Mahesh shetty thimarodi: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ; ಮಹೇಶ್ ತಿಮರೋಡಿ ಜಾಮೀನು ಅರ್ಜಿ ವಜಾ
Mangaluru News: ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ತಿಮರೋಡಿ, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅವರಿಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

-

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh shetty thimarodi), ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸರಕಾರದ ಪರ ವಕೀಲರು ಮಂಡಿಸಿದ ವಾದವನ್ನು ಎತ್ತಿ ಹಿಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು ಅರ್ಜಿ ವಜಾ ಮಾಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ತಿಮರೋಡಿ, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅವರಿಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತ ವಾದ ಮಂಡಿಸಿದ್ದಾರೆ. ಸೆ.16ರಂದು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ ನಡೆಸಿದಾಗ ಎರಡು ತಲವಾರು, ಏರ್‌ಗನ್ ಪತ್ತೆಯಾಗಿತ್ತು. ಈ ಕಾರಣದಿಂದ ವಿಚಾರಣೆಗೆ ಹಾಜರಾಗಬೇಕೆಂದು ಎಸ್‌ಐಟಿ ನೋಟೀಸ್ ಜಾರಿ ಮಾಡಿತ್ತು. ತಿಮರೋಡಿ ಗಡೀಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ | Kodagu school Tragedy: ಮಡಿಕೇರಿ ಶಾಲೆ ಅಗ್ನಿ ದುರಂತ; 51 ಮಕ್ಕಳನ್ನು ರಕ್ಷಿಸಿದ ಇಬ್ಬರು ಧೈರ್ಯವಂತ ಬಾಲಕರು!
ಅಪಚಾರ ಮಾಡುವವರಿಗೆ ಹುಚ್ಚು ಹಿಡಿಸುತ್ತೇನೆ: ಪಿಲಿಚಂಡಿ ದೈವದ ನುಡಿ

ಮಂಗಳೂರು: ದೈವಾರಾಧನೆಯನ್ನು ʼಕಾಂತಾರ ಚಾಪ್ಟರ್ 1ʼ (Kantara Chapter 1) ಸಿನಿಮಾದಲ್ಲಿ ಬಿಂಬಿಸಿರುವ ಹಾಗೂ ಅದನ್ನು ನೋಡಿ ಅನುಕರಣೆ ಮಾಡುತ್ತಿರುವವರ ಬಗ್ಗೆ ದೈವದ ಮುಂದೆ ಭಕ್ತರು ಅಳಲು ತೋಡಿಕೊಂಡಿದ್ದು, ʼನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ, ಹುಚ್ಚು ಹಿಡಿಯುವಂತೆ ಮಾಡುತ್ತೇನೆʼ ಎಂದು ದೈವ ನುಡಿ ನೀಡಿದೆ. ಮಂಗಳೂರು (Mangaluru) ಬಳಿ ಪೆರಾರ ಕ್ಷೇತ್ರದಲ್ಲಿ ನಡೆದ ಪಿಲಿಚಂಡಿ ದೈವದ ನೇಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ʼಕಾಂತಾರ ಚಾಪ್ಟರ್ 1ʼ ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾ ಥಿಯೇಟರ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೈವದ ಅನುಕರಣೆ ಮಾಡುತ್ತಿರುವವರ ವಿಡಿಯೋ ಹರಿದಾಡುತ್ತಿವೆ. ‘ಕಾಂತಾರ’ ಸಿನಿಮಾದಲ್ಲಿ ದೈವದ ಚಿತ್ರಣ ಮತ್ತು ವಿವಿಧೆಡೆ ದೈವದ ಅಪಹಾಸ್ಯ ಮಾಡುತ್ತಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೆರಾರ ಕ್ಷೇತ್ರದಲ್ಲಿ ನಡೆದ ಪುದರ್ ಮೆಚ್ಚಿ ನೇಮದಲ್ಲಿ ಪಿಲಿಚಂಡಿ ಹಾಗೂ ಬಲವಂಡಿ ದೈವದ ಮುಂದೆ ಪ್ರಾರ್ಥನೆ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ವೇಳೆ ಭಕ್ತರಿಗೆ ಸಮಾಧಾನದ ನುಡಿಯನ್ನು ಪಿಲಿಚಂಡಿ ದೈವದ ನುಡಿ ನುಡಿದಿದೆ.
ಇದನ್ನೂ ಓದಿ: Kantara: Chapter 1: ನೀವು ದೈವಗಳ ಅನುಕರಣೆ ಮಾಡೋದು ಸರೀನಾ?; ಕಾಂತಾರ-1 ಚಿತ್ರತಂಡದ ವಿರುದ್ಧ ನೆಟ್ಟಿಗರ ಆಕ್ರೋಶ
ʼನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ಅವರಿಗೆ ಹುಚ್ಚು ಹಿಡಿಯುವಂತೆ ಮಾಡುತ್ತೇನೆ. ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ. ಅವರಿಗೆ ಬುದ್ಧಿ ಬರುವಂತೆ ಮಾಡುತ್ತೇನೆ. ಅವರು ಸಂಗ್ರಹಿಸಿದ ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆʼ ಎಂದು ದೈವ ನುಡಿದಿದೆ. ʼಇನ್ನು ಮುಂದೆ ಎಲ್ಲಾ ದೇವಸ್ಥಾನಗಳಲ್ಲಿ ನಡೆಯು ನೇಮಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆʼ ಎಂದು ದೈವ ಆಕ್ರೋಶಪೂರ್ವಕವಾಗಿ ನುಡಿದಿದೆ ಎಂದು ತಿಳಿದುಬಂದಿದೆ.