Food Poison: ಹಾವೇರಿ: ಹಾಸ್ಟೆಲ್ ಊಟ ಸೇವಿಸಿ ವಿದ್ಯಾರ್ಥಿನಿಯರು ಅಸ್ವಸ್ಥ
ಹಾಸ್ಟೆಲ್ ಗೆ ಅನ್ನಪೂರ್ಣೇಶ್ವರಿ ಖಾಸಗಿ ಮೆಸ್ ನಿಂದ ಆಹಾರ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು ಕಳಪೆ ಆಹಾರ ಪದಾರ್ಥಗಳು ನೀಡಲಾಗಿತ್ತು ಎಂದು ಮೆಸ್ ಮಾಲೀಕರು ತಪ್ಪನ್ನು ಒಪ್ಪಿಕೊಂಡು ವೈದ್ಯಕೀಯ ವೆಚ್ಚ ನಾವೇ ಬರಿಸುತ್ತೇವೆ. ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
-
ಹಾವೇರಿ: ನಗರ ಸಮೀಪದ ದೇವಗಿರಿ ಗ್ರಾಮದಲ್ಲಿರುವ ಸರಕಾರಿ ಇಂಜಿನಿಯರಿಂಗ್ ಕಾಲೇಜನ ಹಾಸ್ಟೆಲ್ ವಿದ್ಯಾರ್ಥಿಗಳು ಶನಿವಾರ ರಾತ್ರಿ ಕಳಪೆ ಊಟ ಸೇವನೆ ಮಾಡಿದ್ದರಿಂದ 14 ಕ್ಕೂ ಹೆಚ್ಚು ಇಂಜಿನಿಯ ರಿಂಗ್ ಕಾಲೇಜ್ ವಿದ್ಯಾರ್ಥಿನಿಯರು ವಾಂತಿ, ಭೇದಿ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಗ್ಯದಲ್ಲಿ ತೀರಾ ಏರುಪೇರು ಉಂಟಾಗಿ ನಗರದ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿನಿಯರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಶನಿವಾರ ರಾತ್ರಿ ಹೋಳಿಗೆ ರೈಸ್ ಸಾಂಬಾರ ಊಟ ಮಾಡಿದ್ದ ವಿದ್ಯಾರ್ಥಿಗಳು ಭಾನುವಾರ ಬೆಳಿಗ್ಗೆ ಸಮಯ ತೀರಾ ಹೊಟ್ಟೆ ನೋವು, ವಾಂತಿಭೇದಿ ಕಾಣಿಸಿಕೊಂಡಿದ್ದು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕ್ಸಿತೆ ನೀಡಲಾಗಿದೆ.
ಇದನ್ನೂ ಓದಿ: Haveri News: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಉರ್ದು ಶಾಲೆ ಶಿಕ್ಷಕನಿಗೆ ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ
ಹೊಟ್ಟೆ ನೋವು ವಾಂತಿಭೇದಿಯಿಂದ ಅಸ್ವಸ್ಥವಾಗಿದ್ದಲ್ಲದೆ ಒಬ್ಬರಂತೆ ಒಬ್ಬರಲ್ಲಿ ಹೊಟ್ಟೆ ನೋವು ಕಾಣಿಸುತ್ತಿದ್ದಂತೆ ಆತಂಕಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಹಾಸ್ಟೆಲ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಂಬಂಧಿಸಿದ ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿದ್ಯಾರ್ಥಿನಿಯರು ಆಸ್ಪತ್ರೆ ಸೇರುತ್ತಿದ್ದಂತೆ ಆಸ್ಪತ್ರೆಗೆ ಧೌಡಾಯಿಸಿದ ಹಾಸ್ಟೆಲ್ ಸಿಬ್ಬಂದಿ ಚಿಕಿತ್ಸೆ ಕೊಡಿಸಿದ್ದು ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ತುರ್ತು ಪರಿಶೀಲನೆ ಕಾರ್ಯ ನಡೆಸಿದ್ದು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಹಾಸ್ಟೆಲ್ ಗೆ ಅನ್ನಪೂರ್ಣೇಶ್ವರಿ ಖಾಸಗಿ ಮೆಸ್ ನಿಂದ ಆಹಾರ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು ಕಳಪೆ ಆಹಾರ ಪದಾರ್ಥಗಳು ನೀಡಲಾಗಿತ್ತು ಎಂದು ಮೆಸ್ ಮಾಲೀಕರು ತಪ್ಪನ್ನು ಒಪ್ಪಿಕೊಂಡು ವೈದ್ಯಕೀಯ ವೆಚ್ಚ ನಾವೇ ಬರಿಸುತ್ತೇವೆ. ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಬೇಕು ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.