ಹರಿದ್ವಾರ ಮೇಳದಲ್ಲಿ ಭಿಕ್ಷುಕನಾದ ಯುಟ್ಯೂಬರ್: 8 ಗಂಟೆಯಲ್ಲಿ ಗಳಿಸಿದ ಹಣವೆಷ್ಟು ಗೊತ್ತೆ?
Viral News: ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಬಿಕ್ಷಾಟನೆ ಮೂಲಕ ಎಷ್ಟು ಹಣ ಗಳಿಸಬಹುದೆಂದು ತಿಳಿಯಲು ತನ್ನ ಸ್ನೇಹಿತನಿಗೆ ಭಿಕ್ಷುಕನ ವೇಷ ಧರಿಸಿ ಕೂರಿಸಿದ್ದಾರೆ. ಪ್ರಸಿದ್ದ ಕಾವಡ್ ಮೇಳದಲ್ಲಿ ಭಕ್ತರಿಂದ ಭಿಕ್ಷೆ ಬೇಡಿದ್ದು ಗಳಿಸಿದ ಹಣಕಂಡು ಅವರೇ ಅಚ್ಚರಿಗೆ ಒಳಗಾಗಿದ್ದಾರೆ. ಆರಂಭದಲ್ಲಿ, ದಿನದ ಅಂತ್ಯದ ವೇಳೆಗೆ 1,000 ರಿಂದ 2,000 ರೂ.ಗಳ ನಡುವೆ ಸಂಗ್ರಹಿಸಬಹುದು ಎಂದು ಅವರು ನಂಬಿದ್ದರು. ಆದರೆ ಕೇವಲ ಏಂಟು ಗಂಟೆಯಲ್ಲಿ ನಾಲ್ಕು ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ.
ಭಿಕ್ಷುಕನ ವೇಷ ಧರಿಸಿ ಕೇವಲ 8 ಗಂಟೆಯಲ್ಲಿ 4,000 ರೂ ಗಳಿಸಿದ ಯುಟ್ಯೂಬರ್ -
ಹರಿದ್ವಾರ,ಆ. 21: ಇಂದು ರಾಜ್ಯದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೆಲವರು ಭಿಕ್ಷುಕರಂತೆ ನಟಿಸಿ ಸಾರ್ವ ಜನಿಕರಿಂದ ಸಹಾನುಭೂತಿಯನ್ನು ಗಳಿಸುತ್ತಾರೆ. ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಭಿಕ್ಷಾಟನೆ ಮೂಲಕ ಎಷ್ಟು ಹಣ ಗಳಿಸಬಹುದೆಂದು ತಿಳಿಯಲು ತನ್ನ ಸ್ನೇಹಿತನಿಗೆ ಭಿಕ್ಷುಕನ ವೇಷ ಧರಿಸಿ ಕೂರಿಸಿದ್ದಾರೆ. ಪ್ರಸಿದ್ದ ಕಾವಡ್ ಮೇಳದಲ್ಲಿ ಭಕ್ತರಿಂದ ಭಿಕ್ಷೆ ಬೇಡಿದ್ದು ಗಳಿಸಿದ ಹಣಕಂಡು ಅವರೇ ಅಚ್ಚರಿಗೆ ಒಳಗಾಗಿ ದ್ದಾರೆ.ಆರಂಭದಲ್ಲಿ, ದಿನದ ಅಂತ್ಯದ ವೇಳೆಗೆ 1,000 ರಿಂದ 2,000 ರೂ.ಗಳ ನಡುವೆ ಸಂಗ್ರಹಿಸಬಹುದು ಎಂದು ಅವರು ನಂಬಿದ್ದರು. ಆದರೆ ಕೇವಲ ಏಂಟು ಗಂಟೆಯಲ್ಲಿ ನಾಲ್ಕು ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಭಾರತದಲ್ಲಿ ಭಿಕ್ಷಾಟನೆಗೆ ಯಾಕೆ ಕಡಿವಾಣ ಬಿದ್ದಿಲ್ಲ ಎಂಬುದಕ್ಕೆ ಈ ವಿಲಕ್ಷಣ ಪ್ರಯೋಗವೇ (Viral News) ಸಾಕ್ಷಿಯಾಗಿದೆ.
ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಾವಡ್ ಮೇಳದಲ್ಲಿ ಅವರು ಈ ಪ್ರಯೋಗ ಮಾಡಿದ್ದಾರೆ. ಯೂಟ್ಯೂಬರ್ ಪುರುಷೋತ್ತಮ್ ವಸಿಷ್ಠ ಮತ್ತು ಅವರ ಸ್ನೇಹೊತ ಸಚಿನ್ ನಡೆಸಿದ ಈ ಪ್ರಯೋಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಅವರು ಭಕ್ತರನ್ನು ಆಕರ್ಷಿಸಲು ಗುರುತು ಸಿಗದಂತೆ ಹರಿದ ಬಟ್ಟೆ ಧರಿಸಿ ಭಿಕ್ಷುಕನ ವೇಷ ಧರಿಸಿದ್ದಾರೆ.
ಯೂಟ್ಯೂಬರ್ ಪುರುಷೋತ್ತಮ್ ವಶಿಷ್ಠ ಮತ್ತು ಅವರ ಸ್ನೇಹಿತ ಸಚಿನ್ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಗದ್ದಲದ ಮೇಳದಲ್ಲಿ ಈ ಪ್ರಯೋಗವನ್ನು ನಡೆಸಿದ್ದಾರೆ. ಜನರಿಗೆ ಗುರುತು ಸಿಗದಂತೆ ಮಾಡಲು ನೋಟವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಹರಿದ ಬಟ್ಟೆಗಳನ್ನು ಧರಿಸಿದ್ದು, ಮುಖವನ್ನು ಮಣ್ಣಿನಿಂದ ಮೆತ್ತಿಸಿಕೊಂಡಿದ್ದಾರೆ. ಕೈಯಲ್ಲಿ ಒಂದು ಸಣ್ಣ ಬಟ್ಟಲು ಹಾಗು ಕುತ್ತಿಗೆಗೆ UPI QR ಕೋಡ್ ಅನ್ನು ಸಹ ನೇತುಹಾಕಿಕೊಂಡಿದ್ದರು.
ಮೊದಲ ನಾಲ್ಕು ಗಂಟೆಯವರೆಗೆ ಸುಮಾರು 800 ರೂಪಾಯಿ ಸಂಗ್ರಹ ಮಾಡಿದ್ದರು. ಬಳಿಕ 8 ಗಂಟೆ ಸುಮಾರಿಗೆ 4,000 ಇದರಲ್ಲಿ QR ಕೋಡ್ ಮೂಲಕ ಬಂದ 40 ಡಿಜಿಟಲ್ ಪಾವತಿಯೂ ಸೇರಿದೆ. ಈ ಪ್ರಯೋಗದ ಸಮಯದಲ್ಲಿ, ಸಚಿನ್ ಮೇಳದಲ್ಲಿ ಮಾರಾಟಗಾರರು ಮತ್ತು ಇತರ ಜನರೊಂದಿಗೆ ಸಂವಹನ ನಡೆಸಿದ್ದಾರೆ. ಒಬ್ಬ ಸನ್ ಗ್ಲಾಸ್ ಮಾರಾಟಗಾರನು ಅವರಿಗೆ ಒಂದು ಜೋಡಿ ಸನ್ ಗ್ಲಾಸ್ ಅನ್ನು ಸಹ ನೀಡಿದ್ದಾನೆ.
Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಸುಮಾರು ಎಂಟು ಗಂಟೆಗಳ ಕಾಲ ಸುತ್ತಾಡಿ, ವಿಪರೀತ ಮಳೆ ಆಯಾಸದ ನಂತರ ಕೊನೆ ಗೊಳಿಸಿದ್ದು ಸುಮಾರು 4,000 ರೂ.ಗಳನ್ನು ಸಂಗ್ರಹಿಸಿದ್ದಾರೆ. ಈ ಲೆಕ್ಕಾಚಾರದಂತೆ ಧಾರ್ಮಿಕ ಮೇಳಗಳ ಸಮಯದಲ್ಲಿ ತಿಂಗಳಿಗೆ 1,20,000 ವರೆಗೆ ಗಳಿಸಬಹುದು ಎಂದು ಅವರು ಅಂದಾಜಿಸಿದ್ದಾರೆ.
ಆದರೆ ಭಿಕ್ಷಾಟನೆ ಹಣಗಳಿಸುವ ಸುಲಭ ಮಾರ್ಗವಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಕರ ಎಂದು ಅವರು ಬಣ್ಣಿಸಿದರು. ಹಣ ಚೆನ್ನಾಗಿ ಸಿಕ್ಕರೂ, ಸತತವಾಗಿ ನಡೆಯುವುದು, ಸಾರ್ವಜನಿಕರ ನಿಂದನೆ, ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಆಯಾಸ ತರುತ್ತದೆ ಎಂದು ಯೂಟ್ಯೂಬರ್ ಹೇಳಿದ್ದಾರೆ.
ಅವರ ಪ್ರಯೋಗವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಅದರ ಬಗ್ಗೆ ತಮ್ಮ ವಿಭಿನ್ನ ನಿಲುವುಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ಧಾರ್ಮಿಕ ಮೇಳದ ಸಮಯದಲ್ಲಿ ಇಷ್ಟು ಗಳಿಸಬಹುದು, ಈ ರೀತಿಯ ಆದಾಯವು ಪ್ರತಿದಿನ ಅಥವಾ ತಿಂಗಳು ಲಭ್ಯವಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅಂದರು. ಬೇರೊಬ್ಬರು, "ಅದಕ್ಕಾಗಿಯೇ ಭಾರತವು ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.