ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಸಿಎಸಿಇಎಎ –2025 ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ

ಮೂರು ದಿನಗಳ ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ಜಗತ್ತಿನ ನಾನಾ ದೇಶಗಳಿಂದ ಬಂದಿರುವ ವಿಜ್ಞಾನಿ ಗಳು, ಸಂಶೋಧಕರು ಮತ್ತು ಕೈಗಾರಿಕಾ ತಜ್ಞರು ಭಾಗವಹಿಸಿದ್ದು, ವಾಯುಯಾನ ರಚನಾ ವಿನ್ಯಾಸ ದಿಂದ ಹಿಡಿದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಗಳವರೆಗೆ ಇರುವ ವಿಮಾನೋ ದ್ಯಮ ತಂತ್ರಜ್ಞಾನಗಳ ಭವಿಷ್ಯದ ದಿಕ್ಕುಗಳನ್ನು ಚರ್ಚಿಸಲಿದ್ದಾರೆ.

ಐಸಿಎಸಿಇಎಎ  –2025 ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ

-

Ashok Nayak
Ashok Nayak Dec 19, 2025 2:12 PM

ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ)ಯಲ್ಲಿ ಜಾಗತಿಕ ಏರೋಸ್ಪೇಸ್ ತಜ್ಞರ ಸಮಾಗಮ

ಬೆಂಗಳೂರು: ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ) ಯ ಏರೋಸ್ಪೇಸ್ ಎಂಜಿನಿಯರಿಂಗ್ ಆಯೋಜಿಸಿರುವ “ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಆನ್ ಅಡ್ವಾನ್ಸಸ್ ಇನ್ ಕಂಪ್ಯೂಟೇಷನಲ್ ಅಂಡ್ ಎಕ್ಸ್‌ಪೆರಿಮೆಂಟಲ್ ಅಪ್ರೋಚಸ್ ಇನ್ ಏರೋಸ್ಟ್ರಕ್ಚರ್ಸ್ (ICACEAA–2025)” ಅಂತರ ರಾಷ್ಟ್ರೀಯ ಸಮ್ಮೇಳನಕ್ಕೆ ಇಂದು ಶೇಷಾದ್ರಿ ರಸ್ತೆ ಕ್ಯಾಂಪಸ್‌ನಲ್ಲಿ ಅಧಿಕೃತವಾಗಿ ಚಾಲನೆ ದೊರೆಯಿತು.

ಮೂರು ದಿನಗಳ ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ಜಗತ್ತಿನ ನಾನಾ ದೇಶಗಳಿಂದ ಬಂದಿರುವ ವಿಜ್ಞಾನಿ ಗಳು, ಸಂಶೋಧಕರು ಮತ್ತು ಕೈಗಾರಿಕಾ ತಜ್ಞರು ಭಾಗವಹಿಸಿದ್ದು, ವಾಯುಯಾನ ರಚನಾ ವಿನ್ಯಾಸ ದಿಂದ ಹಿಡಿದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಗಳವರೆಗೆ ಇರುವ ವಿಮಾನೋದ್ಯಮ ತಂತ್ರಜ್ಞಾನಗಳ ಭವಿಷ್ಯದ ದಿಕ್ಕುಗಳನ್ನು ಚರ್ಚಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ) ಯ ಚಾನ್ಸಲರ್ ಡಾ. ಚೆನ್‌ರಾಜ್ ರಾಯ್ಚಂದ್, ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ) ಯ ಗೌರವಾನ್ವಿತ ಪ್ರಾಧ್ಯಾಪಕ ಹಾಗೂ ಪದ್ಮಶ್ರೀ ಪುರಸ್ಕೃತ ಪ್ರೊ. ಬಿ. ದತ್ತಗುರು, ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ) ಯ ಮಾಜಿ ಚಾನ್ಸಲರ್ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನ ಮಾಜಿ ಅಧ್ಯಕ್ಷ ಡಾ. ಸಿ. ಜಿ. ಕೃಷ್ಣದಾಸ್ ನಾಯರ್ ಸೇರಿದಂತೆ ಭಾರತೀಯ ಹಾಗೂ ಅಂತರರಾಷ್ಟ್ರೀಯ ಏರೋ ಸ್ಪೇಸ್ ವಲಯದ ಗಣ್ಯ ವ್ಯಕ್ತಿಗಳು ಹಾಜರಿದ್ದರು. ಮಾಜಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ರಾಗಿದ್ದ ಹಾಗೂ ಡಿಆರ್‌ಡಿಓದ ಹಿರಿಯ ವಿಜ್ಞಾನಿಯಾಗಿದ್ದ ಡಾ.ವಿ.ಕೆ.ಆತ್ರೆ, ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ಡಿಆರ್‌ಡಿಓನ ಅಕಾಶ್ ಕ್ಷಿಪಣಿ ಯೋಜನೆಯ ಮುನ್ನಾಳದ ಮುಖ್ಯಸ್ಥ ರಾದ ಡಾ.ಪ್ರಹ್ಲಾದ ರಾಮರಾವ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ನೀಡಿದ ಡಾ. ಸಿ. ಜಿ. ಕೃಷ್ಣದಾಸ್ ನಾಯರ್ ಅವರು, ವಿಮಾನಗಳು ಹಾಗೂ ಬಾಹ್ಯಾಕಾಶ ವಾಹನಗಳ ಅಭಿವೃದ್ಧಿಯಲ್ಲಿ ಸ್ವದೇಶಿ ತಂತ್ರಜ್ಞಾನಗಳ ಮಹತ್ವದ ಪಾತ್ರವನ್ನು ವಿಶೇಷವಾಗಿ ರೇಖಾಂಕಿಸಿದರು. ನಂತರ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು ಭವಿಷ್ಯದ ಏರೋಸ್ಪೇಸ್ ಅಭಿವೃದ್ಧಿಗಳ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.

ಸಮ್ಮೇಳನದ ಉದ್ಘಾಟನೆಯಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಅಧ್ಯಯನ (ML) ಹಾಗೂ ಡಿಜಿಟಲ್ ಟ್ವಿನ್ಸ್ ತಂತ್ರಜ್ಞಾನಗಳ ತ್ವರಿತ ಅನ್ವಯಿಕೆಯನ್ನು ವಿಶೇಷವಾಗಿ ಹೊರಹಾಕಲಾಯಿತು. ವಿಮಾನ ಮತ್ತು ಡ್ರೋನ್‌ಗಳ ಸುರಕ್ಷತೆ, ವಿಶ್ವಾಸಾರ್ಹತೆ ಹಾಗೂ ಆರ್ಥಿಕತೆಯನ್ನು ಖಚಿತಪಡಿಸಲು ಈ ತಂತ್ರಜ್ಞಾನಗಳು ಭವಿಷ್ಯದವುಗಳು ಅಲ್ಲ; ಈಗಾಗಲೇ ಅವು ಅವಿಭಾಜ್ಯ ಉಪಕರಣಗಳಾಗಿ ರೂಪಾಂತರಗೊಂಡಿವೆ ಎಂದು ಹಾಜರಿದ್ದ ಕೈಗಾರಿಕಾ ತಜ್ಞರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ) ಯ ಚಾನ್ಸಲರ್ ಡಾ. ಚೆನ್‌ರಾಜ್ ರಾಯ್ಚಂದ್ ಅವರು ಹೀಗೆ ಹೇಳಿದರು: “ಏರೋಸ್ಪೇಸ್ ಮತ್ತು ಅಡ್ವಾನ್ಸ್ಡ್ ಎಂಜಿನಿಯ ರಿಂಗ್‌ನ ಭವಿಷ್ಯವು ಏಕೀಕರಣದಲ್ಲಿ ಇದೆ – ವಿಷಯಶಾಖೆಗಳು, ತಂತ್ರಜ್ಞಾನಗಳು ಮತ್ತು ತಲೆಮಾರುಗಳ ಏಕೀಕರಣದಲ್ಲಿ. ICACEAA–2025 ಸಮ್ಮೇಳನವು ದಿಗ್ಗಜ ವಿಜ್ಞಾನಿಗಳು ಮತ್ತು ಉದಯೋನ್ಮುಖ ಸಂಶೋಧಕರನ್ನು ಒಂದೇ ವೇದಿಕೆಗೆ ತಂದು, ಸಂಶೋಧನೆಯನ್ನು ನೈಜ ಜೀವನದ ಪರಿಣಾಮಕಾರಿಯಾದ ಪರಿಹಾರಗಳಾಗಿ ರೂಪಾಂತರಿಸುವುದಕ್ಕೆ, ಮತ್ತು ಭಾರತದ ವೈಜ್ಞಾನಿಕ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವಂತೆ ಮಾಡುವುದಕ್ಕೆ ಬಹುಮುಖ ವೇದಿಕೆ ಯನ್ನು ಒದಗಿಸುತ್ತದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಗೆ ದಾರಿತೋರಿಸುವ ನವೀನ ಪರಿಹಾರಗಳನ್ನು ಒದಗಿಸಲು ಸಹ ಇದು ಪ್ರೇರೇಪಿಸುತ್ತದೆ” ಎಂದು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಡಿಆರ್‌ಡಿಓನ ಅಕಾಶ್ ಕ್ಷಿಪಣಿ ವ್ಯವಸ್ಥೆಯ ಮಾಜಿ ಮುಖ್ಯಸ್ಥ ರಾದ ಡಾ.ಪ್ರಹ್ಲಾದ ರಾಮರಾವ್ ಅವರಿಂದ ತಾಂತ್ರಿಕ ಅಧಿವೇಶನ ನಡೆಯಿತು.

ಒಟ್ಟು 9 ಕ್ಕೂ ಹೆಚ್ಚು ಪ್ಲೇನರಿ ಉಪನ್ಯಾಸಗಳು, 35 ಕ್ಕೂ ಹೆಚ್ಚು ಕೀ–ನೋಟ್ ಭಾಷಣಗಳು ಮತ್ತು 60 ಸಂಶೋಧನಾ ಪ್ರಬಂಧಗಳ ಪ್ರಸ್ತುತಿಗಳೊಂದಿಗೆ ICACEAA–2025 ಸಮ್ಮೇಳನವು ವಿಮಾನೋ ದ್ಯಮದ ಭವಿಷ್ಯ ಮಾರ್ಗರೇಖೆಯನ್ನು ರೂಪಿಸಲು ಪ್ರಮುಖ ವೇದಿಕೆಯಾಗಲಿದೆ. ಡಿಸೆಂಬರ್ 20 ರವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಕೈಗಾರಿಕಾ ವಿಶೇಷ ಅಧಿವೇಶನಗಳೂ ಇರಲಿದ್ದು, ಅಕಾಡೆಮಿಕ್ ಸಂಶೋಧನೆ ಮತ್ತು ಕೈಗಾರಿಕಾ ವಾಣಿಜ್ಯ ಅನ್ವಯಿಕಾರ್ಯಗಳ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.

ನವೀನತೆ ಕುರಿತ ಸಂವಾದಗಳನ್ನು ಬೆಳೆಸುವುದು ಹಾಗೂ ಆ ಸಂಶೋಧನೆಗಳನ್ನು ಅಳವಡಿಸಿ ಕೊಳ್ಳುವಲ್ಲಿ ಎದುರಾಗುವ ಸವಾಲುಗಳನ್ನು ಚರ್ಚಿಸಲು ಇಂತಹ ಇನ್ನಷ್ಟು ವೇದಿಕೆಗಳನ್ನು ನಿರ್ಮಿಸಲು ಜೈನ್ (ಡೀಮ್ಡ್-ಟು- ಬಿ- ಯೂನಿವರ್ಸಿಟಿ) ಬದ್ಧವಾಗಿದೆ.