MNarega Bachav Movement: ಚಿಕ್ಕಬಳ್ಳಾಪುರದಲ್ಲಿ ಮೇಳೈಸಿದ ನರೇಗಾ ಬಚಾವ್ ಜನಾಂದೋಲನದ ರಣಕಹಳೆ : ಲಕ್ಷ ಲಕ್ಷ ಜನಸಂಗಮ
ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 30 ಎಕರೆ ಬಯಲು ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸೋಮವಾರ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗಿಯಾಗಿದ್ದ ಗಣ್ಯರು ವಿರಾಜಮಾನವಾಗಿದ್ದರೆ ವೇದಿಕೆ ಯ ಮುಂಭಾಗದ ಬೃಹತ್ ಅವರಣದಲ್ಲಿ ಜನತೆಗಾಗಿ ಮೀಸಲಾಗಿದ್ದ ಆಸನಗಳಲ್ಲಿ ಆಸೀನರಾಗಿ ಮುಖ್ಯಮಂತ್ರಿ ಸಹಿತ ಗಣ್ಯರ ಮಾತುಗಳಿಗೆ ಕಿವಿಯಾದರು.
-
ಹಣಬಿಸಿಲ ನಡುವೆ ಹರಿದು ಬಂದ ಜನಸಾಗರ ಕಂದ ನಾಯಕರ ಸಂತಸ; ಎಲ್ಲೆಲ್ಲೂ ಕೇಕೆ ಶಿಳ್ಳೆ ಜೈಕಾರಗಳ ಅಬ್ಬರ
ಚಿಕ್ಕಬಳ್ಳಾಪುರ: ನಗರ ಹೊರವಲಯ ಅಗಲಗುರ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 44ರ ಸಮೀಪ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮನರೇಗಾ ಬಚಾವ್ ಆಂದೋಲನ(MNarega Bachav Movement) ಕ್ಕೆ ಜನಸಾಗರವೇ ಹರಿದು ಬಂದಿತ್ತು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಂದಿದ್ದ ಪಕ್ಷದ ಕಾರ್ಯಕರ್ತರು ಮನರೇಗಾ ಜಾಬ್ ಕಾರ್ಡ್ʼರರು ಕಾರ್ಯಕ್ರಮಕ್ಕೆ ಕಳೆ ತುಂಬುವಲ್ಲಿ ಸಂಪೂರ್ಣ ಯಶಸ್ವಿಯಾದರು.
ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 30 ಎಕರೆ ಬಯಲು ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸೋಮವಾರ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗಿಯಾಗಿದ್ದ ಗಣ್ಯರು ವಿರಾಜಮಾನ ವಾಗಿದ್ದರೆ ವೇದಿಕೆಯ ಮುಂಭಾಗದ ಬೃಹತ್ ಅವರಣದಲ್ಲಿ ಜನತೆಗಾಗಿ ಮೀಸಲಾಗಿದ್ದ ಆಸನಗಳಲ್ಲಿ ಆಸೀನರಾಗಿ ಮುಖ್ಯಮಂತ್ರಿ ಸಹಿತ ಗಣ್ಯರ ಮಾತುಗಳಿಗೆ ಕಿವಿಯಾದರು.
ಅಖಿಲಭಾರತ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಕೋಲಾರ ಚಿಕ್ಕಬಳ್ಳಾ ಪುರ, ಬೆಂಗಳೂರು ಗ್ರಾಮಾಂತರದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆದುಕೊಂಡು ಬಂದಿದ್ದ ವಾಹನಗಳಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತಡೆಯಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಇದ್ದ ಪೊಲೀಸರು ಸಂಚಾರದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳುವಲ್ಲಿ ಯಶಸ್ವಿಯಾದರು.
10 ಗಂಟೆಗೆ ವೇದಿಕೆ ಕಾರ್ಯಕ್ರಮ ಎಂದು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದರೂ 12 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯಮಂತ್ರಿಗಳು ವೇದಿಕೆಗೆ ಆಗಮಿಸಿದ್ದು 1.30 ಆದರೂ ಭಾಷಣ ಮಾಡುವಷ್ಟರಲ್ಲಿ 3 ಗಂಟೆಯಾಗಿತ್ತು. ಸಿದ್ಧರಾಮಯ್ಯ ಅವರ ಭಾಷಣ ದಲ್ಲಿರುತ್ತಿದ್ದ ಗತ್ತು ಗೈರತ್ತು ಸಭೆಯನ್ನು ಸೆಳೆಯುವಂತಿದ್ದ ವೈನೋಧೀಕ ವಿಶಿಷ್ಟತೆ ಮಾಯವಾಗಿತ್ತು. ಕೇಂದ್ರದ ವೈಫಲ್ಯಗಳನ್ನು ಎತ್ತಿ ಹಿಡಿಯವಲ್ಲಿ ಮುಂಚೂಣಿಯಲ್ಲಿದ್ದ ಸಿಎಂ ಯಾಕೋ ದಣಿದ ರೀತಿಯಲ್ಲಿ ಕಾಣಿಸಿದರು.
ಇದನ್ನೂ ಓದಿ: MNarega Bajau Movement: ಚಿಕ್ಕಬಳ್ಳಾಪುರ ನರೇಗಾ ಬಚಾವ್ ಆಂದೋಲನಕ್ಕೆ ವೇದಿಕೆ ಸಜ್ಜು: ಎಲ್ಲೆಲ್ಲೂ ಕಾರ್ಯಕ್ರಮದ್ದೇ ಗುಲ್ಲು
ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಉಪಮುಖ್ಯಮಂತ್ರಿ ಮತ್ತು ಸುರ್ಜೆವಾಲಾರ ಭಾಷಣ ದಲ್ಲಿ ಬಿಜೆಪಿ ಪಕ್ಷಕ್ಕೆ ಟಾಂಗ್ ನೀಡುವ ಅಂಶಗಳಿದ್ದವು. ಡಿ.ಕೆ.ಶಿವಕುಮಾರ್ ಅವರ ಮಾತು ಮಾತಿಗೆ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆ ಹೊಡೆದು ಹುರಿಸುಂಬಿಸುತ್ತಿದ್ದರು. ಸುರ್ಜೆವಾಲಾ ಭಾಷಣದಲ್ಲಿ ಮೋದಿ ಸರಕಾರದ ಜನವಿರೋಧಿ ಆಂಶಗಳಿಗೆ ಒತ್ತು ನೀಡಲಾಗಿತ್ತು.
ಶಾಸಕ ಪ್ರದೀಪ್ ಈಶ್ವರ್ ತಮ್ಮ ಸ್ವಾಗತ ಭಾಷಣದಲ್ಲಿ ಚಿಕ್ಕಬಳ್ಳಾಪುರ ನೆಲದ ಮಹಿಮೆ ಸಾಧುಸಂತರ ಅಭಯ, ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸ್ಮರಿಸುತ್ತಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪುವಂತೆ ಬಡವರ ಬದುಕಿಗೆ ಆಸರೆಯಾಗಿದ್ದ ಮನರೇಗಾ ಯೋಜನೆ ಬದಲಾವಣೆ ಬೇಡ. ವಿಬಿಜಿ ರಾಮ್‌ಜಿ ಯೋಜನೆ(VBG Ramji Yojana) ವಾಪಸ್ಸು ಮಾಡುವವರೆಗೆ ಹೋರಾಟ ನಿರಂತರ ಎಂದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ರೈತರ ಜೀವನಾಡಿಯಾಗಿದ್ದ ಮನರೇಗಾ ತೆಗೆದು ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಜನಾಂದೋ ಲನ ರೂಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ರೈತಾಪಿ, ಕೃಷಿ ಕೂಲಿ ಕಾರ್ಮಿಕರ ಪಾಲಿಗೆ ಶತ್ರುವಾಗಿದೆ. ಗ್ಯಾರೆಂಟಿಗಳು ಗ್ರಾಮೀಣರ ಬದುಕಿಗೆ ವರದಾನ. ಕೇಂದ್ರದ ಹುನ್ನಾರ ಅರಿತು ಕೆಲಸ ಮಾಡೋಣ, ಬಡವರ ಕಷ್ಟಗಳಿಗೆ ಹೆಗಲಾಗೋಣ ಎಂದರು.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ನಾವು ಹೃದಯದಲ್ಲಿಟ್ಟುಕೊಳ್ಳಬೇಕು. ಕಾರಣ ಭಾರತಕ್ಕೆ ಸ್ವಾತಂತ್ರ‍್ಯ ಜೊತೆಗೆ ಕಾರು ಬಸ್ಸು ರೈಲು ವಿಮಾನ, ವಿಜ್ಞಾನ ತಂತ್ರಜ್ಞಾನ,ಅಣೆಕಟ್ಟು, ಸೂರು ವಸತಿ ಆಶ್ರಯ ಶಾಲೆ ಕಾಲೇಜು ಎಲ್ಲವನ್ನೂ ಕೊಟ್ಟಿದೆ. ಹಸಿವು ಮುಕ್ತ ಭಾರತ ಕಟ್ಟಲು ಮನರೇಗಾ ಜಾರಿಗೆ ಬಂದಿತು. ಇದರ ಬೆಳವಣಿಗೆ ಸಹಿಸದ ಬಿಜೆಪಿ ವಿಬಿ ರಾಮ್ ಜೀ ತಂದಿದೆ. ರೈತರು ಏನೇ ಕೆಲಸ ಮಾಡಲು ಪಂಚಾಯಿತಿ ಸಭೆ ತೀರ್ಮಾನ ಮಾಡಬೇಕು. ಮನರೇಗಾ ಗ್ರಾಮಗಳ ಹೊಂದಾಣಿಕೆಗೆ ಕಾರಣವಾಗಿದೆ. ಇದರ ಪರವಾಗಿ ನಾವು ನೀವು ನಿಲ್ಲೋಣ ಎಂದರು.
ಮನರೇಗಾ ಬದಲಿಸಿದ ಕೇಂದ್ರದ ಉದ್ದೇಶವೇನೆಂದು ಮೊದಲು ತಿಳಿಸಿ. ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಹಾಕಲು ಕಾರಣವೇನು? ಹಿಂದೆ ನೀಡುತ್ತಿದ್ದ ಶೇ.90ರಷ್ಟು ಅನುದಾನದಲ್ಲಿ ಈಗ ಕೇವಲ 40ರಷ್ಟು ನೀಡಲು ಮುಂದಾಗಿದೆ. ಉಳಿದ ಶೇ.50 ಯಾರಿಗೆ ಕೊಡಲು ತೀರ್ಮಾನಿಸಲಾಗಿದೆ ಎಂಬುದು ದೇಶದ ಜನತೆಗೆ ಮೊದಲು ತಿಳಿಸಿ ಎಂದು ಆಗ್ರಹಿಸಿದರು. ಸ್ಯಾಟಲೈಟ್ ಸರ್ವೇ ಮೂಲಕ ಕಾಮಗಾರಿ ವೀಕ್ಷಣೆ ಮಾಡುತ್ತಾರಂತೆ. ಯಾಕೆ ಗ್ರಾಮೀಣರ ಮೇಲೆ ನಿಮಗೆ ನಂಬಿಕೆಯಿಲ್ಲವೇ ಎಂದರು.
ಎಂಎಲ್‌ಸಿ ಅನಿಲ್ ಕುಮಾರ್ ಮಾತನಾಡಿ, ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.ಕಾರಣ ಮನರೇಗಾ ಇದ್ದಾಗ ರಸ್ತೆ ಚರಂಡಿ, ಹೊಲ ಗದ್ದೆಗಳಲ್ಲಿ ಬದು ನಿರ್ಮಾಣ, ಶಾಲೆಗಳ ದುರಸ್ತಿಗೆ ಆಸರೆ ಆಗಿತ್ತು. ವಿಬಿಜಿ ರಾಮ್ ಜಿ ಮನಮೋಹನ್ ಸಿಂಗ್ ಅವರ ದೂರ ದೃಷ್ಟಿಗೆ ಕೊಡಲಿ ಪೆಟ್ಟು ನೀಡಿದೆ. ಜಿಲ್ಲಾ, ತಾಲೂಕು ಹೋಬಳಿ ಮಟ್ಟದಲ್ಲಿ ಹೋರಾಟ ರೂಪಿಸಲು ಪಕ್ಷ ಚಿಂತನೆ ನಡೆಸಿದ್ದು ಈ ಹೋರಾಟವನ್ನು ಹಳ್ಳಿ ಹಳ್ಳಿಗಳಿಗೆ ತೆಗೆದುಕೊಂಡು ಹೋಗೋಣ ಎಂದರು.
ಲೋಕಸಭಾ ಪರಾಜಿತ ಅಭ್ಯರ್ಥಿ ಗೌತಮ್ ಮಾತನಾಡಿ, ಇದು ಕಾಂಗ್ರೆಸ್ ಹೋರಾಟ ಮಾತ್ರವಲ್ಲ, ಇದು ಜನರ ಹೋರಾಟ. ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಜಾರಿಗೆ ಬಂದಿತು. ಕುಟುಂಬ ಸಹಿತ ಕೆಲಸ ಮಾಡುವ ಅವಕಾಶ ಇತ್ತು. ಹೊಸ ಯೋಜನೆಯಲ್ಲಿ ನೀವು ಕೇಳಿದರೆ ಕೆಲಸ ಸಿಗಲ್ಲ,ಅವರು ಕೊಟ್ಟಾಗ ಆ ಕೆಲಸ ಮಾಡಬೇಕು ಎಂದರು.
ರಕ್ಷಾ ರಾಮಯ್ಯ ಮಾತನಾಡಿ, ಮನರೇಗಾ ಜನಪರವಾದ ಯೋಜನೆ ಗ್ರಾಮ ಭಾರತ ಕಟ್ಟಲು ಸಂಕಲ್ಪಿಸಿ ಜಾರಿಗೊಳಿಸಿದ ಯೋಜನೆ. 20 ವರ್ಷಗಳ ಕಾಲ ಜನರ ಬದುಕಿಗೆ ಆಸರೆಯಾದ ಯೋಜನೆ. ಇದನ್ನು ಹಾಳು ಮಾಡಲು ಬಿಡಬಾರದು ಕೇಂದ್ರ ಸರಕಾರ ಹೊಸ ಯೋಜನೆ ವಾಪಸ್ಸು ಪಡೆಯುವ ತನಕ ಹೋರಾಟ ನಿಲ್ಲದು ಎಂದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಬಿ.ಸಿ.ಚಂದ್ರಶೇಖರ್, ಕೃಷ್ಣ ಭೈರೇಗೌಡ, ಎಂ ಸಿ ಸುಧಾಕರ್, ಬೈರತಿ ಸುರೇಶ್, ಕೆ.ಹೆಚ್.ಮುನಿಯಪ್ಪ ಅವರ ಶ್ರಮ ಇಲ್ಲಿದೆ. ಎಲ್ಲಾ ಶಾಸಕರ ಬೆಂಬಲ ಇದೆ ಎಲ್ಲರಿಗೂ ಧನ್ಯವಾದಗಳು ಎಂದರು..
ಎಂ.ಸಿ.ಸುಧಾಕರ್(M.C.Sudhakar) ಮಾತನಾಡಿ, 2005ರಲ್ಲಿ ತನ್ನ ಪ್ರಜೆಗಳಿಗೆ ಉದ್ಯೋಗ ಖಾತರಿ ನೀಡುವ ಮೂಲಕ ಗಾಂಧಿ ಕನಸಿನ ಭಾರತ ನಿರ್ಮಾಣಕ್ಕೆ ನಾಂದಿ ಹಾಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. 60 ವರ್ಷಗಳಲ್ಲಿ ಈ ಪಕ್ಷ ತಂದಿದ್ದ ಎಲ್ಲ ಯೋಜನೆಗಳ ಹೆಸರನ್ನು ರಾಜಕೀಯ ದ್ವೇಷದಿಂದ ಕೇಂದ್ರ ಸರಕಾರ ಬದಲಾಯಿಸಲು ಮುಂದಾಗಿದೆ. ವಿಬಿಜೆ ರಾಮ್ ಜಿ ಗ್ರಾಮ ಪಂಚಾಯಿತಿಗಳ ಪರಮಾಧಿಕಾರವನ್ನು ಮಕಾಡೆ ಮಲಗಿಸಿದೆ. ರೈತ ಕೃಷಿ ಕಾರ್ಮಿಕರ ಬದುಕು ಕಸಿದಿದೆ. ಇದರ ಹುನ್ನಾರಗಳನ್ನು ಜನತೆಗೆ ತಿಳಿಸಲು ಇಂತಹ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದರು.
ಕೆ.ಹೆಚ್.ಮುನಿಯಪ್ಪ ಮಾತನಾಡಿ, ನಾನು ಸಚಿವ ಆಗಿದ್ದಾಗ ಈ ಯೋಜನೆ ಜಾರಿಗೆ ಬಂದಿದೆ.ಯುಪಿಎ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸ ಲಾಗಿತ್ತು. ಮೋದಿ ಸರಕಾರ ಈ 13 ವರ್ಷಗಳಲ್ಲಿ ಒಂದೇ ಒಂದು ಜನಪರ 1 ಕಾರ್ಯಕ್ರಮ ರೂಪಿಸಿದ್ದರೆ ಹೇಳಲಿ ನೋಡೋಣ. ಕೇವಲ ಕಾಂಗ್ರೆಸ್ ಪಕ್ಷದ ಟೀಕೆ ಟೀಕೆ ಟೀಕೆ ಷ್ಟೆ ಇವರ ಸಾಧನೆ.ಮುಂದೆಯೂ ಯಾವ ಗುಣಾತ್ಮಕ ಯೋಜನೆ ಜಾರಿಗೆ ತರುವುದಿಲ್ಲ ಎಂದು ಟೀಕಿಸಿದರು.
ಡಾ.ಎಂ.ಸಿ,ಸುಧಾಕರ್ ಅವರು ಮಾತಿಗೆ ಬರುವ ಪ್ರತಿ ಸಮಯವೂ ಅವರ ಕ್ಷೇತ್ರದ ಅಭಿಮಾನಿಗಳು ಬೊಬ್ಬುಲಿ ಪುಲಿಕಿ ಜೈ. ಸುಧಾಕರ್ ಅಣ್ಣನಿಗೆ ಜೈ ಎನ್ನುತ್ತಾಕೈ ಬಾವುಟ ಗಳನ್ನು ಬೀಸಿ ಅಭಿಮಾನ ತೋರಿಸಿದರು.
ಕಾರ್ಯಕ್ರಮದ ಉಸ್ತುವಾರಿ ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಬೃಹತ್ ಕಾರ್ಯ ಕ್ರಮದ ಯಶಸ್ಸಿಗೆ ಕಾರಣೀಭೂತರಾದ ಸಚಿವ, ಶಾಸಕ, ಮುಖಂಡರನ್ನು ಮನಸಾರೆ ಕೊಂಡಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮತ್ರಿಗಳು, ಸಚಿವರು ಶಾಸಕರಿಗೆ ಜಿಲ್ಲೆಯ ಹೆಗ್ಗುರುತು ರೇಷ್ಮೆಗೂಡಿನಿಂದ ಮಾಡಿದ್ದ ಬೃಹತ್ ಮಾಲೆ ಮತ್ತು ಪಂಚಲೋಹದ ಶಿಲ್ಪಗಳನ್ನು ಕಾಣಿಕೆಯಾಗಿ ನೀಡಿದರು.
ಲಕ್ಷಾಂತರ ಮಂದಿ ಆಗಮಿಸುವ ಹಿನ್ನೆಲೆ, ಬೇಸಿಗೆಯ ಬೇಗೆ ಇವನ್ನೆಲ್ಲಾ ಗಮನ ಸಿದ್ದ ಆಯೋಜಕರು ಯಾರೂ ಕೂಡ ಬಿರುಬಿಸಿಲಿನಲ್ಲಿ ಒಣಗದಂತೆ ನೆರಳಿವ ವ್ಯವಸ್ಥೆ ಮಾಡಿ ದ್ದರು. ಊಟದ ಸ್ಥಳದಲ್ಲಿ ಕೂಡ ನೂರಾರು ಕೌಂಟರ್‌ಗಳನ್ನು ಮಾಡಿ ಬಂದವರಿಗೆ ಹೊಟ್ಟೆ ತುಂಬ ಊಟ, ಕುಡಿಯಲು ಶುದ್ಧನೀರಿನ ವ್ಯವಸ್ಥೆ ಮಾಡಿದ್ದರು. ಎಲ್ಲೂ ಕೂಡ ನೂಕುನುಗ್ಗಲು ಆಗದಂತೆ ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಜಿಲ್ಲೆಗೆ ಮೂರನೆ ಭಾರಿ ಭೇಟಿ ಆದರೂ ನಿರಾಸೆ: 2025ರಲ್ಲಿ ಜಿಲ್ಲೆಗೆ ಎರಡು ಬಾರಿ ಮುಖ್ಯಮಂತ್ರಿಗಳು ಬಂದಿದ್ದರು. ಗೌರಿಬಿದನೂರಿನಲ್ಲಿ ನಡೆದ ಸೋಲಾರ್ ಟೇಕ್ ಪಾರ್ಕ್ ಉದ್ಘಾಟಿಸಲು ಒಮ್ಮೆ ಬಂದಿದ್ದರು. 2025ರ ನವೆಂಬರ್‌ನಲ್ಲಿ ಶಿಡ್ಲಘಟ್ಟ ತಾಲೂಕಿಗೆ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಉದ್ಘಾಟಿಸಲು ಎರಡನೇ ಬಾರಿ ಬಂದಿದ್ದರು. 2026ರಲ್ಲಿ ಮೂರನೇ ಬಾರಿಗೆ ಮನರೇಗಾ ಬಚಾವ್ ಸಂಗ್ರಾಮ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮೂರು ಬಾರಿ ಬಂದರೂ ಜಿಲ್ಲೆಯ ಜನತೆಗೆ ಬೇಕಾದ ಶುದ್ಧಕುಡಿಯುವ ನೀರಿನ ಬಗ್ಗೆಯಾಗಲಿ, ಬಹುದಿನಗಳ ಕನಸಾದ 3ನೇ ಹಂತದ ಶುದ್ಧೀಕರಣ ಮಾಡುವ ಕುರಿತಾಗಲಿ ಬಾಯಿ ಬಿಡದೆ ನಿರಾಸೆ ಮೂಡಿಸಿದರು ಎಂಬ ಮಾತುಗಳು ಜೋರಾಗಿ ಕೇಳಿ ಬಂದವು.
ಭಾರಿ ಪೊಲೀಸ್ ಭದ್ರತೆ: ಸಿದ್ದರಾಮಯ್ಯ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪ ಗಾವಲು ಇತ್ತು ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರನ್ನು ಪ್ರತಿ ಯೊಬ್ಬರನ್ನು ಪೊಲೀಸರು ಚೆಕ್ ಮಾಡಿ ಕಳುಹಿಸಿದ್ದರು. ಯಾವುದೇ ರೀತಿ ಜನರಿಗೆ ಮತ್ತು ಕಾರ್ಯಕರ್ತ ರಿಗೆ ಯಾವುದೇ ತೊಂದರೆ ಆಗದಂತೆ 1500 ಸಾವಿರ ಪೋಲೀಸರ ನಿಯೋಜನೆ ಮಾಡಲಾ ಯಿತ್ತು.
ಹಳ್ಳಿಗಳಿಗೆ ಬಸ್ ವ್ಯವಸ್ಥೆ: ಮನರೇಗಾ ಬಚಾವ್ ಸಂಗ್ರಾಮ್(MNREGA Bachao Sangram) ಕಾರ್ಯಕ್ರಮಕ್ಕೆ ಆಗಮಿಸಲು ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬರುವ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಬಸ್ ವ್ಯವಸ್ಥೆ ಮಾಡಲಾಯಿತ್ತು.
ಸಿದ್ದರಾಮಯ್ಯ ಅಭಿಮಾನಿ ಗಳಿಂದ ಡಾನ್ಸ್: ಮನ್ ರೇಗಾ ಬಚಾವ್ ಸಂಗ್ರಾಮ್ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬಂದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಪುರುಷರು ನೃತ್ಯ ಪ್ರದರ್ಶನ ಮಾಡಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಕೂಗಿದ್ದರು.
ಹೀಗೆ ನರೇಗಾ ಬಚಾವ್ ಆಂದೋಲನ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆದು ಪಕ್ಷದ ಉಸ್ತುವಾರಿಗಳ ಹೊಗಳಿಕೆಗೆ ಪಾತ್ರವಾಯಿತು.