Janivara Row: ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಇಬ್ಬರು ಸಿಬ್ಬಂದಿ ಮೇಲೆ ಎಫ್‌ಐಆರ್
ನಿನ್ನೆ ನಡೆದ ನೀಟ್ ಪರೀಕ್ಷೆಯ ವೇಳೆಯಲ್ಲಿ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಶ್ರೀಪಾದ್ ಎಂಬವರ ಜನಿವಾರವನ್ನು (Janivara Row) ತೆಗೆಸಿದ್ದರು. ಇದನ್ನು ವಿದ್ಯಾರ್ಥಿ ಪ್ರತಿಭಟಿಸಿದಾಗ, "ನೀಟ್ ಪರೀಕ್ಷೆ ಬೇಕಿದ್ದರೆ ಜನಿವಾರ ತೆಗೆದು ಬಾ" ಎಂದಿದ್ದರು. ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ.

ಜನಿವಾರ ಮರುಧಾರಣೆ ಮಾಡಿದ ಅಭ್ಯರ್ಥಿ

ಕಲಬರುಗಿ : ಕಲಬುರಗಿಯಲ್ಲಿ (Kalaburagi news) ನೀಟ್ ಪರೀಕ್ಷೆ (NEET exam) ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ (Janivara Row) ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ (FIR) ದಾಖಲಾಗಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಗಳಾದ ಶರಣ ಗೌಡ, ಗಣೇಶ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರೀಕ್ಷಾರ್ಥಿ ಶ್ರೀಪಾದ್ ಪಾಟೀಲ್ ದೂರು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದ್ದು, ಬಿಎನ್‌ಎಸ್ ಕಾಯ್ದೆ 298 ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಿನ್ನೆ ನಡೆದ ನೀಟ್ ಪರೀಕ್ಷೆಯ ವೇಳೆಯಲ್ಲಿ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಶ್ರೀಪಾದ್ ಎಂಬವರ ಜನಿವಾರವನ್ನು ತೆಗೆಸಿದ್ದರು. ಇದನ್ನು ವಿದ್ಯಾರ್ಥಿ ಪ್ರತಿಭಟಿಸಿದಾಗ, "ನೀಟ್ ಪರೀಕ್ಷೆ ಬೇಕಿದ್ದರೆ ಜನಿವಾರ ತೆಗೆದು ಬಾ" ಎಂದಿದ್ದರು. ಪರೀಕ್ಷಾರ್ಥಿ ಕೊನೆಗೆ ಜನಿವಾರ ತೆಗೆದಿಟ್ಟು ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಬಳಿಕ ಕೇಂದ್ರದ ಆವರಣದಲ್ಲಿಯೇ ಶಾಸ್ತ್ರೋಕ್ತವಾಗಿ ಜನಿವಾರ ಮರುಧಾರಣೆ ಮಾಡಲಾಗಿತ್ತು.
ಈ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರವಾಗಿ ವಿರೋಧಿಸಿ, ಖಂಡಿಸಿದೆ. ಈ ಘಟನೆಯ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರ ಗಮನಕ್ಕೆ ಬಂದಿದೆ. ಈ ಘಟನೆ ಮತ್ತೊಮ್ಮೆ ನಡೆದಿರುವುದು ದುರದೃಷ್ಟಕರ. ಸರ್ಕಾರ ಕ್ರಮ ವಹಿಸಿದ್ದರೂ ಈ ರೀತಿ ಆಗಿದ್ದು ಖಂಡನೀಯ. ಈ ಬಗ್ಗೆ ನಾವು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.
ಇದನ್ನೂ ಓದಿ: NEET Exam: ಸಿಇಟಿ ಬಳಿಕ ನೀಟ್ ಪರೀಕ್ಷೆ ವೇಳೆಯೂ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು; ಕಲಬುರಗಿಯಲ್ಲಿ ಎಡವಟ್ಟು