CM Siddaramaiah: ಸರಳ, ಸಜ್ಜನಿಕೆಯ ಪ್ರಾಮಾಣಿಕ ಹೋರಾಟಗಾರ ಮೈಕೆಲ್ ಫರ್ನಾಂಡಿಸ್: ಸಿದ್ದರಾಮಯ್ಯ
ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನಾಂಡೀಸ್ ಅವರ 92ನೇ ಜನ್ಮದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮೈಕೆಲ್ ಫರ್ನಾಂಡೀಸ್ ಮತ್ತು ಪತ್ನಿ ಡೋನಾ ಫರ್ನಾಂಡೀಸ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.


ಬೆಂಗಳೂರು: ಸರಳ, ಸಜ್ಜನಿಕೆಯ ಪ್ರಾಮಾಣಿಕ ಹೋರಾಟಗಾರ ಮೈಕೆಲ್ ಫರ್ನಾಂಡಿಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನಾಂಡೀಸ್ ಅವರ 92ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮೈಕೆಲ್ ಫರ್ನಾಂಡೀಸ್ ಮತ್ತು ಪತ್ನಿ ಡೋನಾ ಫರ್ನಾಂಡೀಸ್ ಅವರನ್ನು ಸನ್ಮಾನಿಸಿ, ಅವರು ಮಾತನಾಡಿದರು.

ಇಂತಹ ಸಮಾಜವಾದಿ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಬಹಳ ಅಪರೂಪ. ಕಾರ್ಮಿಕ ಸಚಿವರಾಗುವ ಅವಕಾಶ ಮನೆ ಬಾಗಿಲಿಗೆ ಹುಡುಕಿಕೊಂಡು ಹೋದರೂ, ಸಚಿವರಾಗಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಸಚಿವ ಸ್ಥಾನ ತಿರಸ್ಕರಿಸಿ ಹೋರಾಟ ಮಾರ್ಗದಲ್ಲೇ ಮುಂದುವರಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಲಿತರು, ರೈತರು, ಕಾರ್ಮಿಕರ ಹಿತಾಸಕ್ತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಹೋರಾಟ ರಾಜಕಾರಣದಲ್ಲಿ ಅತೀ ಅಪರೂಪದ ವ್ಯಕ್ತಿತ್ವ ಮೈಕೆಲ್ ದಂಪತಿಯದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Karnataka Assembly Session: ಕಳಸಾ ಬಂಡೂರಿ ಯೋಜನೆ; ನಾವೆಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದ ಡಿಕೆಶಿ