2026ರಲ್ಲಿ ಭಾರತದಲ್ಲಿ ಮತ್ತೊಮ್ಮೆ ಮಿಂಚಲು ಸಿದ್ಧವಾದ ನಿಸ್ಸಾನ್; ಮುಂದಿನ ವರ್ಷ ಬರಲಿದೆ ಹೊಚ್ಚ ಹೊಸ 7-ಸೀಟರ್ ಬಿ-ಎಂಪಿವಿ ಗ್ರಾವೈಟ್
2024ರ ಜುಲೈಯಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಎರಡನೇ ಮಾಡೆಲ್ ಆಗಿ ಘೋಷಿಸಲಾದ ಗ್ರಾವೈಟ್, ಕಂಪನಿಯು ತೀವ್ರ ಗತಿಯಲ್ಲಿ ಮುಂದೆ ಸಾಗುತ್ತಿರುವುದನ್ನು ಸೂಚಿಸುತ್ತದೆ. ನಿಸ್ಸಾನ್ ಉತ್ಪನ್ನಗಳ ರೋಡ್‌ಮ್ಯಾಪ್‌ನಲ್ಲಿ 2026ರ ಆರಂಭ ದಲ್ಲಿ ಗ್ರಾವೈಟ್ ನ ಬಿಡುಗಡೆ ಆಗಲಿದೆ.
-
ನಿಸ್ಸಾನ್‌ನ ಹೊಸ ಅಧ್ಯಾಯದ ಕಥೆ ಆರಂಭ: ಗ್ರಾವೈಟ್ ನಿಸ್ಸಾನ್‌ನ ಹೊಸ ಅಧ್ಯಾಯದ ಮೊದಲ ಹೆಜ್ಜೆಯಾಗಿದ್ದು, ಮುಂದೆ ಬಿಡುಗಡೆಯಾಗಲಿರುವ ಹೊಸ ಮಾದರಿಗಳ ಸಾಲಿನಲ್ಲಿ ವಿಶಿಷ್ಟವಾಗಿ ನಿಲ್ಲಲಿದೆ
- ಭಾರತೀಯ ಕುಟುಂಬಗಳಿಗಾಗಿ ವಿನ್ಯಾಸಗೊಳಿಸಲಾಗಿದೆ: 1.4 ಬಿಲಿಯನ್ ಭಾರತೀಯ ರಿಂದ ಸ್ಫೂರ್ತಿ ಪಡೆದು ರಚಿಸಲಾಗಿರುವ ಈ ಬಹುಮುಖ 7-ಸೀಟರ್ ಬಿ-ಎಂಪಿವಿ ಭಾರತೀಯ ಮನೆಗಳ ಬದಲಾಗುತ್ತಿರುವ ಅಗತ್ಯತೆಗಳನ್ನು ಪೂರೈಸಲು ಸಜ್ಜುಗೊಂಡಿದೆ.
- ಜಾಗತಿಕ ಹೆಮ್ಮೆ: ನಿಸ್ಸಾನ್‌ನ ವಿಶಿಷ್ಟವಾದ ಸಿ-ಆಕಾರದ ಫ್ರಂಟ್ ಗ್ರಿಲ್ ಅನ್ನು ಗ್ರಾವೈಟ್ ಹೊಂದಿದ್ದು, ಅದ್ಭುತವಾದ ರೋಡ್ ಪ್ರೆಸೆನ್ಸ್ ಮತ್ತು ಆಕರ್ಷಕ ನಿಲುವನ್ನು ಹೊಂದಿದೆ
- ನಿಸ್ಸಾನ್ ಮೋಟಾರ್ ಇಂಡಿಯಾದ ಹೊಸ ಅಧ್ಯಾಯದ ರೂಪುರೇಷೆ: 2026ರ ಆರಂಭ ದಲ್ಲಿ ಅದ್ದೂರಿಯಾಗಿ ಆಗಮಿಸಲು ಸಿದ್ಧವಾಗಿರುವ ಹೊಸ ಗ್ರಾವೈಟ್ ಅನ್ನು ರೆನಾಲ್ಟ್ ನ ಚೆನ್ನೈ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುವುದು
- ಜಾಲ ವಿಸ್ತರಣೆ: ಟೈರ್ I ಮತ್ತು ಟೈರ್ II ನಗರಗಳಲ್ಲಿ ನಿಸ್ಸಾನ್ ತನ್ನ ಡೀಲರ್ ಜಾಲವನ್ನು ವಿಸ್ತರಿಸುತ್ತಿದೆ
ಬೆಂಗಳೂರು: ನಿಸ್ಸಾನ್ ಇಂಡಿಯಾದ ಹೊಸ ಅಧ್ಯಾಯದ ಆರಂಭವನ್ನು ಸೂಚಿಸಲಿರುವ ಹೊಚ್ಚ ಹೊಸ 7-ಸೀಟರ್ ಬಿ-ಎಂಪಿವಿಗೆ ಗ್ರಾವೈಟ್ ಎಂದು ನಾಮಕರಣ ಮಾಡಲಾಗಿದೆ ಮತ್ತು ಈ ಅದ್ದೂರಿ ವಾಹನವನ್ನು 2026ರ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿಸ್ಸಾನ್ ಘೋಷಿಸಿದೆ.
ಗ್ರಾವೈಟ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು, ಮತ್ತೊಮ್ಮೆ ಮಿಂಚಲು ತಂತ್ರಾತ್ಮಕವಾಗಿ ಸಿದ್ಧಪಡಿಸಿದ ವಾಹನಗಳ ಸಾಲಿನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ವಾಹನವಾಗಿದೆ. ಆಧುನಿಕ ಭಾರತೀಯ ಕುಟುಂಬಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಗ್ರಾವೈಟ್, ಬಹುಮುಖತೆ ಮತ್ತು ವೈವಿಧ್ಯತೆಯನ್ನು ಹೊಂದಿದೆ. ಮೌಲ್ಯಕ್ಕೆ ಮಹತ್ವ ಕೊಡುವ ಮನೆಗಳ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ನಿಸ್ಸಾನ್‌ನ ಹೊಸ ಅಧ್ಯಾಯದ ಹೊಸ ಉತ್ಪನ್ನ ಪೋರ್ಟ್ ಫೋಲಿಯೋ ವಿಸ್ತರಣೆಗೆ ವೇಗ ಒದಗಿಸಲಿದೆ.
2024ರ ಜುಲೈಯಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಎರಡನೇ ಮಾಡೆಲ್ ಆಗಿ ಘೋಷಿಸಲಾದ ಗ್ರಾವೈಟ್, ಕಂಪನಿಯು ತೀವ್ರ ಗತಿಯಲ್ಲಿ ಮುಂದೆ ಸಾಗು ತ್ತಿರುವುದನ್ನು ಸೂಚಿಸುತ್ತದೆ. ನಿಸ್ಸಾನ್ ಉತ್ಪನ್ನಗಳ ರೋಡ್‌ಮ್ಯಾಪ್‌ನಲ್ಲಿ 2026ರ ಆರಂಭದಲ್ಲಿ ಗ್ರಾವೈಟ್ ನ ಬಿಡುಗಡೆ ಆಗಲಿದೆ. ನಂತರ 2026ರ ಮಧ್ಯದಲ್ಲಿ ಟೆಕ್ಟಾನ್ ಮತ್ತು 2027ರ ಆರಂಭ ದಲ್ಲಿ 7-ಸೀಟರ್ ಸಿ-ಎಸ್‌ಯುವಿ ಬಿಡುಗಡೆ ಆಗಲಿದೆ. ಈ ಮೂಲಕ ಭಾರತೀಯ ಗ್ರಾಹಕರಿಗೆ ತನ್ನ ವೈವಿಧ್ಯಮಯ, ದೃಢವಾದ ಮತ್ತು ಹೊಸ ರೀತಿಯ ಉತ್ಪನ್ನಗಳನ್ನು ಒದಗಿಸುವ ಬದ್ಧತೆ ಯನ್ನು ನಿಸ್ಸಾನ್ ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ನಿಸ್ಸಾನ್‌ನ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುವ ಹೆಸರು ಗ್ರಾವೈಟ್
ಗುರುತ್ವಾಕರ್ಷಣೆ (ಗ್ರಾವಿಟಿ) ಎಂಬ ಪದದಿಂದ ಸ್ಫೂರ್ತಿ ಪಡೆದು “ಗ್ರಾವೈಟ್” ಎಂಬ ಹೆಸರು ಇಡಲಾಗಿದ್ದು, ಈ ಹೆಸರು ಸಮತೋಲನ, ಆಂತರಿಕ ಸ್ಥಿರತೆ ಮತ್ತು ಪ್ರಬಲ ಆಕರ್ಷಣೆಯನ್ನು ಸೂಚಿಸುತ್ತದೆ. ಭಾರತೀಯ ಕುಟುಂಬಗಳಿಗೆ ಅನುಕೂಲಕರ, ಬಹುಮುಖ ಮತ್ತು ಅತ್ಯುತ್ತಮ ಸಂಪರ್ಕ ಸೇವೆ ಒದಗಿಸುವ ವಾಹನಗಳನ್ನು ವಿನ್ಯಾಸಗೊಳಿಸುವ ನಿಸ್ಸಾನ್ ನ ಮೂಲ ಉದ್ದೇಶ ವನ್ನು ಈ ಗ್ರಾವೈಟ್ ಪ್ರತಿಬಿಂಬಿಸುತ್ತದೆ. 1.4 ಬಿಲಿಯನ್ ಭಾರತೀಯರು ಮತ್ತು ರಾಷ್ಟ್ರದ ವೈವಿಧ್ಯತೆ ಯನ್ನು ಸೂಚಿಸುವ 19,000 ಪ್ರಾದೇಶಿಕ ಭಾಷೆಗಳು ಮತ್ತು ಆಚರಣೆಗಳಿಂದ ಸ್ಫೂರ್ತಿ ಪಡೆದು ರಚಿಸಲಾಗಿರುವ ಗ್ರಾವೈಟ್ ಮಹತ್ವಾಕಾಂಕ್ಷಿ ಮತ್ತು ವೈವಿಧ್ಯಮಯ ಭಾರತೀಯ ಗ್ರಾಹಕರಿಗೆ ಪರಿಪೂರ್ಣ ಸಂಗಾತಿಯಾಗಿದೆ.
ಒಳಾಂಗಣ: ಸೊಗಸು ಮತ್ತು ಅನುಕೂಲತೆಯ ಸಮ್ಮಿಶ್ರಣ
ಗ್ರಾವೈಟ್ ಅಸಾಧಾರಣ ಕ್ಯಾಬಿನ್ ಅನ್ನು ಹೊಂದಿದ್ದು, ವಿಶಾಲವಾಗಿದೆ ಮತ್ತು ವಿಭಾಗದಲ್ಲಿಯೇ ಅತಿ ಹೆಚ್ಚಿನ ಸ್ಟೋರೇಜ್ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಕೌಟುಂಬಿಕ ಪ್ರಯಾಣಗಳ ರೀತಿಯನ್ನೇ ಪರಿವರ್ತಿಸಲಿದೆ. ಪ್ರತಿಯೊಂದು ಅಂಶವನ್ನೂ ವೈವಿಧ್ಯಮಯ ಬಳಕೆ ಮತ್ತು ಅನುಕೂಲಕರ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಬದಲಾಗುತ್ತಿರುವ ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆ ಅಗತ್ಯತೆಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಅಲ್ಟ್ರಾ-ಮಾಡ್ಯುಲರ್ ಸೀಟಿಂಗ್ ನಿಂದ ಹಿಡಿದು, ದೈನಂದಿನ ಪ್ರಯಾಣಗಳು ಮತ್ತು ಸುದೀರ್ಘ ಕೌಟುಂಬಿಕ ಪ್ರವಾಸಗಳವರೆಗೆ ಎಲ್ಲಕ್ಕೂ ಸೂಕ್ತ ಅನ್ನಿಸುವಂತೆ, ಬೇಕಾದಷ್ಟು ಜಾಗ ಇರುವಂತೆ ಸೊಗಸಾಗಿ ವಿನ್ಯಾಸಗೊಳಿಸ ಲಾಗಿದೆ.
2026ರ ಆರಂಭದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿರುವ ಹೊಚ್ಚ ಹೊಸ ಗ್ರಾವೈಟ್ ಅನ್ನು ಚೆನ್ನೈಯಲ್ಲಿ ಉತ್ಪಾದಿಸಲಾಗುವುದು. ಈ ಪ್ರಾದೇಶಿಕ ಮಟ್ಟದಲ್ಲಿ ಉತ್ಪಾದನೆ ಮಾಡುವ ನಿರ್ಧಾರವು ಭಾರತೀಯ ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳಿಗೆ ಹೊಂದಿಕೊಳ್ಳುವ ವಿಶೇಷ ವಿನ್ಯಾಸದ ವಾಹನಗಳನ್ನು ನೀಡುವ ನಿಸ್ಸಾನ್ ಮೋಟಾರ್ ಇಂಡಿಯಾದ ಬದ್ಧತೆಯನ್ನು ಬಲಪಡಿಸುತ್ತದೆ. ನಿಸ್ಸಾನ್‌ನ ಹೊಸ ಅಧ್ಯಾಯದಲ್ಲಿನ ಎರಡನೇ ನಿರ್ಣಾಯಕ ಮಾದರಿಯಾಗಿರುವ ಗ್ರಾವೈಟ್ ಭಾರತದಲ್ಲಿ ಬ್ರಾಂಡ್‌ನ ಪುನರುಜ್ಜೀವನ ಪಯಣದಲ್ಲಿ ನಿರ್ಣಾಯಕ ಹೆಜ್ಜೆಯಾಗಲಿದೆ.
ವಿನ್ಯಾಸ ಮತ್ತು ಸ್ಫೂರ್ತಿ
ಹೊಚ್ಚ ಹೊಸ ಗ್ರಾವೈಟ್ ನಿಸ್ಸಾನ್‌ನ ಜಾಗತಿಕ ವಿನ್ಯಾಸ ಭಾಷೆಗೆ ಅನುಗುಣಾದ ಬೋಲ್ಡ್ ಆದ ಮತ್ತು ವಿಶಿಷ್ಟ ಗುರುತನ್ನು ಹೊಂದಿದೆ. ಅದರ ವಿಶಿಷ್ಟ ಸಿ-ಆಕಾರದ ಫ್ರಂಟ್ ಗ್ರಿಲ್ ನಿಸ್ಸಾನ್‌ನ ಡಿಎನ್ಎಯ ನಿರ್ಣಾಯಕ ಅಂಶವಾಗಿದ್ದು, ತಕ್ಷಣ ಗಮನ ಸೆಳೆಯುತ್ತದೆ ಮತ್ತು ಅದ್ದೂರಿ ರೋಡ್ ಪ್ರೆಸೆನ್ಸ್ ಒದಗಿಸುತ್ತದೆ. ಗ್ರಾವೈಟ್ ನ ಸೊಗಸಾದ ವಿನ್ಯಾಸ ಮತ್ತು ಆಕರ್ಷಕ ದಿಟ್ಟ ನಿಲುವು ಆಧುನಿಕ ಸೊಬಗು ಒದಗಿಸುತ್ತದೆ ಮತ್ತು ಪ್ರಾಯೋಗಿಕ, ದೈನಂದಿನ ಬಳಕೆಗೆ ಸೂಕ್ತವಾಗಿದೆ.
ಗ್ರಾವೈಟ್ ತನ್ನ ವಿಭಾಗದಲ್ಲಿ ವಿಶಿಷ್ಟ ಹುಡ್ ಬ್ರಾಂಡಿಂಗ್ ಹಾಗೂ ವಿಶಿಷ್ಟದ ಹಿಂದಿನ ಬಾಗಿಲಿನ ಬ್ಯಾಡ್ಜಿಂಗ್ ಅನ್ನು ಹೊಂದಿರುವ ಏಕೈಕ ವಾಹನವಾಗಿದ್ದು, ಇದು ಅದರ ವಿಶೇಷ ಆಕರ್ಷಣೆ ಯನ್ನು ಹೆಚ್ಚಿಸುವ ಅದ್ಭುತವಾದ ವಿನ್ಯಾಸ ಅಂಶವಾಗಿದೆ. ಹಿಂಭಾಗದ ಫೇಸಿಯಾ, ನಿಸ್ಸಾನ್‌ನ ವಿಶಿಷ್ಟ ಸಿ-ಆಕಾರದ ಇಂಟರ್‌ಲಾಕ್ ಥೀಮ್ ಅನ್ನು ಹೊಂದಿದ್ದು, ಎಲ್ಲಾ ರೀತಿಯ ರಸ್ತೆಯಲ್ಲಿಯೂ ಎಂಪಿವಿಯ ಅದ್ಭುತ ಉಪಸ್ಥಿತಿಯನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿರುವ ನಿಸ್ಸಾನ್ ಎಎಂಐಇಓ (ಆಫ್ರಿಕಾ, ಮಧ್ಯಪ್ರಾಚ್ಯ, ಭಾರತ, ಯೂರೋಪ್ & ಓಷಿಯಾನಿಯಾ) ವಿಭಾಗದ ಚೇರ್‌ಪರ್ಸನ್ ಮ್ಯಾಸಿಮಿಲಿ ಯಾನೋ ಮೆಸ್ಸಿನಾ, “ಭಾರತವು ಎಎಂಐಇಓನ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆ ನೀಡುತ್ತಲೇ ಬರುತ್ತಿದೆ ಮತ್ತು ನಿಸ್ಸಾನ್ ಮೋಟಾರ್ ಇಂಡಿಯಾ ನಮ್ಮ ಈ ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕ ವರ್ಷ 25ರಲ್ಲಿ ನಾವು ನಮ್ಮ ವ್ಯವಹಾರ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಿದ್ದೇವೆ, ಪೋರ್ಟ್‌ಫೋಲಿಯೋವನ್ನು ವಿಸ್ತರಿಸಿದ್ದೇವೆ ಮತ್ತು 2024ರ ಉತ್ಪನ್ನ ಯೋಜನೆ ಯಲ್ಲಿ ಮಾಡಿದ ಪ್ರತಿಯೊಂದು ಭರವಸೆಯನ್ನೂ ಈಡೇರಿಸಿದ್ದೇವೆ.
ಜಾಗತಿಕ ಮಟ್ಟದಲ್ಲಿ ಹೊಂದಿದ ಒಳನೋಟಗಳನ್ನು ಬಳಸಿಕೊಂಡು ರೂಪಿಸಲಾದ ಆದರೆ ಭಾರತೀಯ ಗ್ರಾಹಕರ ಅಗತ್ಯಗಳಿಗೆ ಸೂಕ್ತವಾಗಿ ಹೊಂದಿಕೊಳ್ಳಲಿರುವ ಮುಂಬರುವ ಉತ್ಪನ್ನ ಸಾಲು ಈ ಆಕರ್ಷಕ ಮಾರುಕಟ್ಟೆ ಮೇಲೆ ನಾವು ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ. ಭಾರತದಲ್ಲಿ ಮತ್ತು ಭಾರತಕ್ಕಾಗಿ ಅಭಿವೃದ್ಧಿಪಡಿಸಿದ ಹೊಸ ಮಾದರಿಗಳೊಂದಿಗೆ, ಹಲವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ರಫ್ತು ಮಾಡಲಿದ್ದೇವೆ. ಈ ಮೂಲಕ ಭಾರತವು ನಿಸ್ಸಾನ್ ಅಲಯನ್ಸ್ ನ ಬೆಳವಣಿಗೆಗೆ ಚಾಲಕ ಶಕ್ತಿಯಾಗಿ ಮತ್ತು ತಂತ್ರಾತ್ಮಕ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ಗ್ರಾವೈಟ್ ನ ಅನಾವರಣವು ನಾವು ತೀವ್ರ ಗತಿಯಲ್ಲಿ ಮುಂದುವರಿಯುವುದನ್ನು ಸೂಚಿಸುತ್ತದೆ ಮತ್ತು ಮುಂದಿನ ದಾರಿಯ ಕುರಿತು ನಾವು ಹೊಂದಿರುವ ನಮ್ಮ ಆತ್ಮವಿಶ್ವಾಸವನ್ನು ಪ್ರಚುರಪಡಿಸುತ್ತದೆ” ಎಂದು ಹೇಳಿದರು.
ನಿಸ್ಸಾನ್ ಮೋಟಾರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಸೌರಭ್ ವತ್ಸಾ ಅವರು ಮಾತನಾಡಿ, “ಹೊಚ್ಚ ಹೊಸ ಗ್ರಾವೈಟ್ ಬದಲಾಗುತ್ತಿರುವ ಭಾರತೀಯ ಮಾರುಕಟ್ಟೆಯ ಕಡೆಗೆ ನಿಸ್ಸಾನ್ ಮೋಟಾರ್ ಇಂಡಿಯಾ ಹೊಂದಿರುವ ಗಮನವನ್ನು ತೋರಿಸುತ್ತದೆ. ಭಾರತೀಯ ಮಾರುಕಟ್ಟೆಯನ್ನು ಆಳವಾಗಿ ಗಮನ ಹರಿಸುವ ಮೂಲಕ ನಮ್ಮ ಗ್ರಾಹಕರ ವೈವಿಧ್ಯಮಯ ಅಗತ್ಯತೆಗಳಿಗೆ ಪರಿಪೂರ್ಣ ಸಂಗಾತಿಯಾಗಿಸಲೆಂದೇ ಈ ಗ್ರಾವೈಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಹೊಚ್ಚ ಹೊಸ ಉತ್ಪನ್ನ ಸಾಲಿನ ಎರಡನೇ ಮಾದರಿಯಾಗಿರುವ ಗ್ರಾವೈಟ್ ನಮ್ಮ ಹೊಸ ಅಧ್ಯಾಯದ ಪಯಣದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತೀಯ ಗ್ರಾಹಕರ ಮಹತ್ವಾಕಾಂಕ್ಷೆ ಗಳ ಜೊತೆ ಹೊಂದಿಕೊಳ್ಳುವ ವಾಹನಗಳನ್ನು ನೀಡುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ” ಎಂದು ಹೇಳಿದರು.
ಈ ಬೆಳವಣಿಗೆಯನ್ನು ಬೆಂಬಲಿಸಲು, ನಿಸ್ಸಾನ್ ತನ್ನ ರಾಷ್ಟ್ರವ್ಯಾಪಿ ಡೀಲರ್ ಶಿಪ್ ಜಾಲದ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ, ಈ ಮೂಲಕ ದೇಶಾದ್ಯಂತ ಗ್ರಾಹಕರಿಗೆ ಹೆಚ್ಚಿನ ಲಭ್ಯತೆ ಮತ್ತು ಉತ್ತಮ ಗ್ರಾಹಕ ಅನುಭವವನ್ನು ಒದಗಿಸಲಿದೆ.
ಈ ಹೊಸ ಅಧ್ಯಾಯದ ಸಂದರ್ಭದಲ್ಲಿ ಸಂಸ್ಥೆಯ ಅತ್ಯಂತ ಯಶಸ್ವಿ ‘ಮೇಡ್ ಇನ್ ಇಂಡಿಯಾ’ ಮಾದರಿಗಳಲ್ಲಿ ಒಂದಾಗಿರುವ ನಿಸ್ಸಾನ್ ಮ್ಯಾಗ್ನೈಟ್, ಬ್ರಾಂಡ್‌ನ ಜಾಗತಿಕ ಉಪಸ್ಥಿತಿಯನ್ನು ಬಲ ಪಡಿಸುತ್ತಲೇ ಸಾಗುತ್ತಿದೆ. ಈಗ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ದಾದ್ಯಂತ 65 ಮಾರುಕಟ್ಟೆಗಳಿಗೆ ರಫ್ತು ಮಾಡಲ್ಪಡುತ್ತಿರುವ ಮ್ಯಾಗ್ನೈಟ್ ನ ಅತ್ಯುತ್ತಮ ಬೆಳವಣಿಗೆಯು ನಿಸ್ಸಾನ್ ನ ಉತ್ಪಾದನಾ ಮತ್ತು ರಫ್ತು ಕೇಂದ್ರವಾಗಿರುವ ಭಾರತದ ಪ್ರಮುಖ ಪಾತ್ರವನ್ನು ಸಾರುತ್ತಿದೆ.
ಭಾರತದಲ್ಲಿ ತನ್ನ ಭವಿಷ್ಯ ಸಿದ್ಧ ಉತ್ಪನ್ನಗಳ ಸಾಲನ್ನು ಮತ್ತಷ್ಟು ಬಲಪಡಿಸುತ್ತಿರುವ ನಿಸ್ಸಾನ್, 2025ರ ಅಕ್ಟೋಬರ್‌ನಲ್ಲಿ ತನ್ನ ಮುಂಬರುವ ಪ್ರೀಮಿಯಂ ಎಸ್‌ಯುವಿ ಟೆಕ್ಟಾನ್ ಅನ್ನು ಅನಾ ವರಣಗೊಳಿಸಿದೆ. ಆಕರ್ಷಕ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಟೆಕ್ಟಾನ್, ಬ್ರಾಂಡ್‌ನ ಬೆಳವಣಿಗೆಯ ಮುಂದಿನ ಹಂತಕ್ಕೆ ಸೂಕ್ತ ವೇದಿಕೆ ಸಿದ್ಧಪಡಿಸಲಿದೆ. ಪ್ರಸ್ತುತ ಗ್ರಾವೈಟ್, ಮುಂದೆ ಟೆಕ್ಟಾನ್ ಈ ಎಲ್ಲಾ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಸೂಕ್ತವಾದ ಉತ್ಪನ್ನಗಳಾಗಿದ್ದು, ನಿಸ್ಸಾನ್ ನ ಬಲವನ್ನು ಹೆಚ್ಚಿಸಲಿದೆ.
ತಾಂತ್ರಿಕ ವಿವರಗಳು ಮತ್ತು ಬೆಲೆ ವಿವರ ಸೇರಿದಂತೆ ಹೆಚ್ಚಿನ ವಿವರಗಳನ್ನು ಮುಂದಿನ ಘೋಷಣೆ ಯಲ್ಲಿ ತಿಳಿಸಲಾಗುವುದು.