Chitradurga Bus Accident: ಚಿತ್ರದುರ್ಗದ ಬಳಿ ಭೀಕರ ಅಪಘಾತ; ಪ್ರವಾಸಿ ಬಸ್ ಪಲ್ಟಿಯಾಗಿ ಇಬ್ಬರ ಸಾವು, 26 ಮಂದಿಗೆ ಗಾಯ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಬಸ್ ಅಪಘಾತ ನಡೆದಿದೆ. ಬಸ್ನಲ್ಲಿ ಗೋವಾಕ್ಕೆ ತೆರಳುತ್ತಿದ್ದವರು ಬೆಂಗಳೂರಿನ ಯುನಿವರ್ಸಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎಂಬುದು ಗೊತ್ತಾಗಿದೆ. ಅಪಘಾತದಲ್ಲಿ ಬಸ್ ಚಾಲಕ ಮತ್ತು ಕ್ಲೀನರ್ ಮೃತಪಟ್ಟಿದ್ದಾರೆ.
-
ಚಿತ್ರದುರ್ಗ: ಗೋವಾ ಪ್ರವಾಸಕ್ಕೆ ವಿದ್ಯಾರ್ಥಿಗಳು ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga Bus Accident) ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಬಸ್ ಬೆಂಗಳೂರಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದ್ದು, ಅಪಘಾತದಲ್ಲಿ 26 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಐಮಂಗಲ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಇನ್ನು ಬಸ್ನಲ್ಲಿ ಗೋವಾಕ್ಕೆ ತೆರಳುತ್ತಿದ್ದವರು ಬೆಂಗಳೂರಿನ ಯುನಿವರ್ಸಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎಂಬುದು ಗೊತ್ತಾಗಿದೆ. ಅಪಘಾತದಲ್ಲಿ ಬಸ್ ಚಾಲಕ ಗುರು ಪ್ರಸಾದ್ ಮತ್ತು ಕ್ಲೀನರ್ ಶಂಕರ್ ಮೃತಪಟ್ಟಿದ್ದಾರೆ.
ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ಬಸ್ ಅಪಘಾತದ ಬಗ್ಗೆ ಗಾಯಗೊಂಡ ವಿದ್ಯಾರ್ಥಿನಿಯೊಬ್ಬರು ಘಟನೆ ನಡೆದ ಕ್ಷಣವನ್ನು ವಿವರಿಸಿದ್ದಾರೆ. ರಾತ್ರಿ ಸುಮಾರು 10:30ರ ವೇಳೆಗೆ ಎಲ್ಲರೂ ಮಲಗಿದ್ದರು. ಏಕಾಏಕಿ ಭಾರಿ ಸದ್ದು ಕೇಳಿಸಿತು. ಬಸ್ ಡಿಕ್ಕಿ ಹೊಡೆದ ತಕ್ಷಣ ಎಲ್ಲರೂ ಕಿರುಚಲು ಆರಂಭಿಸಿದರು. ಬಳಿಕ ಸ್ಥಳೀಯರು ಬಂದು ಬಸ್‌ನ ಗಾಜು ಒಡೆದು ನಮ್ಮನ್ನು ಹೊರಗೆ ಬರಲು ಸಹಾಯ ಮಾಡಿದರು ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.