Chikkaballapur News: ಕೆಂಪೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರು ಕೂಡಲೇ ಕ್ಷಮೆ ಕೇಳಬೇಕು : ಕೋನಪ್ಪರೆಡ್ಡಿ ಆಗ್ರಹ
ಗುಡಿಬಂಡೆ ಪಟ್ಟಣದಲ್ಲಿ ಒಕ್ಕಲಿಗರು ಮತ್ತು ಬಲಿಜ ಸಮುದಾಯದ ನಡುವೆ ಏರ್ಪಟ್ಟಿರುವ ಪ್ರತಿಮೆ ಸಮರ ಸಮಾಜದಲ್ಲಿ ಶಾಂತಿ ಕದಡಬಾರದು.ಪ್ರತಿಮೆಯಲ್ಲಿ ಮೂಡುವ ಇಬ್ಬರೂ ಕೂಡ ಮಹಾಚೇತನರು. ಇದಕ್ಕಾಗಿ ಏರ್ಪಟ್ಟಿರುವ ಸಂಘರ್ಷ ಸರಿಯಾದುದಲ್ಲ. ನಾವು ನಮ್ಮ ಸಮು ದಾಯ ಕಾಲಜ್ಞಾನಿ ಕೈವಾರ ತಾತಯ್ಯ ಅವರನ್ನು ಪೂಜಿಸುತ್ತಾ ಗೌರವಿಸುತ್ತಾ ಬಂಧಿಸಿದ್ದೇವೆ. ಆದರೆ ಕೆಂಪೇಗೌಡರ ಪ್ರತಿಮೆಗೆ ಚಪ್ಪಲಿ ಹಾರ ಹಾಕುವುದಾಗಿ ಉದ್ಧಟತನದಲ್ಲಿ ಹೇಳಿರುವ ವ್ಯಕ್ತಿಯ ವಿರುದ್ಧ ನಮ್ಮ ಹೋರಾಟವಿದೆ

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಇದ್ದರು.

ಚಿಕ್ಕಬಳ್ಳಾಪುರ : ಗುಡಿಬಂಡೆಯ ವಿವಾದಿತ ಸ್ಥಳದಲ್ಲಿ ಪುತ್ಥಳಿ ಅನಾವರಣಕ್ಕೆ ಅವಕಾಶ ಮಾಡಿ ಕೊಡುವುದು ಬಿಡುವುದು ಸರಕಾರಕ್ಕೆ ಬಿಟ್ಟ ವಿಚಾರ. ಆದರೆ ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಯಾರೋ ಕಿಡಿಗೇಡಿ ಮಾಡುವ ಕೆಲದಿಂದ ಸಮಾಜದಲ್ಲಿ ಶಾಂತಿ ಕದಡುತ್ತದೆ. ಹಾಗಾಗಿ ಇಂತಹ ಕಿಡಿಗೇಡಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒಕ್ಕಲಿಗರ ಸಂಘದ ಕೋನಪರೆಡ್ಡಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಗುಡಿಬಂಡೆ ಪಟ್ಟಣದಲ್ಲಿ ಒಕ್ಕಲಿಗರು ಮತ್ತು ಬಲಿಜ ಸಮುದಾಯದ ನಡುವೆ ಏರ್ಪಟ್ಟಿರುವ ಪ್ರತಿಮೆ ಸಮರ ಸಮಾಜದಲ್ಲಿ ಶಾಂತಿ ಕದಡಬಾರದು.ಪ್ರತಿಮೆಯಲ್ಲಿ ಮೂಡುವ ಇಬ್ಬರೂ ಕೂಡ ಮಹಾಚೇತನರು.ಇದಕ್ಕಾಗಿ ಏರ್ಪಟ್ಟಿರುವ ಸಂಘರ್ಷ ಸರಿಯಾದುದಲ್ಲ.ನಾವು ನಮ್ಮ ಸಮು ದಾಯ ಕಾಲಜ್ಞಾನಿ ಕೈವಾರ ತಾತಯ್ಯ ಅವರನ್ನು ಪೂಜಿಸುತ್ತಾ ಗೌರವಿಸುತ್ತಾ ಬಂಧಿಸಿದ್ದೇವೆ. ಆದರೆ ಕೆಂಪೇಗೌಡರ ಪ್ರತಿಮೆಗೆ ಚಪ್ಪಲಿಹಾರ ಹಾಕುವುದಾಗಿ ಉದ್ಧಟತನದಲ್ಲಿ ಹೇಳಿರುವ ವ್ಯಕ್ತಿಯ ವಿರುದ್ಧ ನಮ್ಮ ಹೋರಾಟವಿದೆ.ಆತ ಕೂಡಲೇ ಕ್ಷೆಮೆಯಾಚಿಸಲು ಕೇಳಲಾಗುತ್ತಿದೆ. ಇಲ್ಲದಿದಲ್ಲಿ ಒಕ್ಕಲಿಗ ಸಂಘದಿಂದ ಹೋರಾಟ ರೂಪಿಸಲಾಗುವುದು ಎಂದರು.
ಇದನ್ನೂ ಓದಿ: Chikkanayakanahalli (Tumkur) News: ಗುಣಮಟ್ಟದ ಹಾಲು ಪೂರೈಕೆಯಲ್ಲಿ ತಾಲ್ಲೂಕು ಉತ್ತಮ ದೃಢತೆ
ಗುಡಿಬಂಡೆ ಪಟ್ಟಣದ ನಿರ್ಮಾತೃ ಹಾವಳಿ ಬೈರೇಗೌಡ ಎಂಬುದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ.ಅಮಾನಿ ಬೈರಸಾಗರ ಕೆರೆಯನ್ನು ನಿರ್ಮಿಸಿದ ಮಾಹಾವ್ಯಕ್ತಿ ಹಾವಳಿ ಬೈರೇಗೌಡ. ಇವರ ನೆನಪಿನಲ್ಲಿ ಗುಡಿಬಂಡೆ ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿರುವ ಗುಡಿಬಂಡೆ ಪಟ್ಟಣದ ಸರ್ವೆ ನಂಬರ್ ೨೫೯/೩ರ ಸರಕಾರಿ ಜಾಗದಲ್ಲಿ ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಿಸಲು ಯಾರು ಮೊದಲು ಮನವಿ ಪತ್ರ ಕೊಟ್ಟಿದ್ದಾರೆ. ನಂತರದಲ್ಲಿ ಕೈವಾರ ತಾತಯ್ಯ ಹೆಸರಿನಲ್ಲಿ ಯಾರು ಸಂಘರ್ಷಕ್ಕೆ ಕಾರಣವಾಗಿದ್ದಾರೆ ಎಂಬುದನ್ನು ಸರಕಾರ ನಿರ್ಧರಿಸಲಿದೆ.ಆದರೆ ಶತಮಾನಗಳಿಂದ ಇದ್ದಂತೆ ಎಲ್ಲ ಸಮುದಾಯಗಳೂ ಸಾಮರಸ್ಯದಿಂದ ಇರಲು ಸಹಕರಿಸಬೇಕು. ಉದ್ಧಟತನ ತೋರಿದರೆ ನಾವು ಕೂಡ ಅದರಂತೆ ಉತ್ತರ ನೀಡಬೇಕಾಗುತ್ತದೆ ಎಂದರು.
ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ವಿಷಯ ಚಿಕ್ಕದಾದರೂ ಹಿನ್ನೆಲೆ ದೊಡ್ಡದಿದೆ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಕೂಡಲೇ ಆತ ಕ್ಷಮೆ ಕೇಳಬೇಕು. ಇನ್ನು ೨೦೨೨ರಲ್ಲಿಯೇ ಅಲ್ಲಿ ಹಾವಳಿ ಬೈರೇಗೌಡ ಪುತ್ಥಳಿ ಸ್ಥಾಪಿಸಲು ಸರಕಾರಕ್ಕೆ ಒಕ್ಕಲಿಗ ಸಮುದಾಯ ಮನವಿ ಮಾಡಿದೆ. ಗೌರಿಬಿದನೂರಿನಲ್ಲಿಯೂ ಇದೇ ರೀತಿ ಕೃಷ್ಣದೇವರಾಯರ ಪುತ್ಥಳಿ ಸ್ಥಾಪಿಸಲು ಕೆಲವರು ಬಂದಿದ್ದರು. ಆದರೆ ಆಗ ಸರಕಾರದ ಮಟ್ಟದಲ್ಲಿ ಕೆಂಪೇಗೌಡರ ಪುತ್ಥಳಿಗೆ ಅನುಮತಿ ಪಡೆದು ಮಾಡಿದ್ದೇವೆ ಎಂದರು.
ಚಲನಚಿತ್ರ ನಿರ್ಮಾಪಕ ಉಮಾಪತಿ ಮಾತನಾಡಿ, ಗುಡಿಬಂಡೆಯನ್ನು ಕಡಿಬಂಡೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.ಒಕ್ಕಲಿಗ ಸಮುದಾಯ ದಾನಧರ್ಮ ಮಾಡಿ ಜೀವನ ಮಾಡುತ್ತಿರುವ ಸಮುದಾಯ.ಇನ್ನೊಬ್ಬರ ಹಂಗಲ್ಲಿ ಬದುಕುವ ಸಮುದಾಯ ಅಲ್ಲ.ಅಲ್ಲಿ ಯಾರಪುತ್ಥಳಿ ಇಡಬೇಕು, ಯಾರು ಇಡಬೇಕು ಇತ್ಯಾದಿ ಜಿಲ್ಲಾಡಳಿತ ಸರಕಾರಕ್ಕೆ ಬಿಟ್ಟ ವಿಚಾರ.ಒಂದು ವೇಳೆ ನಾವು ಅಲ್ಲಿ ಪುತ್ಥಳಿ ಇಡಬೇಕು ಎಂದು ನಿರ್ಧಾರ ಮಾಡಿದ್ದೇ ಆದಲ್ಲಿ ಜಮೀನು ಖರೀದಿ ಮಾಡಿ ಪುತ್ಥಳಿ ಇಡುವ ತಾಕತ್ತು ನಮಗಿದೆ. ನಾವು ಅಲ್ಪಸಂಖ್ಯಾತರಲ್ಲ, ರಾಜ್ಯಾದ್ಯಂತ ಬಹುಸಂಖ್ಯಾತರಾಗಿದ್ದೇವೆ. ಕೆಂಪೇಗೌಡರ ಬಗ್ಗೆ ಹಗುರವಾಗಿ ಅವಾಚ್ಯವಾಗಿ ಮಾತನಾಡಿರುವ ವ್ಯಕ್ತಿಗೆ ಬಲಿಜ ಸಮುದಾಯ ಬುದ್ಧಿ ಕಲಿಸದಿದ್ದರೆ ನಾವೇ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗುಡಿಬಂಡೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಎಲ್ಲರೂ ಬಲಿಜ ಸಮುದಾಯದವರೇ ಇರುವ ಕಾರಣ ಅವರೇ ಠರಾವು ಮಾಡಿ, ಅಲ್ಲಿ ಪುತ್ಥಳಿ ಮಾಡಲು ಮುಂದಾಗಿದ್ದಾರೆ.ಇದು ಕಾನೂನು ಬಾಹಿರ,ಹಾವಳಿ ಬೈರೇಗೌಡರ ಇತಿಹಾಸ ಅರಿಯದವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದಾರೆ.ಇದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ.ರಮೇಶ್ ಮಾತನಾಡಿದರು.ಒಕ್ಕಲಿಗ ಸಮುದಾಯದ ಅನೇಕ ಮುಖಂಡರು ಇದ್ದರು.