ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯದ 16 ಸಿಹಿ ಖಾದ್ಯ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ; ಅವಧಿ ಮೀರಿದ ವಸ್ತುಗಳ ಜಪ್ತಿ

ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಸಿಹಿ ಖಾದ್ಯ ತಯಾರಿಕಾ ಕೇಂದ್ರೀಕೃತ ಘಟಕಗಳ ಮೇಲೆ ದಾಳಿ ನಡೆಸಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಅವಧಿ ಮೀರಿದ, ಬ್ರಾಂಡಿಂಗ್‌ ಕಾನೂನು ಉಲ್ಲಂಘಿಸಿದ ಸುಮಾರು 5.99 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ಜಪ್ತಿ ಮಾಡಿದ್ದಾರೆ.

ಸಿಹಿ ಖಾದ್ಯ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ

ಇಂಟರ್ ನೆಟ್ ಚಿತ್ರ -

Vishakha Bhat Heggar
Vishakha Bhat Heggar Sep 1, 2026 8:54 AM

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಸಿಹಿ ಖಾದ್ಯ ತಯಾರಿಕಾ ಕೇಂದ್ರೀಕೃತ ಘಟಕಗಳ ಮೇಲೆ ದಾಳಿ ನಡೆಸಿರುವ ಆಹಾರ (Food Safety Department) ಸುರಕ್ಷತಾ ಇಲಾಖೆ ಅಧಿಕಾರಿಗಳು, ಅವಧಿ ಮೀರಿದ, ಬ್ರಾಂಡಿಂಗ್‌ ಕಾನೂನು ಉಲ್ಲಂಘಿಸಿದ ಸುಮಾರು 5.99 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ಜಪ್ತಿ ಮಾಡಿದ್ದಾರೆ. ತಿನಿಸುಗಳು ಹಾಗೂ ಪದಾರ್ಥಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ -ಧಾರವಾಡದಲ್ಲಿ ತಪಾಸಣೆ ನಡೆಸಲಾಗಿದೆ. ಒಟ್ಟು 16 ಸಿಹಿ ತಿಂಡಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ತಪಾಸಣೆ ವೇಳೆ 367 ಕೆ.ಜಿ 'ರೆಡಿ ಟು ಈಟ್‌' ಸೇವರಿಸ್‌, 4 ಕೆ.ಜಿ ಕೋಕಾ ಪೌಡರ್‌, 4.5 ಕೆ.ಜಿ ಕ್ರ್ಯಾಕ್ಡ್ ಕೋಕಾ ಬೀನ್ಸ್‌ ಹಾಗೂ 6 ಕೆ.ಜಿ ಖೋವಾ ಹಾಗೂ 196 ಕೆ.ಜಿ ಸೋಂಪು ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.

ಸಿಹಿ ತಿಂಡಿಗಳು, ಅಡುಗೆ ಎಣ್ಣೆ, ತಾಜಾ ಎಣ್ಣೆ, ಮೊಸರು, ಬೇಳೆ, ಕಡಲೆ, ಚನ್ನಾ, ಜಿಲೇಬಿ, ಖೋವಾ ಹಾಗೂ ಟೀ ಪೌಡರ್‌ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವ ಸಲುವಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲಾಲ್ ಸ್ವೀಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬನಾನಾ ಚಿಪ್ಸ್, ಚಕ್ಲಿ ಮಸಾಲಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಸುಮಾರು 60 ಕೆ.ಜಿ ಪ್ರಮಾಣದ ಪ್ಯಾಕೆಟ್‌ಗಳ ಮೇಲೆ ತಯಾರಕರ ಹೆಸರು ಮತ್ತು ವಿಳಾಸ, ಎಫ್‌ಎಸ್‌ಎಸ್‌ಎಐ ಪರವಾನಗಿ ಸಂಖ್ಯೆ ಸೇರಿದಂತೆ ಕಡ್ಡಾಯ ಲೇಬಲ್‌ ವಿವರ ನಮೂದಿಸದೇ ಇರುವುದರಿಂದ ತಪ್ಪು ಬ್ರಾಂಡಿಂಗ್‌ ಕಂಡು ಬಂದ ಹಿನ್ನೆಲೆಯಲ್ಲಿ‌ ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

ಪರೀಕ್ಷಾ ಪಾರದರ್ಶಕತೆ, ಸಕ್ಕರೆ ದಾಸ್ತಾನು ಮೇಲೆ ನಿಗಾವಹಿಸಿ; ಶಿಕ್ಷಣ-ಆಹಾರ ಇಲಾಖೆ ಅಧಿಕಾರಿಗಳಿಗೆ ಸಚಿವ ಪ್ರಲ್ಹಾದ್‌ ಜೋಶಿ ನಿರ್ದೇಶನ

ಯಶವಂತಪುರದ ಆಶಾ ಸ್ವೀಟ್ಸ್‌ನಲ್ಲಿ, ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂಬ ಶಂಕೆ ಹಿನ್ನಲೆಯಲ್ಲಿ ಸುಮಾರು 49 ಕೆಜಿ ಚಹಾ ಪುಡಿ, 20 ಕೆಜಿ ಖೋವಾ ಅಥವಾ ಕಲಾಕಂದ್ ಮತ್ತು 2.5 ಕೆಜಿ ಪಿಸ್ತಾವನ್ನು ವಶಕ್ಕೆ ಪಡೆದು ಇದರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಮಾಗಡಿ ರಸ್ತೆಯಲ್ಲಿರುವ ಬಿಕಾನೆರ್ ಸ್ವೀಟ್ಸ್‌ನಲ್ಲಿ, ಅನೈರ್ಮಲ್ಯ ಪರಿಸ್ಥಿತಿಗಳು ಮತ್ತು ಗಂಭೀರ ಲೇಬಲಿಂಗ್ ದೋಷಗಳು ಕಂಡುಬಂದಿದ್ದು, ಮಳಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.