ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bindiga Deviramma Fair: ಮಳೆಯ ಹವಾಮಾನ ಲೆಕ್ಕಿಸದೆ ಬೆಟ್ಟ ಏರಿ, ಬಿಂಡಿಗಾ ದೇವಿರಮ್ಮನ ಜಾತ್ರೆಗೆ ಆಗಮಿಸಿದ ಭಕ್ತ ಸಾಗರ

ದೀಪಾವಳಿ ಹಬ್ಬದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಬಿಂಡಿಗಾ ದೇವಿರಮ್ಮ ದೀಪೋತ್ಸವದ ಅಂಗವಾಗಿ ಅ.19 ಹಾಗೂ 20 ರಂದು ದೇವಿರಮ್ಮ ಬೆಟ್ಟ ಹತ್ತಲು ಜಿಲ್ಲೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳು ತಮ್ಮ ಖಾಸಗಿ ವಾಹನಗಳನ್ನು ಪಾರ್ಕ್ ಮಾಡುವ ಸಲುವಾಗಿ ಮಲ್ಲೇನಹಳ್ಳಿ ಪ್ರೌಢಶಾಲೆಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು

ದೇವಿರಮ್ಮನ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಗಣಸಾಗರ

-

Ashok Nayak Ashok Nayak Oct 20, 2025 11:01 AM

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗಾ ದೇವೀರಮ್ಮ ಜಾತ್ರೆಗೆ ಇಂದು ಚಾಲನೆ ದೊರಕಿದೆ.

ಭಾನುವಾರ ರಾತ್ರಿಯಿಡಿ ಬಿಡದೆ ಬಿದ್ದ ಬಾರಿ ಮಳೆಯನ್ನು ಲೆಕ್ಕಿಸದೆ ಆಗಮಿಸಿ,ಬೆಳಗಿನ ಜಾವದ ಚಳಿ ಮತ್ತು ನಡೆಯುವ ದಾರಿಗೆ ಎದುರಾಗಿ ನಿಂತ ಮಂಜಿನ ಮುಸುಕನ್ನು ಸೀಳಿಕೊಂಡು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಭಕ್ತರು ಬೆಟ್ಟ ಏರತೊಡಗಿದರು.

WhatsApp Image 2025-10-20 at 10.38.27

ರಾತ್ರಿ ಇಡೀ ಬಿದ್ದ ಮಳೆ ಹಿನ್ನೆಲೆಯಲ್ಲಿ ಬೆಟ್ಟ ಏರುವುದೇ ಭಕ್ತರಿಗೆ ಸವಾಲಾಗಿತ್ತು. ಹೀಗಿದ್ದೂ ಸರದಿ ಸಾಲಿನಲ್ಲಿ ತೆರಳಿದ ಸಾವಿರಾರು ಭಕ್ತರು ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯ ದರ್ಶನ ಪಡೆದು ಪುನೀತರಾದರು.

ಇದನ್ನೂ ಓದಿ: Deepavali Fashion 2025: ದೀಪಾವಳಿಯ ರಂಗು ಹೆಚ್ಚಿಸುವ ಡಿಸೈನರ್‌ವೇರ್‌ಗಳಿವು

ಭಕ್ತರಿಗೆ ಬೆಟ್ಟ ಏರಲು ಅನುಕೂಲವಾಗುವಂತೆ ಹಲವಡೆ ಹಗ್ಗಗಳನ್ನು ಕಟ್ಟಲಾಗಿತ್ತಲ್ಲದೇ, ಅಲ್ಲಲ್ಲಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ನಿಂತು, ಪೊಲೀಸ್ ಭಾಷೆಯಿಂದ ಹೊರತಾಗಿ, ಸ್ನೇಹ ಮಯ ವಾತಾವರಣದಲ್ಲಿ ಸಹಕರಿಸಿದ್ದು ಗಮನ ಸೆಳೆಯಿತು.

ಬೆಟ್ಟ ಏರುತ್ತಿದ್ದಂತೆ ಹೊತ್ತು ಸರಿದು ಸೂರ್ಯ ಕಾಣಿಸಿಕೊಂಡು ಸುತ್ತಮುತ್ತಲ ರಮಣೀಯ ದೃಶ್ಯ ವನ್ನು ಸವಿಯಲು ಅನುಕೂಲ ಆಯಿತಾದರೂ, ಈ ಸನ್ನಿವೇಶ ಹೆಚ್ಚು ಹೊತ್ತು ಇರದೇ ಇದ್ದದ್ದು ಬೆಟ್ಟವನ್ನು ಏರುತ್ತಿದ್ದ ಭಕ್ತರಿಗೆ ನಿರಾಸೆಯಾಯಿತು.

Jatre 1

ಆದರೂ, ಮಂಜು ಮುಸುಕಿದ ವಾತಾವರಣ ತಣ್ಣನೆ ಬೀಸುತ್ತಿದ್ದ ಗಾಳಿಯ ಮಧ್ಯೆ, ಇರುವೆಗಳಂತೆ ಮಹಿಳೆಯರು ಪುರುಷರು ಜೊತೆಗೂಡಿ, ಕಡಿದಾದ ಸ್ಥಳಗಳಲ್ಲಿ ಮಹಿಳೆಯರ ಕೈಹಿಡಿದು ಸಾಲು ಸಾಲಾಗಿ ಬೆಟ್ಟ ಹತ್ತಿ ಪುನೀತರಾಗುತ್ತಿರುವುದು ಕಂಡುಬಂದಿತು. ವಾಹನಗಳಿಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳ ಕೊಚ್ಚೆಯಿಂದ ಕೂಡಿದ್ದು, ಬದಲಿ ವ್ಯವಸ್ಥೆ ಮಾಡಲಾಯಿತು. ಎಲ್ಲಿಯೂ ಭಕ್ತರ ನುಗ್ಗಲು ಆಗದಂತೆ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಆಮಟೆ ನೇತೃತ್ವದಲ್ಲಿ ಪೊಲೀಸ್ ತಂಡ ಅವಿರತ ಕೆಲಸ ಮಾಡುತ್ತಿತ್ತು.

ಈ ಬಾರಿ ಬಿಂಡಿಗಾ ದೇವಿರಮ್ಮ ದೇವಸ್ಥಾನದ ಇತಿಹಾಸದಲ್ಲೇ ಪರ್ಸೆ ಜನರಿಗೆ (ಹೊರಗಿನವರಿಗೆ) ಎರಡು ದಿನಗಳ ಕಾಲ ಬೆಟ್ಟ ಏರಲು ದೇವಸ್ಥಾನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಏರುವ ಭಕ್ತರ ಸಂಖ್ಯೆಯಲ್ಲಿ ತುಸು ಇಳಿಕೆಯಾಗಿದೆ, ಮಧ್ಯಾಹ್ನದ 12 ಘಂಟೆಯ ವೇಳೆಗೆ 15000 ಭಕ್ತರು ಬೆಟ್ಟವನ್ನು ಏರಿರಬಹುದು ಎಂದು ಅಂದಾಜಿಸಲಾಗಿದೆ. ಸಂಜೆ ವೇಳೆಗೆ ಈ ಸಂಖ್ಯೆ 30000 ದಾಟಬಹುದು.

Jatre 2

ಹೊರಗಿನ ಭಕ್ತಾದಿಗಳಿಗೆ ನಾಳೆಯೂ ಬೆಟ್ಟದ ಮೇಲಿನ ಶ್ರೀ ದೇವಿಯ ದರ್ಶನಕ್ಕೆ ಮತ್ತೊಂದು. ಅವಕಾಶವಿದ್ದು, ಸಂಜೆ ಕತ್ತಲಾದ ನಂತರ ದೊಡ್ಡ ದೀಪ ಹಚ್ಚಲಾಗುತ್ತದೆ. ಬೆಳಿಗ್ಗೆ ಘಂಟೆ 8:00 ರಿಂದ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ, ಈ ಹಿನ್ನೆಲೆಯಲ್ಲಿ ಘಂಟೆ 7:00ರಿಂದ ಕೆಎಸ್ಆರ್ಟಿಸಿ ಬಸ್ಸುಗಳನ್ನು ಭಕ್ತರ ಅನುಕೂಲಕ್ಕಾಗಿ ಚಿಕ್ಕಮಗಳೂರು ನಗರದಿಂದ ವ್ಯವಸ್ಥೆ ಮಾಡಲಾಗಿದೆ. ನಾಳೆ ಸುಮಾರು 40 ರಿಂದ 50 ಸಾವಿರ ಜನರು ಬರಬಹುದೆಂಬ ನಿರೀಕ್ಷೆ ಇದೆ.

ಇನ್ನೂ, ನಾಡಿದ್ದು 21ನೇ ಮಂಗಳವಾರ ಶ್ರೀ ಫಲಾಹಾರಸ್ವಾಮಿ ಮಠದ ವತಿಯಿಂದ ಪರಂಪರೆ ಯಂತೆ ಶ್ರೀ ಮಠಕ್ಕೆ ಸೇರಿದ ಹತ್ತಾರು ಹಳ್ಳಿಯ ಸ್ಥಳೀಯ ಭಕ್ತರು ಒಟ್ಟುಗೂಡಿ ದೇವಿಯ ಬೆಟ್ಟವನ್ನೇರಿ ಹಗಲಿಡಿ ಪೂಜಾ ಕೈಂಕರ್ಯವನ್ನು ನೆರವೇರಿಸಿ ಸಂಜೆ ಮರಿದೀಪ ಹಚ್ಚಿ ಹಿಂದಿರುಗ ಲಿದ್ದಾರೆ.

ಸೂಕ್ತ ರೀತಿಯ ಪಾರ್ಕಿಂಗ್

WhatsApp Image 2025-10-20 at 10.38.23

ದೀಪಾವಳಿ ಹಬ್ಬದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಬಿಂಡಿಗಾ ದೇವಿರಮ್ಮ ದೀಪೋತ್ಸವದ ಅಂಗವಾಗಿ ಅ.19 ಹಾಗೂ 20 ರಂದು ದೇವಿರಮ್ಮ ಬೆಟ್ಟ ಹತ್ತಲು ಜಿಲ್ಲೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳು ತಮ್ಮ ಖಾಸಗಿ ವಾಹನಗಳನ್ನು ಪಾರ್ಕ್ ಮಾಡುವ ಸಲುವಾಗಿ ಮಲ್ಲೇನಹಳ್ಳಿ ಪ್ರೌಢಶಾಲೆಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ವಿಪರೀತ ಮಳೆಯಿಂದಾಗಿ ಪಾರ್ಕಿಂಗ್ ಮಾಡಲು ಬದಲಿ ವ್ಕವಸ್ಥೆ ಕಲ್ಪಿಸಲಾಗಿದೆ. ಅಂದರೆ, ಚಿಕ್ಕಮಗಳೂರು ನಗರದ ಐಜಿ ರಸ್ತೆ ಎಂಜಿ ರಸ್ತೆ & ಐಡಿಎಸ್ ಜಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ನಗರದ ಇತರೆಡೆ ವೆಹಿಕಲ್ ಜಾಮ್ ಆಗದ ರೀತಿಯಲ್ಲಿ ನಿಗದಿತ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಮಾಡಿಕೊಳ್ಳುವುದು.

ಕೆಎಸ್ಆರ್ ಟಿಸಿ ವತಿಯಿಂದ ನಗರದ ಬಸ್ ನಿಲ್ದಾಣ ಹಾಗೂ ಟೌನ್ ಕ್ಯಾಂಟೀನ್ ವೃತ್ತಗಳಲ್ಲಿ ಮಲ್ಲೇನಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಸದರಿ ವಾಹನಗಳಲ್ಲಿ ಬಿಂಡಿಗಾ ದೇವೀರಮ್ಮ ದೇವರಸ್ಥಾನಕ್ಕೆ ಭಕ್ತಾದಿಗಳು ತೆರಳುವಂತೆ ಜಿಲ್ಲಾ ಪೊಲೀಸ್ ವತಿಯಿಂದ ತಮ್ಮಲ್ಲಿ ಕೋರಲಾಗಿದೆ.

ಮೇಲ್ಕಂಡ ಪಾರ್ಕಿಂಗ್ ಸ್ಥಳಗಳನ್ನು ಹೊರತುಪಡಿಸಿ ಮಲ್ಲೇನಹಳ್ಳಿ ವ್ಯಾಪ್ತಿಯಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಅಡ್ದಾದಿಡ್ಡಿಯಾಗಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

Jatre 4

ದೇವೀರಮ್ಮ ಜಾತ್ರೆಗೆ ಇಂದು ಚಾಲನೆ

ಸರದಿ ಸಾಲಿನಲ್ಲಿ ತೆರಳಿದ ಸಾವಿರಾರು ಭಕ್ತರು ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯ ದರ್ಶನ ಪಡೆದು ಪುನೀತರಾದರು.

ಭಾನುವಾರ ರಾತ್ರಿ ಬಿದ್ದ ಮಳೆ ಹಾಗೂ ಬೆಳಗಿನ ಜಾವದ ಚಳಿ, ಮಂಜನ್ನು ಲೆಕ್ಕಿಸದೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಭಕ್ತರು ಬೆಟ್ಟ ಏರತೊಡಗಿದರು.

ಭಕ್ತರಿಗೆ ಬೆಟ್ಟ ಏರಲು ಅನುಕೂಲವಾಗುವಂತೆ ಹಲವಡೆ ಹಗ್ಗಗಳನ್ನು ಕಟ್ಟಲಾಗಿತ್ತಲ್ಲದೆ ಅಲ್ಲಲ್ಲಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ನಿಂತು ಸಹಕರಿಸಿದ್ದು ಗಮನ ತಡೆಯಿತು.

ಹೊತ್ತು ಸರಿದಂತೆ ಸೂರ್ಯ ಕಾಣಿಸಿಕೊಂಡು ಕೆಲವರಿಗೆ ಸುತ್ತಮುತ್ತಲ ರಮಣೀಯ ದೃಶ್ಯ ಸವಿಯಲು ಅನುಕೂಲ ಆಯಿತಾದರೂ , ಈ ಸನ್ನಿವೇಶ ಹೆಚ್ಚು ಹೊತ್ತು ಇರಲಿಲ್ಲ.

ನಿಗದಿಪಡಿಸಿದ ಪಾರ್ಕಿಂಗ್ ಸ್ಥಳ ಕೊಚ್ಚೆಯಿಂದ ಕೂಡಿದ್ದು, ಬದಲಿ ವ್ಯವಸ್ಥೆಯನ್ನು ಮಾಡಲಾಯಿತು. ಎಲ್ಲಿಯೂ ಭಕ್ತರ ನೂಕು ನುಗ್ಗಲು ಆಗದಂತೆ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಆಮಟೆ ನೇತೃತ್ವದಲ್ಲಿ ಪೊಲೀಸ್ ತಂಡ ಅವಿರತ ಕೆಲಸ ಮಾಡಿತು.

ಈ ಬಾರಿ ಎರಡು ದಿನಗಳ ಕಾಲ ದರ್ಶನಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಭಕ್ತರ ಆಗಮನದಲ್ಲಿ ತುಸು ಇಳಿಕೆ ಖಂಡಿತ ಆದರೂ, ಭಕ್ತರ ಸಂಖ್ಯೆ 15,000 ದಾಟಿತ್ತು.

ನಾಳೆಯೂ ಬೆಳಿಗ್ಗೆ 9 ಗಂಟೆ ಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, 8 ರ ಸುಮಾರಿಗೆ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. 7 ಗಂಟೆಯಿಂದಲೇ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ