ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sameer MD: ಸತತ 5 ಗಂಟೆ ಯೂಟ್ಯೂಬರ್‌ ಸಮೀರ್‌ ವಿಚಾರಣೆ; ನಾಳೆಯೂ ಹಾಜರಾಗಲು ಪೊಲೀಸರ ಸೂಚನೆ

Dharmasthala case: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸೇರಿ ಮೂರು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್‌ ನೀಡಿದ್ದರು. ಹೀಗಾಗಿ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದ ಯೂಟ್ಯೂಬರ್‌ ಎಂ.ಡಿ. ಸಮೀರ್ ಸತತ 5 ಗಂಟೆ ವಿಚಾರಣೆ ಎದುರಿಸಿದ್ದಾನೆ. ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದಿರುವ ಪೊಲೀಸರು, ನಾಳೆಯೂ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

5 ಗಂಟೆ ಯೂಟ್ಯೂಬರ್‌ ಸಮೀರ್‌ ವಿಚಾರಣೆ, ನಾಳೆಯೂ ಬರಲು ಸೂಚನೆ

Prabhakara R Prabhakara R Aug 24, 2025 9:33 PM

ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣಕ್ಕೆ (Dharmasthala case) ಸಂಬಂಧಿಸಿ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದ ಯೂಟ್ಯೂಬರ್‌ ಎಂ.ಡಿ. ಸಮೀರ್ ಸತತ 5 ಗಂಟೆ ವಿಚಾರಣೆ ಎದುರಿಸಿದ್ದಾನೆ. ಇನ್ನು ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದಿರುವ ಪೊಲೀಸರು, ನಾಳೆಯೂ ವಿಚಾರಣೆಗೆ ಬರುವಂತೆ ಸೂಚಿಸಿ, ಮೊಬೈಲ್ ಹಾಗೂ ಯೂಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡಿದ್ದ ಲ್ಯಾಪ್‌ಟಾಪ್ ತರುವಂತೆ ತಿಳಿಸಿದ್ದಾರೆ.

ಪೊಲೀಸರು ಜುಲೈ 12ರಂದು ಸಮೀರ್​ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್​ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. ಇದಕ್ಕೂ ಮೊದಲೇ ಆಗಸ್ಟ್ 19ರಂದೇ ಸಮೀರ್​ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯವು ಯೂಟ್ಯೂಬರ್ ಸಮೀರ್​ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಸಮೀರ್​ ವಿಚಾರಣೆಗೆ ಸಹಕಾರ ನೀಡಬೇಕಾಗುತ್ತದೆ ಎಂದು ಕೋರ್ಟ್​ ಕಂಡೀಷನ್ಸ್ ಹಾಕಿತ್ತು.

ಹೀಗಾಗಿ ಇಂದು ಮಧ್ಯಾಹ್ನ ಯೂಟ್ಯೂಬರ್​ ಸಮೀರ್ ದಾಖಲೆಗಳು, ಮೂವರು ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದ. ಠಾಣೆಗೆ ಬಂದ ಸಮೀರ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಆತನ ವಿಡಿಯೋದ ಸ್ಕ್ರಿಪ್ಟ್ ಅನ್ನು ಕೊಟ್ಟು ಮತ್ತೆ ವಾಯ್ಸ್ ಓವರ್ ಕೊಡಲು ಪೊಲೀಸರು ಹೇಳಿದ್ದಾರಂತೆ. ಅದನ್ನು ಓದಿಸಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದಾರಂತೆ. ಸಮೀರ್ ವಾಯ್ಸ್​ ಅನ್ನು ಪೊಲೀಸರು ಎಫ್ಎಸ್ಎಲ್​ಗೆ ಕಳುಹಿಸಿದ್ದಾರೆ. ಈಗಾಗಲೇ ಪೊಲೀಸರು ಸತತ ಐದು ಗಂಟೆಗಳ ಕಾಲ ಒಟ್ಟು ಮೂರು ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದಾರೆ. ಒಂದು, AI ವಿಡಿಯೋ ಪ್ರಕರಣ, ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಪ್ರಕರಣ, ಉಜಿರೆ ಖಾಸಗಿ ಆಸ್ಪತ್ರೆ ಬಳಿ ಗಲಾಟೆ ಸಂಬಂಧ ಸುಮೊಟೊ ಪ್ರಕರಣ ದಾಖಲಾಗಿತ್ತು.