Heart Attack: ಶಾಸಕ ಲಕ್ಷ್ಮಣ ಸವದಿ ಕಣ್ಣೆದುರೇ ಆಪ್ತ ಹೃದಯಾಘಾತದಿಂದ ಸಾವು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ ಲಕ್ಷ್ಮಣ ಸವದಿ ಮತ್ತು ರಾವಸಾಬ ಬೇವನೂರು ಅವರು ತೆರಳಿದ್ದರು. ಮನೆಯ ಒಳಗಡೆ ಒಟ್ಟಿಗೆ ಫೋಟೋಶೂಟ್ ಮುಗಿಸಿ ಹೊರಗಡೆ ಬರುತ್ತಿದ್ದಂತೆ ಶಾಸಕರ ಆಪ್ತನಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ಮೃತ ರಾವಸಾಬ ಬೇವನೂರ -
ಬೆಳಗಾವಿ, ಏ.25: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Congress MLA Laxman Savadi) ಅವರ ಆಪ್ತ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಲಕ್ಷ್ಮಣ್ ಸವದಿ ಮತ್ತು ಅವರ ಆಪ್ತ ರಾವಸಾಬ ಬೇವನೂರ ಅವರು ಒಟ್ಟಿಗೆ ಕಾರ್ಯಕರ್ತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ (House Warming) ತೆರಳಿದ್ದರು. ಈ ವೇಳೆ ರಾವಸಾಬ ಬೇವನೂರು ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಮೃತ ರಾವಸಾಬ ಬೇವನೂರ ಅವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಹಾಲುಮತ ಸಮಾಜದ ತಾಲೂಕು ಅಧ್ಯಕ್ಷರಾಗಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ ಲಕ್ಷ್ಮಣ ಸವದಿ ಮತ್ತು ರಾವಸಾಬ ಬೇವನೂರು ಅವರು ತೆರಳಿದ್ದರು. ಮನೆಯ ಒಳಗಡೆ ಒಟ್ಟಿಗೆ ಫೋಟೋಶೂಟ್ ಮುಗಿಸಿ ಹೊರಗಡೆ ಬರುತ್ತಿದ್ದಂತೆ ಶಾಸಕರ ಆಪ್ತನಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅಲ್ಲಿದ್ದ ಜನರು ರಾವಸಾಬ ಅವರನ್ನು ಬದುಕಿಸಲು ಪ್ರಯತ್ನಪಟ್ಟಿದ್ದಾರೆ. ಆದ್ರೆ, ದುರದೃಷ್ಟವಶಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಮತ್ತು ರಾವಸಾಬ ಬೇವನೂರ ಅವರು ಬಹುಕಾಲದ ಆಪ್ತರಾಗಿದ್ದರು. ಇದೀಗ ಆಪ್ತನ ಸಾವನ್ನು ಕಣ್ಣೆದುರು ಕಂಡ ಶಾಸಕ ಲಕ್ಷ್ಮಣ ಸವದಿ ದುಃಖತಪ್ತರಾಗಿದ್ದಾರೆ.
ಬಸವಕಲ್ಯಾಣದಲ್ಲಿ ಬಸವೇಶ್ವರರ ರಥೋತ್ಸವದ ವೇಳೆ ಘೋರ ದುರಂತ; ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು