ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಜೆಪಿ ಅಕಾಡೆಮಿ

ನಾವು ಡಿಡಿಪಿಯು ಕಚೇರಿಗೆ ಖುದ್ದಾಗಿ ಹೋಗಿ ವಿಚಾರಿಸಲಾಗಿ ಅಕ್ರಮವಾಗಿ ನಡೆಸುತ್ತಿರುವ ಜೆಪಿ ಅಕಾಡೆಮಿ ಶಿಕ್ಷಣ ಸಂಸ್ಥೆಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಉಪ ನಿರ್ದೇಶಕರು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಕಿಡಿಕಾರಿದದ ಅವರು ಇವರ ನಡೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗಿದೆ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಜೆಪಿ ಅಕಾಡೆಮಿ

ಜೆಪಿ ಅಕಾಡೆಮಿ ಎಂಬ ಅನಧಿಕೃತ ಸಂಸ್ಥೆಯೊಂದು ಕಾಲೇಜು ಹೆಸರಿನಲ್ಲಿ ಪಾಲಕರನ್ನು ದಿಕ್ಕು ತಪ್ಪಿಸಿ ಅವರ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಾಮಾಜಿಕ ಪರಿವರ್ತನಾ ಸಂಘಟನೆ ಗಂಭೀರ ಅರೋಪ ಮಾಡಿದೆ. -

Profile
Ashok Nayak Mar 29, 2026 11:54 PM

ಚಿಂತಾಮಣಿ: ಜೆಪಿ ಅಕಾಡೆಮಿ(JP Academy) ಎಂಬ ಅನಧಿಕೃತ ಸಂಸ್ಥೆಯೊಂದು ಕಾಲೇಜು ಹೆಸರಿನಲ್ಲಿ ಪಾಲಕರನ್ನು ದಿಕ್ಕು ತಪ್ಪಿಸಿ ಅವರ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಾಮಾಜಿಕ ಪರಿವರ್ತನಾ ಸಂಘಟನೆ ಗಂಭೀರ ಅರೋಪ ಮಾಡಿದೆ. ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನಾ ಸಂಘಟನೆ ಪ್ರಮುಖರು ಮಾತನಾಡಿದರು.

ನಗರದ ಅಂಜನಿ ಬಡಾವಣೆ ಪ್ರಭಾಕರ್ ಲೇಔಟ್ ಮೋರ್ ಸೂಪರ್ ಮಾರ್ಕೆಟ್ ಎದುರು ಗಡೆ ಇರುವ ಎನ್‌ಎನ್‌ಕೆ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ಜೆಪಿ ಅಕಾಡೆಮಿ ಎಂಬ ಹೆಸರಿನಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಪಡೆಯದೆ ಶಿಕ್ಷಣ ಇಲಾಖೆಯ ವತಿಯಿಂದಲೂ ಅನುಮತಿ ಪಡೆಯದೆ ಪಿಯು ಕಾಲೇಜನ್ನು ನಡೆಸಲಾಗುತ್ತಿದೆ ಇದರ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಡಿಡಿಪಿಯುಗೆ ದೂರು ನೀಡಿದರೂ ಯಾವುದೇ ಕ್ರಮ ವಹಿಸದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸಾಮಾಜಿಕ ಪರಿವರ್ತನಾ ಸಂಘಟನೆಯ ಜಿಲ್ಲಾಧ್ಯಕ್ಷ ಎ.ವಿ.ವೆಂಕಟರಾಮ, ಜಿಲ್ಲಾ ಕಾರ್ಯದರ್ಶಿ ಮದುಲತಾ, ರೈತ ಸಂಘದ ತಾಲೂಕು ಅಧ್ಯಕ್ಷರಾದ ರವಿಪ್ರಕಾಶ್, ಟಿಪ್ಪು ಸೆಕ್ಯುಲರ್ ಸೇನೆಯ ಜಿಲ್ಲಾಧ್ಯಕ್ಷ ಮೊಹಿಯುದ್ದಿನ್ ಪಾಷಾ  ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಈಗಾಗಲೇ ಪ್ರವೇಶ ದಾಖಲಾತಿ ಪ್ರಾರಂಭವಾಗಿದೆ ಎಂದು ನಿಯಮಗಳನ್ನು ಉಲ್ಲಂಘಿಸಿ ಜೆಪಿ ಅಕಾಡೆಮಿ ವಂಚನೆ ಮಾಡುತ್ತಿರುವ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ಜರುಗಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು.  

ನಾವು ಡಿಡಿಪಿಯು ಕಚೇರಿಗೆ ಖುದ್ದಾಗಿ ಹೋಗಿ ವಿಚಾರಿಸಲಾಗಿ ಅಕ್ರಮವಾಗಿ ನಡೆಸು ತ್ತಿರುವ ಜೆಪಿ ಅಕಾಡೆಮಿ ಶಿಕ್ಷಣ ಸಂಸ್ಥೆಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಉಪ ನಿರ್ದೇಶಕರು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಕಿಡಿಕಾರಿದದ ಅವರು ಇವರ ನಡೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗಿದೆ ಎಂದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮವಾಗಿ ಪಿಯು ಕಾಲೇಜು ಮತ್ತು  ಸಿಇಟಿ ಎನ್‌ಇಇಟಿ, ಜೆಇಇ  ಕೋಚಿಂಗ್ ನಡೆಸುತ್ತಿರುವ ಚಿಂತಾಮಣಿ ಜೆಪಿ ಅಕಾಡೆಮಿ ಸಂಸ್ಥೆಯ ಚಟುವಟಿಕೆಗಳನ್ನು ಪರಿಶೀಲಿಸಿ  ವಂಚನೆ ನಡೆಯುತ್ತಿರುವ ಬಗ್ಗೆ ಹಾಗೂ ಶಿಕ್ಷಣ ವ್ಯಾಪಾರೀಕರಣ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.