ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವರ್ಷದ ಬಳಿಕ ವೇಟ್‌ ಲಿಫ್ಟಿಂಗ್‌ಗೆ ಮರಳಲು ಸಜ್ಜಾದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು

Commonwealth Championships: ಕೆನಡಾದ ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಮೌಡ್ ಚಾರ್ರನ್ (63 ಕೆಜಿ) ಮತ್ತು ಮಲೇಷ್ಯಾದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತರಾದ ಅನಿಕ್ ಕಸ್ಡಾನ್ (60 ಕೆಜಿ) ಮತ್ತು ಅಜ್ನಿಲ್ ಬಿಡಿನ್ (65 ಕೆಜಿ), ನೈಜೀರಿಯಾದ ರಫಿಯಾಟು ಲಾವಾಲ್ (58 ಕೆಜಿ) ಮತ್ತು ಆಸ್ಟ್ರೇಲಿಯಾದ ಐಲೀನ್ ಸಿಕಮಾಟಾನಾ (86 ಕೆಜಿ) ಸೇರಿದಂತೆ ಪ್ರಮುಖ ವಿದೇಶಿ ಲಿಫ್ಟರ್‌ಗಳು ಕೂಡ ಭಾಗವಹಿಸಲಿದ್ದಾರೆ.

ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಚಾನು ಸ್ಫರ್ಧೆ

Abhilash BC Abhilash BC Aug 24, 2025 11:03 PM

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು(Mirabai Chanu) ಒಂದು ವರ್ಷದ ವಿರಾಮದ ನಂತರ ಸೋಮವಾರ (ಆಗಸ್ಟ್ 25, 2025) ಆರಂಭಗೊಳ್ಳಲಿರುವ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ(Commonwealth Championships) ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ವೇಟ್‌ ಲಿಫ್ಟಿಂಗ್‌ಗೆ ಮರಳಲಿದ್ದಾರೆ. ಜತೆಗೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ನಾಲ್ಕನೇ ಸ್ಥಾನ ಪಡೆದ ನಂತರ, ಮೀರಾಬಾಯಿ ಚಾನು ಯಾವುದೇ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ತವರಿನ ಪ್ರೇಕ್ಷಕರ ಮುಂದೆ ಶ್ರೇಷ್ಠ ಪ್ರದರ್ಶನದೊಂದಿಗೆ ಮತ್ತೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸದಲ್ಲಿದ್ದಾರೆ.

ಗಾಯಗಳಿಂದ ಚೇತರಿಸಿಕೊಂಡಿರುವ ಮತ್ತು ಕೆಲವು ತಾಂತ್ರಿಕ ಅಂಶಗಳಲ್ಲಿ ಬದಲಾವಣೆ ಮಾಡಿರುವ ಮಾಜಿ ವಿಶ್ವ ಚಾಂಪಿಯನ್, 31 ವರ್ಷದ ಮೀರಾಬಾಯಿ, ತೂಕ ವಿಭಾಗಗಳಲ್ಲಿ ಪರಿಷ್ಕರಣೆಯ ನಂತರ 48 ಕೆಜಿ ವಿಭಾಗದಲ್ಲಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಈ ಚಾಂಪಿಯನ್‌ಶಿಪ್‌ ಟೂರ್ನಿ ಸಹಾಯ ಮಾಡಲಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಜೊತೆಗೆ, ಮೀರಾಬಾಯಿ ಇನ್ನೂ ಪದಕ ಗೆದ್ದಿರದ ಏಷ್ಯನ್ ಕ್ರೀಡಾಕೂಟವು 2026 ರಲ್ಲಿ ಏಸ್ ಲಿಫ್ಟರ್‌ಗೆ ಈ ಟೂರ್ನಿ ಪ್ರಮುಖ ಆದ್ಯತೆಯಾಗಿರುತ್ತದೆ.

ಚಾನು ಮಾತ್ರವಲ್ಲದೆ, ಕಾಮನ್‌ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತೆ ಬಿಂದ್ಯಾರಾಣಿ ದೇವಿ (58 ಕೆಜಿ), ಕಂಚಿನ ಪದಕ ವಿಜೇತೆ ಹರ್ಜಿಂದರ್ ಕೌರ್ (69 ಕೆಜಿ), ರಿಷಿಕಾಂತ ಸಿಂಗ್ (60 ಕೆಜಿ), ಎನ್. ಅಜಿತ್ (71 ಕೆಜಿ) ಮತ್ತು ವಿ. ಅಜಯ್ ಬಾಬು (88 ಕೆಜಿ) ಗ್ಲಾಸ್ಗೋದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವ ಕೆಲವು ಪ್ರಮುಖ ಭಾರತೀಯ ವೇಟ್‌ಲಿಫ್ಟರ್‌ಗಳು ಈ ಟೂರ್ನಿಯಲ್ಲಿ ಸ್ಫರ್ಧಿಸಲಿದ್ದಾರೆ.

ಕೆನಡಾದ ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಮೌಡ್ ಚಾರ್ರನ್ (63 ಕೆಜಿ) ಮತ್ತು ಮಲೇಷ್ಯಾದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತರಾದ ಅನಿಕ್ ಕಸ್ಡಾನ್ (60 ಕೆಜಿ) ಮತ್ತು ಅಜ್ನಿಲ್ ಬಿಡಿನ್ (65 ಕೆಜಿ), ನೈಜೀರಿಯಾದ ರಫಿಯಾಟು ಲಾವಾಲ್ (58 ಕೆಜಿ) ಮತ್ತು ಆಸ್ಟ್ರೇಲಿಯಾದ ಐಲೀನ್ ಸಿಕಮಾಟಾನಾ (86 ಕೆಜಿ) ಸೇರಿದಂತೆ ಪ್ರಮುಖ ವಿದೇಶಿ ಲಿಫ್ಟರ್‌ಗಳು ಕೂಡ ಭಾಗವಹಿಸಲಿದ್ದಾರೆ.

ಇದನ್ನೂ ಓದಿ Cheteshwar Pujara: ಕ್ರಿಕೆಟ್‌ ನಿವೃತ್ತಿ ಘೋಷಿಸಿದ ಪೂಜಾರಗೆ ಶುಭ ಹಾರೈಸಿದ ಭಾರತದ ಮಾಜಿ ತಾರೆಯರು

ಸೀನಿಯರ್, ಜೂನಿಯರ್ ಮತ್ತು ಯೂತ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿರುವ ಈ ಕ್ರೀಡಾಕೂಟದಲ್ಲಿ 30 ದೇಶಗಳಿಂದ ಸುಮಾರು 290 ಲಿಫ್ಟರ್‌ಗಳು ಭಾಗವಹಿಸುವ ನಿರೀಕ್ಷೆಯಿದೆ.