ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SWRWU: ಸೌತ್ ವೆಸ್ಟರ್ನ್ ರೈಲ್ವೆ ವರ್ಕರ್ಸ್ ಯೂನಿಯನ್‌ಗೆ ನೋಂದಣಿ ಪ್ರಮಾಣಪತ್ರ

ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ.ಎ.ಎಂ.ಡಿ’ಕ್ರೂಜ್ ಅವರು ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸತತ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕಾರ್ಮಿಕ ಚಳವಳಿಯಲ್ಲಿನ ಅವರ ಅನುಭವ ಸಂಘಕ್ಕೆ ಪ್ರೇರಣೆಯಾಗಿದೆ. ರೈಲ್ವೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು, ಸೇವಾ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುವುದು ಹಾಗೂ ನೌಕರರಿಗೆ ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿಕೊಡುವುದು ಸಂಘದ ಪ್ರಮುಖ ಉದ್ದೇಶಗಳಾಗಿವೆ.

ರೈಲ್ವೆ ನೌಕರರ ಹಕ್ಕು, ಘನತೆ ಮತ್ತು ಕಲ್ಯಾಣಕ್ಕೆ ಆದ್ಯತೆ

-

Profile
Ashok Nayak Oct 29, 2026 2:42 PM

ಹುಬ್ಬಳ್ಳಿ: ದಕ್ಷಿಣ ಪಶ್ಚಿಮ ರೈಲ್ವೆ ನೌಕರರ ಹಕ್ಕುಗಳು, ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಸ್ಥಾಪನೆ ಯಾದ ಸೌತ್ ವೆಸ್ಟರ್ನ್ ರೈಲ್ವೆ ವರ್ಕರ್ಸ್ ಯೂನಿಯನ್‌ (SWRWU) ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರ ಪಡೆದಿದೆ. ಹುಬ್ಬಳ್ಳಿಯ ಕಾರ್ಮಿಕ ಕಚೇರಿ, ವಿಭಾಗ–1ರ ವ್ಯಾಪ್ತಿಯ ಸಂಬಂಧಿತ ಕಾರ್ಮಿಕ ಪ್ರಾಧಿಕಾರದಿಂದ ನೋಂದಣಿ ದೊರೆತಿರುವುದು ಸಂಘದ ಕಾರ್ಯ ಚಟುವಟಿಕೆಗಳಿಗೆ ಮಹತ್ವದ ಮೈಲಿಗಲ್ಲಾಗಿದೆ.

ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ.ಎ.ಎಂ.ಡಿ’ಕ್ರೂಜ್ ಅವರು ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸತತ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕಾರ್ಮಿಕ ಚಳವಳಿಯಲ್ಲಿನ ಅವರ ಅನುಭವ ಸಂಘಕ್ಕೆ ಪ್ರೇರಣೆಯಾಗಿದೆ. ರೈಲ್ವೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು, ಸೇವಾ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸು ವುದು ಹಾಗೂ ನೌಕರರಿಗೆ ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿಕೊಡುವುದು ಸಂಘದ ಪ್ರಮುಖ ಉದ್ದೇಶಗಳಾಗಿವೆ.

ಇದನ್ನೂ ಓದಿ: Hubli-Varanasi Train: ʼಹುಬ್ಬಳ್ಳಿ-ವಾರಾಣಸಿ' ರೈಲು ಸಂಚಾರ ವಾರದಲ್ಲಿ 3 ದಿನ ವಿಸ್ತರಣೆ; ಕೇಂದ್ರ ರೈಲ್ವೆ ಸಚಿವ ಭರವಸೆ

ಸಂಘದ ವಲಯಾಧ್ಯಕ್ಷರಾಗಿ ಕಾಂ. ಆರ್ಥರ್ ಫರ್ನಾಂಡಿಸ್, ಕಾರ್ಯಾಧ್ಯಕ್ಷರಾಗಿ ಕಾಂ. ಗೋಪಾಲ ಟಿ., ವಲಯ ಉಪಾಧ್ಯಕ್ಷರಾಗಿ ಕಾಂ. ವೇಣುಗೋಪಾಲ್ ಎಂ., ಪ್ರಧಾನ ಕಾರ್ಯದರ್ಶಿಯಾಗಿ ಕಾಂ. ಆಂಥೋನಿ ಜೆನಿ ಡಿ’ಕ್ರೂಜ್ ಹಾಗೂ ವಲಯ ಖಜಾಂಚಿಯಾಗಿ ಕಾಂ. ಫ್ರಾನ್ಸಿಸ್ ಡಿಕ್ಸನ್ ಕೊರಿಯಾ ಕಾರ್ಯನಿರ್ವಹಿಸಲಿದ್ದಾರೆ.

ಸಂಘದ ವಲಯಾಧ್ಯಕ್ಷ ಕಾಂ. ಆರ್ಥರ್ ಫರ್ನಾಂಡಿಸ್ ಮಾತನಾಡಿ, ರೈಲ್ವೆ ನೌಕರರ ಕಲ್ಯಾಣ ಮತ್ತು ಘನತೆಯೇ ಸಂಘದ ಪ್ರಮುಖ ಆದ್ಯತೆಯಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ನ್ಯಾಯ ಸಮ್ಮತ ಹಕ್ಕುಗಳಿಗಾಗಿ ಪ್ರಾಮಾಣಿಕವಾಗಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಕಾಂ. ಆಂಥೋನಿ ಜೆನಿ ಡಿ’ಕ್ರೂಜ್ ಮಾತನಾಡಿ, ಸೇವಾ ನಿಯಮಗಳ ಕುರಿತು ಅರಿವು ಮೂಡಿಸುವುದು, ನೌಕರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ನಿರಂತರ ಸೇವೆಯ ಮೂಲಕ ನೌಕರರ ವಿಶ್ವಾಸ ಗಳಿಸಲು ಶ್ರಮಿಸಲಾಗುವುದು ಎಂದರು.

ದಕ್ಷಿಣ ಪಶ್ಚಿಮ ರೈಲ್ವೆಯ ಎಲ್ಲ ವಿಭಾಗಗಳು ಮತ್ತು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಸಂಘಕ್ಕೆ ಸೇರ್ಪಡೆಗೊಂಡು ಸಂಘಟಿತ ಹೋರಾಟಕ್ಕೆ ಕೈಜೋಡಿಸಬೇಕು ಎಂದು SWRWU ಆಹ್ವಾನಿಸಿದೆ. ಅಸ್ತಿತ್ವದಲ್ಲಿರುವ ಇತರ ಕಾರ್ಮಿಕ ಸಂಘಟನೆಗಳೊಂದಿಗೆ ವೈಮನಸ್ಸು ಬೆಳೆಸದೆ, ಪರಸ್ಪರ ಗೌರವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ನೌಕರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವುದು ಸಂಘದ ಆಶಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.