Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!
Gilli Nata: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭಗೊಂಡಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾ ಇರೋದು ನಟ ಗಿಲ್ಲಿ ಬಗ್ಗೆ. ಈ ಸೀಸನ್ ವಿನ್ನರ್ ಗಿಲ್ಲಿ ಅಂತ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಗಿಲ್ಲಿ ಕ್ರೇಜ್ ಜೋರಾಗಿದೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಚಟುವಟಿಕೆ ನೀಡಿದ್ದರು. ಸ್ಪರ್ಧಿಗಳು ತಮ್ಮ ಜೀವನದ ಖುಷಿ, ದುಃಖವನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ (Bigg Boss Kannada Grand Finale) ಕ್ಷಣಗಣನೆ ಆರಂಭಗೊಂಡಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾ ಇರೋದು ನಟ ಗಿಲ್ಲಿ ಬಗ್ಗೆ. ಈ ಸೀಸನ್ ವಿನ್ನರ್ (Gilli Nata) ಗಿಲ್ಲಿ ಅಂತ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಗಿಲ್ಲಿ ಕ್ರೇಜ್ ಜೋರಾಗಿದೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಚಟುವಟಿಕೆ ನೀಡಿದ್ದರು. ಸ್ಪರ್ಧಿಗಳು ತಮ್ಮ ಜೀವನದ ಖುಷಿ, ದುಃಖವನ್ನು ಹಂಚಿಕೊಂಡಿದ್ದಾರೆ. ಆಗ ಗಿಲ್ಲಿ ನಟ ಅವರು ಅನ್ನ ಕದ್ದು ತಿಂದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಶಿವಣ್ಣ (Shivanna) ಬಗ್ಗೆಯೂ ಮೆಚ್ಚುಗೆ ಮಾತನಾಡಿದ್ದರು.
ಸಾಕಷ್ಟು ಜೀವನದಲ್ಲಿ ಅನುಭವಿಸಿದೆ
ಗಿಲ್ಲಿ ಮೊದಲಿಗೆ ತಾನು ಸಾಕಷ್ಟು ಜೀವನದಲ್ಲಿ ಅನುಭವಿಸಿದ್ದೆ ಎಂದು ಹೇಳಿಕೊಂಡರು. ಬೆಂಗಳೂರಿಗೆ ಬರುತ್ತೇನೆ. ಹಳ್ಳಿಯಿಂದ ಬೆಂಗಳೂರಿಗೆ ಬಂದೋರಿಗೆ ಕಷ್ಟ ಏನು ಎಂದು ಗೊತ್ತಾಗುತ್ತದೆ. ಆಗ ನಿರ್ದೇಶಕನಾಗಬೇಕು ಅನ್ನೋ ಕನಸು ಇತ್ತು. ಸೆಟ್ ಕೆಲಸ ಮಾಡ್ತೇನೆ. ಇರೋಕೆ ಜಾಗ, ಊಟಕ್ಕೆ ಸಮಸ್ಯೆ ಆಗುತ್ತದೆ.
ಹತ್ತು ದಿನ ಪಾರ್ಕ್‌ನಲ್ಲಿ ಇರುತ್ತಿದ್ದೆ, ನಮಗೆ ಪರಿಚಯ ಆಗಿರೋರು ಸಿಕ್ಕಿದರೆ ಅವರ ಮನೆಗೆ ಹೋಗಿ ಒಂದು ದಿನ ಇರುತ್ತಿದ್ದೆ. ಏನೇ ಮಾಡಿದ್ರೂ ಹಣ ಕೈಯಲ್ಲಿ ಇರ್ತಾ ಇರಲಿಲ್ಲ ಬಾಡಿಗೆ ಕಟ್ಟಲು ಹಣ ಇರ್ತಾ ಇರಲಿಲ್ಲ ಎಂದಿದ್ದಾರೆ.
ಕದ್ದು ತಿಂದಿದೀನಿ
ಶೂಟಿಂಗ್ ಕೆಲಸ ಮಾಡಬೇಕು, ಅಸಿಸ್ಟೆಂಟ್ ಡೈರೆಕ್ಟರ್ ಆಗಬೇಕು, ಡೈರೆಕ್ಟರ್ ಆಗಬೇಕು ಎಂದುಕೊಂಡೆ. ಆದರೆ ಇಲ್ಲಿ ಊಟ ಮಾಡೋಕೆ ಏನೂ ಇರಲಿಲ್ಲ. ಪಕ್ಕದ ರೂಮ್‌ನಲ್ಲಿ ಅನ್ನ ಕದ್ದು ತಿಂದಿದೀನಿ. ಜೀವನ ಹೀಗೆ ಇದೆಯಲ್ಲ ಎಂದು ಬೇಸರ ಆಗಿತ್ತು. . ಕೊರೊನಾ ಟೈಮ್‌ನಲ್ಲಿ ನಾನು ಯುಟ್ಯೂಬ್ ಚಾನೆಲ್ ಒಪನ್ ಮಾಡ್ತೀನಿ.
ಅಲ್ಲಿಂದ ನನ್ನ ಜೀವನ ಮೇಲೆ ಬರುತ್ತದೆ ಒಂದು ಕಾರ್ಯಕ್ರಮದಲ್ಲಿ ನಾನು ನಿನ್ನ ಅಭಿಮಾನಿ ಎಂದಿದ್ದು ಶಿವಣ್ಣ. ಅವರು ಹೇಳಿದ ಮಾತು ನನಗೆ ದೊಡ್ಡ ಅವಾರ್ಡ್ ಸಿಕ್ಕಿದಷ್ಟೇ ಖುಷಿ ಆಯ್ತು.ನನ್ನ ಡ್ಯಾನ್ಸ್ ಹುಕ್ ಸ್ಟೆಪ್ ಮಾಡ್ತಾರೆ. ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದಿದ್ದಾರೆ ಗಿಲ್ಲಿ.
Shivanna 🫶🏻🥹 Gilli ❤️📈#BBK12 #GilliNata
— 𝑪𝒉𝒂𝒄𝒐 (@chaco_bob1) January 16, 2026
pic.twitter.com/3Llm3sdDKh
ಬಿಗ್ ಬಾಸ್ ಬಂದ್ಮೇಲೆ ನನ್ನ ಯಶಸ್ಸು ಹೆಚ್ಚಾಗಿದೆ. ಮೊನ್ನೆ ಜನ ಬಂದಾಗ ಖುಷಿ ಆಯ್ತು ಯಾರೋ ಒಬ್ಬರು ಟ್ಯಾಟೂ ಹಾಕಿಸಿಕೊಂಡಿದ್ದರು. ಈಗ ಕನ್ನಡಿಯಲ್ಲಿ ಮುಖ ನೋಡಿದ್ರೆ, ನಗು ಬರುವುದು. ನನ್ನ ಅಪ್ಪ ಅಮ್ಮ ಇಲ್ಲಿ ತನಕ ಬಂದಿದ್ದಾರೆ. ಅದು ಇನ್ನೂ ಖುಷಿ ಎಂದರು.
ಇದನ್ನೂ ಓದಿ: Bigg Boss Kannada 12: ಈ ಸ್ಪರ್ಧಿಗೆ ಹನುಮಂತ ಲಮಾಣಿ ಫುಲ್ ಸಪೋರ್ಟ್! ಮತ ಹಾಕುವಂತೆ ಮನವಿ ಮಾಡಿದ ಜವಾರಿ ಹುಡುಗ
ಶಿವಣ್ಣ ಮೆಚ್ಚುಗೆ
ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್ಕುಮಾರ್ ಭವಿಷ್ಯ ನುಡಿದಿದ್ದಾರೆ.‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯ ಶಿವರಾಜ್ಕುಮಾರ್ ಅವರಿಗೆ ಆಗಿತ್ತು. ಕಾರ್ಯಕ್ರಮದಲ್ಲಿ ಗಿಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಅಷ್ಟೇ ಅಲ್ಲ ಗಿಲ್ಲಿಯ ಒಂದು ಸಿಗ್‌ನೇಚರ್ ಸ್ಟೆಪ್ಸ್ ಶಿವಣ್ಣ ಮಾಡ್ತಾ ಇದ್ದರು.ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ, ಗಿಲ್ಲಿಯೇ ಗೆಲ್ಲೋದು ಎಂದು ಟೇಬಲ್ ತಟ್ಟಿ ಹೇಳಿದ್ದಾರೆ ಶಿವಣ್ಣ. ಇಷ್ಟೇ ಅಲ್ಲ, ಶಿವರಾಜ್ಕುಮಾರ್ ಅವರು ಗಿಲ್ಲಿಗೆ ಆಲ್ ದಿ ಬೆಸ್ಟ್ ಕೂಡ ಹೇಳಿದ್ದಾರೆ.