Venkateshwara Swamy: ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಉತ್ತರ ದ್ವಾರ ಪ್ರವೇಶ
Venkateshwara Swamy: ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಉತ್ತರ ದ್ವಾರ ಪ್ರವೇಶ


ಗೌರಿಬಿದನೂರು: ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ನಗರದ ಪ್ರಾಚೀನ ವೆಂಕಟೇಶ್ವರ ಸ್ವಾಮಿ ದೇವಾಲಯ ದಲ್ಲಿ ಭಕ್ತರಿಗಾಗಿ ಉತ್ತರ ದ್ವಾರವನ್ನು ವ್ಯವಸ್ಥೆ ಮಾಡಲಾಗಿತ್ತು.

ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು. ವೈಕುಂಠ ಏಕಾದಶಿ ದಿನ ಉತ್ತರ ದ್ವಾರದಲ್ಲಿ ಹೊರಟು ಸ್ವಾಮಿಯ ದರ್ಶನ ಮಾಡಿದರೆ ಪುಣ್ಯಫಲ ಸಿಗುವುದೆಂದು ಭಕ್ತರ ನಂಬಿಕೆಯಾಗಿದೆ ಎಂದು ಪ್ರಧಾನ ಅರ್ಚಕರಾದ ಮುರಳಿ ಸ್ವಾಮಿ ತಿಳಿಸಿದರು.
ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರಸ್ವಾಮಿಗೆ ಇಂದು ವಿಶೇಷ ಅಲಂಕಾರ ಮಾಡಲಾಗಿತ್ತು.
ಇಂದಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕಿ ಶ್ರೀಮತಿ ಜ್ಯೋತಿರೆಡ್ಡಿ, ತಹಶೀಲ್ದಾರ್ ಮಹೇಶ್ ಪತ್ರಿ,ಪೌರಾಯುಕ್ತೆ ಗೀತ,ನಗರಸಭಾ ಸದಸ್ಯ ಮಾರ್ಕೆಟ್ ಮೋಹನ್, ಅರಣ್ಯ ಅಧಿಕಾರಿ ಹಂಸವಿ, ಕರಾವೆ ಅಶ್ವತ್ಥನಾರಾಯಣ ಮುಂತಾದವರು ಭಾಗವಹಿಸಿದ್ದರು.