ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: "ಧರ್ಮಸ್ಥಳದ ಮೊದಲ ಐದೂ ಸ್ಥಳಗಳಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ": ಅಧಿಕೃತ ಮಾಹಿತಿ ನೀಡಿದ ಪ್ರಣಬ್ ಮೊಹಾಂತಿ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಎಸ್‌ಐಟಿ ತಂಡ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಮೊದಲ ಐದು ಸ್ಥಳಗಳಲ್ಲಿ ಮಣ್ಣನ್ನು ಅಗೆದು ಕಳೇಬರಗಳಿಗಾಗಿ ಶೋಧ ನಡೆಸಲಾಗಿದ್ದು, ಇದುವರೆಗೆ ಯಾವುದೇ ಸಿಕ್ಕಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣ; ಯಾವುದೇ ಕಳೇಬರ ದಾಖಲೆಗಳು ಸಿಕ್ಕಿಲ್ಲ

ಘಟನೆಯ ದೃಶ್ಯ

Profile Sushmitha Jain Jul 30, 2025 8:04 PM

ಬೆಳ್ತಂಗಡಿ: ಧರ್ಮಸ್ಥಳದಲ್ಲಿ (Dharmasthala) ಶವಗಳನ್ನು ಹೂತಿದ್ದೇನೆ ಎಂದು ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಎಸ್‌ಐಟಿ ತಂಡ ಉತ್ಖನನ (Excavation) ಕಾರ್ಯವನ್ನು ಆರಂಭಿಸಿದೆ. ಮೊದಲ ಐದು ಸ್ಥಳಗಳಲ್ಲಿ ಮಣ್ಣನ್ನು ಅಗೆದು ಕಳೇಬರಗಳಿಗಾಗಿ ಶೋಧ ನಡೆಸಲಾಗಿದ್ದು, ಇದುವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು (SIT Officers) ತಿಳಿಸಿದ್ದಾರೆ.

ಬುಧವಾರ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಶೋಧ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ, ತನಿಖೆಯ ಪ್ರಗತಿಯನ್ನು ಪರಿಶೀಲಿಸಿದರು. ಐದನೇ ಸ್ಥಳದಲ್ಲಿ ಶೋಧ ನಡೆಸಿದ ಬಳಿಕ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. “ಐದನೇ ಸ್ಥಳದಲ್ಲೂ ಯಾವುದೇ ಕಳೇಬರ ಸಿಕ್ಕಿಲ್ಲ. ಉಳಿದ ಸ್ಥಳಗಳಲ್ಲಿ ಏನಾದರೂ ಸಿಗಬಹುದೆಂದು ಈಗಲೇ ಭವಿಷ್ಯ ನುಡಿಯಲಾಗದು” ಎಂದು ಮೊಹಾಂತಿ ಹೇಳಿದ್ದಾರೆ. ನಾಳೆಯಿಂದ ಉಳಿದ ಸ್ಥಳಗಳಲ್ಲಿ ಉತ್ಖನನ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಶೋಧ ಕಾರ್ಯ ಮುಕ್ತಾಯದ ಬಳಿಕ, ದೂರುದಾರನನ್ನು ಎಸ್‌ಐಟಿ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಗುತ್ತದೆ. ಮೊದಲ ದಿನದ ಕಾರ್ಯಾಚರಣೆಯಲ್ಲಿ ಮೊದಲ ಸ್ಥಳದಲ್ಲಿ ಯಾವುದೇ ಕಳೇಬರ ಸಿಕ್ಕಿರಲಿಲ್ಲ. ಆದರೆ ಎರಡು ಗುರುತಿನ ಚೀಟಿಗಳು (ಪ್ಯಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್) ಲಭ್ಯವಾಗಿದ್ದವು ಎಂದು ಧರ್ಮಸ್ಥಳದಿಂದ ಕಾಣೆಯಾದ ಅನನ್ಯಾ ಭಟ್‌ ಅವರ ತಾಯಿ ಸುಜಾತಾ ಭಟ್‌ ಅವರ ವಕೀಲ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ ಎಸ್‌ಐಟಿ ಈ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ಮಾಹಿತಿಯು ವಿಶ್ವಾಸಾರ್ಹವಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ನಂತಹ ವಸ್ತುಗಳನ್ನು ಲಭ್ಯವಾಗಿದ್ದು, ಅವುಗಳಲ್ಲಿ ಒಂದು ಪುರುಷನ ಹೆಸರು ಮತ್ತು ಇನ್ನೊಂದು ಲಕ್ಷ್ಮೀ ಎಂಬ ಮಹಿಳೆಯ ಹೆಸರು ಇರುವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್‌ಐಟಿ ಈ ಪ್ರಮುಖ ಸುಳಿವುಗಳನ್ನು ಅತ್ಯಂತ ತುರ್ತಾಗಿ ಗಮನಿಸಬೇಕು. ಎಸ್‌ಐಟಿ ಪ್ರದರ್ಶಿಸಿದ ಗಂಭೀರತೆ ನಮಗೆ ಹೊಸ ಭರವಸೆಯನ್ನು ನೀಡಿದೆ ಎಂದು ವಕೀಲ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.

ಈ ಸುದ್ದಿಯನ್ನು ಓದಿ: Dharmasthala: ನ್ಯಾಯಾಂಗ ನಿಯಮ ಉಲ್ಲಂಘನೆ ಮಾಡುತ್ತಿರುವುದೇಕೇ? ಯುಟ್ಯೂಬ್‌ ವಾಹಿನಿಗೆ ಕರ್ನಾಟಕ ಹೈಕೋರ್ಟ್‌ ತರಾಟೆ

ಮಂಜುನಾಥ್‌ ಅವರ ಪತ್ರಿಕಾ ಪ್ರಕಟಣೆಯು ಎಸ್‌ಐಟಿ ದೃಢೀಕರಣಕ್ಕೂ ಮುನ್ನ ಬಿಡುಗಡೆಯಾಗಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಆರೋಪಗಳು ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಷಡ್ಯಂತ್ರವೆಂದು ಭಕ್ತರು ಕಿಡಿಕಾರುತ್ತಿದ್ದಾರೆ. ಎಸ್‌ಐಟಿ ತನಿಖೆಯು ಈ ರಹಸ್ಯ ಸಮಾಧಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಉಳಿದ ಸ್ಥಳಗಳ ಶೋಧ ಕಾರ್ಯವು ಗುರುವಾರ ಬೆಳಗ್ಗೆ ಮತ್ತೆ ಆರಂಭವಾಗಲಿದ್ದು, ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಗಮನ ಸೆಳೆಯಲಿದೆ.