ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganeshotsava: ಆ.27ರಿಂದ ಸುಪ್ರಸಿದ್ಧ ಬೈಪಾಸ್ ಗಣೇಶೋತ್ಸವ ಪ್ರಾರಂಭ

ಗಣಪತಿ ಮೂರ್ತಿ ನಿರ್ಮಿಸಲು ಪವಿತ್ರ ಗಂಗಾನದಿಯ ಮಣ್ಣನ್ನು ಮಾತ್ರ ಬಳಸಲಾಗುತ್ತಿದ್ದು, ಯಾವುದೇ ರೀತಿಯ ರಸಾಯನಿಕ ವಸ್ತುಗಳನ್ನು ಬಳಸದೆ,ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಪ್ರತಿದಿನವೂ ಸಾವಿರಾರು ಮಂದಿ ಭಕ್ತಾಧಿಗಳು ಗಣಪನ ದರ್ಶನಕ್ಕಾಗಿ ಆಗಮಿಸು ತ್ತಾರೆ. ಅವರುಗಳ ಸುರಕ್ಷಾ ದೃಷ್ಟಿಯಿಂದ ಗಣಪತಿ ಪೆಂಡಾಲಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸ ಲಾಗುತ್ತಿದೆ ಮತ್ತು ಅಗ್ನಿ ನಿರೋಧಕ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಸರ್ಕಾರದ ನಿಯಮಾವಳಿ ಗಳನ್ನು ಪಾಲಿಸಲಾಗುತ್ತಿದೆ ಎಂದರು.

ಆ.27ರಿಂದ ಸುಪ್ರಸಿದ್ಧ ಬೈಪಾಸ್ ಗಣೇಶೋತ್ಸವ ಪ್ರಾರಂಭ

ನಗರದ ಬೈಪಾಸ್ ರಸ್ತೆಯ ಶ್ರೀ ವಿದ್ಯಾಗಣಪತಿ ಯುವಕರ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ೧೯ ದಿನಗಳ ಕಾಲ ಅತ್ಯಂತ ಶ್ರದ್ದಾಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬೈಪಾಸ್ ರವಿಕುಮಾರ್ ತಿಳಿಸಿದರು.

Ashok Nayak Ashok Nayak Aug 18, 2025 11:36 PM

ಗೌರಿಬಿದನೂರು : ನಗರದ ಬೈಪಾಸ್ ರಸ್ತೆಯ ಶ್ರೀ ವಿದ್ಯಾಗಣಪತಿ ಯುವಕರ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ೧೯ ದಿನಗಳ ಕಾಲ ಅತ್ಯಂತ ಶ್ರದ್ದಾಭಕ್ತಿಯಿಂದ ಗಣೇಶೋತ್ಸವ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬೈಪಾಸ್ ರವಿಕುಮಾರ್ ತಿಳಿಸಿದರು.

ಅವರು ನಗರದ ಬೈಪಾಸ್ ಗಣಪತಿ ಪೆಂಡಾಲಿನಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ಬಾರಿ ೨೨ ಅಡಿ ಎತ್ತರದ ಪ್ರಣವರುದ್ರ ಮಹಾಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದು,ಗಣಪತಿ ವಿಗ್ರಹವನ್ನು ಸ್ಥಳದಲ್ಲಿಯೇ ತಯಾರು ಮಾಡಲು ಒಂದು ತಿಂಗಳ ಹಿಂದೆಯೇ ದೂರದ ಕಲ್ಕತ್ತಾದಿಂದ ನುರಿತ ಶಿಲ್ಪಿಗಳು, ಕಲಾಕಾರರು ಬಂದಿದ್ದಾರೆ.

ಇದನ್ನೂ ಓದಿ: Golden Star Ganesh: ಚೇತನ್ ಕುಮಾರ್ ನಿರ್ದೇಶನದ ಹೊಸ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಹೀರೋ

ಗಣಪತಿ ಮೂರ್ತಿ ನಿರ್ಮಿಸಲು ಪವಿತ್ರ ಗಂಗಾನದಿಯ ಮಣ್ಣನ್ನು ಮಾತ್ರ ಬಳಸಲಾಗುತ್ತಿದ್ದು, ಯಾವುದೇ ರೀತಿಯ ರಸಾಯನಿಕ ವಸ್ತುಗಳನ್ನು ಬಳಸದೆ,ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಪ್ರತಿದಿನವೂ ಸಾವಿರಾರು ಮಂದಿ ಭಕ್ತಾಧಿಗಳು ಗಣಪನ ದರ್ಶನ ಕ್ಕಾಗಿ ಆಗಮಿಸುತ್ತಾರೆ. ಅವರುಗಳ ಸುರಕ್ಷಾ ದೃಷ್ಟಿಯಿಂದ ಗಣಪತಿ ಪೆಂಡಾಲಿನಲ್ಲಿ ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗುತ್ತಿದೆ ಮತ್ತು ಅಗ್ನಿ ನಿರೋಧಕ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ ಎಂದರು.

ಸಂಘದ ಸದಸ್ಯ ಹುದುಗೂರು ಶಿವಕುಮಾರ್ ಅವರು ಮಾತನಾಡಿ, ಈ ಬಾರಿಯ ಗಣಪತಿ ಪೆಂಡಾಲು ನಿರ್ಮಿಸಲು ಸುಪ್ರಸಿದ್ಧ ನಕ್ಷತ್ರ ಇವೆಂಟ್ಸ್ ಅವರನ್ನು ಗೊತ್ತುಪಡಿಸಲಾಗಿದ್ದು, ದೇಶದ ಪ್ರಸಿದ್ಧ ಧಾರ್ಮಿಕ ಸ್ಥಳಗಳಾದ ಬದರಿನಾಥ್, ಅಯೋಧೆ, ಕೇದಾರನಾಥ ಹಾಗೂ ಇನ್ನಿತರೆ ದೇವಾಲಯಗಳ ಪ್ರತಿರೂಪಗಳನ್ನು ಬಿಂಬಿಸಲಾಗುತ್ತದೆ ಎಂದರು.

ಸಂಘದ ಮತ್ತೊರ್ವ ಸದಸ್ಯ ನಿಖಿಲ್ ಅವರು ಮಾತನಾಡಿ ೧೯ ದಿನಗಳ ಕಾಲ ನಡಯುವ ಗಣೇಶೋ ತ್ಸವ ಕಾರ್ಯಕ್ರಮದಲ್ಲಿ ಪ್ರತಿದಿನವೂ ಹೋಮ ಹವನಗಳು,ದೇವತಾ ಕಾರ್ಯಗಳು ನೆರೆವೇರಲಿದ್ದು ಇದರ ಜೊತೆಗೆ ಸಂಜೆ ಹೊತ್ತಿನಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ್, ಬಾಬುರೆಡ್ಡಿ, ಲಕ್ಷ್ಮೀಪತಿ, ಶಿವಾರೆಡ್ಡಿ, ಶಾಂತರಾಜು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.