ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಟೊಮೇಟೊ ತೋಟದ ಪೈಪ್‌ಗಳನ್ನು ಕತ್ತರಿಸಿ ಲಕ್ಷಾಂತರ ರೂ. ನಷ್ಟ: ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು

ರಾತ್ರಿ ವೇಳೆ ಆರೋಪಿ ನರಸಿಂಹ ತೋಟಕ್ಕೆ ನುಗ್ಗಿ ಬೆಳೆಗಾಗಿ ತಂದಿದ್ದ ಸುಮಾರು 300 ಕೋಲು ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಗ್ರಾಮದ ದೊಡ್ಡ ಮನುಷ್ಯರಾದ ರೆಡ್ಡಪ್ಪ, ಆಲವಾಟ, ದಂಡುಪಾಳ್ಯದ ರೈಟರ್ ನಾರಾಯಣಸ್ವಾಮಿ, ಆಲವಾಟ ಮಂಜುನಾಥಚಾರಿ ಹಾಗೂ ನಾಗರಾಜ ಅವರು ಸೇರಿ ಪಂಚಾಯಿತಿ ಮಾಡಿ ಟೊಮೇಟೊ ಕೋಲುಗಳನ್ನು ವಾಪಸ್ ಕೊಡಿಸಿದ್ದರು.

ಟೊಮೇಟೊ ತೋಟದ ಪೈಪ್‌ಗಳನ್ನು ಕತ್ತರಿಸಿ ಲಕ್ಷಾಂತರ ರೂ.ನಷ್ಟ

-

Profile
Ashok Nayak Jun 4, 2026 10:31 PM

ಚಿಂತಾಮಣಿ: ತೋಟಕ್ಕೆ ಅಳವಡಿಸಲಾಗಿದ್ದ ಪಿ.ವಿ.ಸಿ ಪೈಪ್‌ಗಳನ್ನು ಕತ್ತರಿಸಿ ಹಾಗೂ ಟೊಮೇಟೊ ಬೆಳೆಗೆ ಹಾಕಲಾಗಿದ್ದ ಕೋಲುಗಳನ್ನು ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಜಮೀನು ಸರ್ವೆ ನಂ:119/5 ರಲ್ಲಿನ 2 ಎಕರೆ ಜಮೀನಿನಲ್ಲಿ ಟೊಮೇಟೊ ಬೆಳೆ ಬೆಳೆದಿದ್ದ ರೈತರ ತೋಟದಲ್ಲಿ ಈ ಕೃತ್ಯ ನಡೆದಿದೆ.ಇದೇ ಗ್ರಾಮದ ನರಸಿಂಹ ಬಿನ್ ನಾರಾಯಣಸ್ವಾಮಿ ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ.

ರಾತ್ರಿ ವೇಳೆ ಆರೋಪಿ ನರಸಿಂಹ ತೋಟಕ್ಕೆ ನುಗ್ಗಿ ಬೆಳೆಗಾಗಿ ತಂದಿದ್ದ ಸುಮಾರು 300 ಕೋಲು ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಗ್ರಾಮದ ದೊಡ್ಡ ಮನುಷ್ಯರಾದ ರೆಡ್ಡಪ್ಪ, ಆಲವಾಟ, ದಂಡುಪಾಳ್ಯದ ರೈಟರ್ ನಾರಾಯಣಸ್ವಾಮಿ, ಆಲವಾಟ ಮಂಜುನಾಥಚಾರಿ ಹಾಗೂ ನಾಗರಾಜ ಅವರು ಸೇರಿ ಪಂಚಾಯಿತಿ ಮಾಡಿ ಟೊಮೇಟೊ ಕೋಲುಗಳನ್ನು ವಾಪಸ್ ಕೊಡಿಸಿದ್ದರು. ಇದರಿಂದ ದ್ವೇಷ ಸಾಧಿಸಿದ ಆರೋಪಿ ನರಸಿಂಹ, ಮಚ್ಚು ಹಿಡಿದುಕೊಂಡು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದ ಎಂದು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Chinthamani News: ಸಾಧನೆಗೈದ ವಿದ್ಯಾರ್ಥಿಗಳಿಗೆ ಬಲಿಜ ಜನಾಂಗದದಿಂದ ಸನ್ಮಾನ

ರಾತ್ರಿ ದೂರುದಾರರು ಹಾಗೂ ಅವರ ಮಗ ಸುರೇಶ್ ತೋಟಕ್ಕೆ ಹೋಗಿ ಬ್ಯಾಟರಿ ಹಾಕಿ ನೋಡಿದ್ದಾರೆ. ಈ ವೇಳೆ, ಆರೋಪಿ ನರಸಿಂಹ ಮಚ್ಚಿನಿಂದ ತೋಟದ ಬೆಳೆಗೆ ಅಳವಡಿಸಿದ್ದ ನೀರಿನ ಪೈಪ್‌ಗಳನ್ನು ಕತ್ತರಿಸುತ್ತಿರುವುದು ಕಂಡುಬಂದಿದೆ. ರೈತರು ಕೂಗಾಡಿದ ತಕ್ಷಣ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ. ತೋಟವನ್ನು ಪರಿಶೀಲಿಸಿದಾಗ ಅಳವಡಿಸಲಾಗಿದ್ದ ಎಲ್ಲ ಪಿ.ವಿ.ಸಿ ಪೈಪ್‌ ಗಳನ್ನು ಕತ್ತರಿಸಿ ಹಾಕಿರುವುದು ಬೆಳಕಿಗೆ ಬಂದಿದೆ.

ಆರೋಪಿಯು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ,ಸುಮಾರು ಒಂದು ಲಕ್ಷದ ಹತ್ತು ಸಾವಿರ ಮೌಲ್ಯದ ಪಿ.ವಿ.ಸಿ ಪೈಪ್‌ಗಳನ್ನು ಕತ್ತರಿಸಿ ಸಂಪೂರ್ಣ ನಾಶಪಡಿಸಿದ್ದಾನೆ.

ಈ ಸಂಬಂಧ ಸಂತ್ರಸ್ತ ರೈತರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.