯಾಂಡಲ್ ವುಡ್ ನ ನಿರ್ದೇಶಕ ಪವನ್ ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅವರು ಈ ಆಫರ್ ಒಪ್ಪಿಕೊಂಡಿದ್ದು ಮನೀಶ್ ಜೊತೆ ಹೊಸ ಸಿನಿಮಾ ಮಾಡಲು ಕೈ ಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ:Koragajja Movie: ವಿಶೇಷ ಭದ್ರತೆಗೆ ʼಕೊರಗಜ್ಜʼ ಚಿತ್ರತಂಡ ಮನವಿ; ಗೃಹ ಸಚಿವ ಡಾ.ಜಿ. ಪರಮೇಶ್ವರ್‌ರಿಂದ ಸಕಾರಾತ್ಮಕ ಸ್ಪಂದನೆ

ಮನೀಶ್ ಅವರ ಮುಂದಿನ ಪ್ರಾಜೆಕ್ಟ್ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಗಿರಲಿದ್ದು ಅದನ್ನು ಯೂಟರ್ನ್ ಸಿನಿಮಾದಂತೆ ವಿಭಿನ್ನವಾಗಿ ತೆರೆ ಮೇಲೆ ಕರೆತರಬೇಕು ಎಂಬ ಕಾರಣಕ್ಕೆ ಪವನ್ ಕುಮಾರ್‌ಗೆ ಈ ಅವಕಾಶ ನೀಡಲಾಗಿದೆ‌. ಈ ಚಿತ್ರದ ಬಗ್ಗೆ ಗೌಪ್ಯತೆ ಕಾಯ್ದಿಟ್ಟು ಕೊಂಡಿದ್ದಾರೆ. ಸದ್ಯ ಪವನ್ ಕುಮಾರ್ ಅವರ ಕಥೆ ಮನೀಶ್ ಅವರಿಗೆ ಇಷ್ಟವಾಗಿದ್ದು ಕಥೆಯನ್ನು ಇನ್ನು ಡೆವಲಪ್ ಮಾಡುವ ಕೆಲಸದಲ್ಲಿ ಪವನ್ ಕುಮಾರ್ ಬ್ಯುಸಿಯಾಗಿದ್ದಾರೆ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ‌.

ಲೂಸಿಯಾ, ಯುಟರ್ನ್‌ ಗಳಂತಹ ವಿಭಿನ್ನ ಕಥೆಯಾಧರಿತ ಸಿನಿಮಾಕ್ಕೆ ನಿರ್ದೇಶನವನ್ನು ಪವನ್ ಕುಮಾರ್ ಅವರು ಮಾಡಿದ್ದರು. ಬಳಿಕ ಲೈಲಾ ಎಂಬ ವೆಬ್ ಸರಣಿ ಒಂದಕ್ಕೂ ಕೂಡ ನಿರ್ದೇಶನ ಮಾಡಿದ್ದಾರೆ. ಅದರ ಜೊತೆಗೆ ಮನಸಾರೆ ಸಿನಿಮಾದಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದರು. ಗಾಳಿಪಟ 2ರಲ್ಲಿ ಮುಖ್ಯ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು. ನಟನೆ, ನಿರ್ದೇಶನ ಎರಡ ರಲ್ಲೂ ಸಕ್ರಿಯವಾಗಿರುವ ಇವರಿಗೆ ಬಾಲಿವುಡ್ ಹೊಸ ಸಿನಿಮಾ ನಿರ್ದೇಶನ ಅವಕಾಶ ದೊರಕಿದೆ‌. ಹೀಗಾಗಿ ಮುಂದಿನ ದಿನದಲ್ಲಿ ಬಾಲಿವುಡ್ ದೊಡ್ಡ ಸ್ಟಾರ್ ನಟರಿಗೂ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಗುವ ಚಾನ್ಸ್ ಕೂಡ ಇದೆ‌ ಎಂದು ಹೇಳಲಾಗುತ್ತಿದೆ.